Force Citiline: 10 ಆಸನಗಳ ಕೆಪ್ಯಾಸಿಟಿ ಜೊತೆಗೆ 17 Km ಮೈಲೇಜ್, ದೊಡ್ಡ ಕುಟುಂಬಕ್ಕೆ ಬಂತು ಅಗ್ಗದ ದೊಡ್ಡ ಕಾರ್.

ಲೀಟರ್ ಗೆ 17 ಕಿಲೋಮೀಟರ್ ಮೈಲೇಜ್ ಕೊಡುವ 10 ಸಿಟರ್ ಕಾರ್.

Force Citiline 10 Seater Car: ಭಾರತೀಯ ಮಾರುಕಟ್ಟೆಯಲ್ಲಿ ಕಾರ್ ಖರೀದಿಸುವವರ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಅದರಲ್ಲೂ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸುವ ಕಾರಣ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ವಿವಿಧ ಪ್ರತಿಷ್ಠಿತ ಕಂಪನಿಗಳು ಬಿಡುಗಡೆ ಮಾಡುತ್ತಿವೆ.

ಸದ್ಯ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಕಾರ್ ಗಳು ಖರೀದಿಗೆ ಲಭ್ಯವಿದೆ ಎನ್ನಬಹುದು. ಇದೀಗ ಮಾರುಕಟ್ಟೆಯಲ್ಲಿ ಎಲ್ಲಾ ಮಾದರಿಯ ಕಾರ್ ಗಳಿಗೆ ಠಕ್ಕರ್ ನೀಡಲು ನೂತನ ಮಾದರಿಯ ಕಾರ್ ಒಂದು ಮಾರುಕಟ್ಟೆಯಲ್ಲಿ ಪರಿಚಯವಾಗಿದೆ. ಈ ಕಾರ್ ಯಾವುದು? ಎಂದು ಯೋಚಿಸುತ್ತಿದ್ದೀರಾ, ಇಲ್ಲಿದೆ ಈ ಕಾರ್ ನ ಸಂಪೂರ್ಣ ವಿವರ

Force Citiline 10 Seater Car
Image Credit: News18

Force Citiline 10 Seater Car
ಮಾರುಕಟ್ಟೆಯಲ್ಲಿ ನೀವು 7, 8 ಅಥವಾ 9 ಆಸನಗಳಿರುವ ಕಾರ್ ಅನ್ನು ನೋಡಿರಬಹುದು. ಆದರೆ ಇದೀಗ ಶಕ್ತಿಯುತ ಎಂಜಿನ್ ನೊಂದಿಗೆ 10 ಆಸನಗಳನ್ನು ಹೊಂದಿರುವ ಕಾರ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಗ್ಗೆ ಯಾರಿಗಾದರೂ ತಿಳಿದಿದೆಯೇ? ಹೌದು, ಇದೀಗ ದೊಡ್ಡ ಕುಟುಂಬಕ್ಕಾಗಿ ಮಾರುಕಟ್ಟೆಯಲ್ಲಿ ವಿಶೇಷವಾಗಿ 10 ಆಸನಗಳಿರುವ Force Citiline ಕಾರ್ ಪರಿಚಯವಾಗಿದೆ. ಇದೀಗ ಫೋರ್ಸ್ ಮೋಟಾರ್ಸ್ ತನ್ನ ಮೊದಲ 10 ಆಸನಗಳ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. Force Citiline 10 ಆಸನಗಳ ಫೋರ್ಸ್ ಟ್ರಾಕ್ಸ್ ಕ್ರೂಸರ್‌ ನ ನವೀಕರಿಸಿದ ಆವೃತ್ತಿಯಾಗಿದೆ.

10 ಆಸನಗಳ ಕೆಪ್ಯಾಸಿಟಿ ಜೊತೆಗೆ 17 Km ಮೈಲೇಜ್
ಈ ಕಾರ್ ನ ಎಂಜಿನ್ ಬಗ್ಗೆ ಹೇಳುವುದಾದರೆ, ಫೋರ್ಸ್ ಸಿಟಿಲೈನ್ 10 ಸೀಟರ್ ಶಕ್ತಿಯುತ 2.6 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 91hp ಪವರ್ ಮತ್ತು 250 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಅನ್ನು ಎಂಜಿನ್ ನೊಂದಿಗೆ ಜೋಡಿಸಲಾಗಿದೆ. ಫೋರ್ಸ್ ಸಿಟಿಲೈನ್ 63.5 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ ಮತ್ತು ಅದರ ತೂಕ 3140 ಕೆಜಿ.

Force Citiline 10 Seater Car price
Image Credit: Original Source

ಈ MUV ನ ಮುಂಭಾಗದ ವಿನ್ಯಾಸವು ಟಾಟಾ ಸುಮೋದಂತೆ ಕಾಣುತ್ತದೆ. ಈ ಕಾರು ಪ್ರತಿ ಲೀಟರ್‌ ಗೆ 17 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು Force Citiline ನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಉದ್ದ 5120 ಎಂಎಂ, ಅಗಲ 1818 ಎಂಎಂ, ಎತ್ತರ 2027 ಎಂಎಂ ಜೊತೆಗೆ 3050 ಎಂಎಂ ವೀಲ್‌ ಬೇಸ್ ಹೊಂದಿದೆ. ಇನ್ನು ಇದರ ಗ್ರೌಂಡ್ ಕ್ಲಿಯರೆನ್ಸ್ 191 ಎಂಎಂ ಆಗಿದೆ. Force Citiline 2023 ಒಂದೇ ರೂಪಾಂತರದಲ್ಲಿ ಪರಿಚಯಿಸಲಾಗಿದೆ. ಇನ್ನು Force Citiline ಕಾರ್ ನ ಎಕ್ಸ್ ಶೋ ರೂಂ ಬೆಲೆ 15,93,953 ರೂ. ಆಗಿದೆ.

Join Nadunudi News WhatsApp Group

Join Nadunudi News WhatsApp Group