Forest Land: ಇಂತಹ ಜಾಗದಲ್ಲಿ ಮನೆ ಅಥವಾ ಕೃಷಿ, ಅಡಿಕೆ ತೋಟ ಮಾಡಿದವರಿಗೆ ಸಂಕಷ್ಟ, ಅರಣ್ಯ ಇಲಾಖೆಯ ನಿಯಮ.
ಈ ಜಾಗದಲ್ಲಿ ಬದುಕು ಕಟ್ಟಿ ವಾಸ ಮಾಡುತ್ತಿರುವ ಜನರಿಗೆ ಇದೀಗ ಆತಂಕ ಎದುರಾಗಿದೆ.
Forest And Revenue Department Survey: ಇಂದು ರೈತರು ಕೃಷಿಯನ್ನೆ ಅವಲಂಭಿಸಿಕೊಂಡು ಬದುಕುತ್ತಿದ್ದಾರೆ. ಅದರಲ್ಲೂ ರೈತರಿಗೆ ಮುಖ್ಯವಾಗಿ ಬೇಕಾಗಿರುವುದು ಭೂ ಮಾಲೀಕತ್ವ. ತಮ್ಮದೇ ಜಮೀನಾಗಿದ್ದರೆ ಯಾವುದೇ ಭಯ ಇಲ್ಲದೆ ಕೃಷಿ ಮಾಡಬಹುದಾಗಿದೆ. ಅದರೆ ಕೆಲವೊಂದು ಕಡೆ ಅರಣ್ಯೇತರ ಉದ್ದೇಶಗಳಿಗೆ ನೀಡಲಾದ ಜಾಗದಲ್ಲಿ ಮನೆ ಮಾಡಿ ಕೊಂಡವರು ಇದ್ದಾರೆ ಮತ್ತು ಕೃಷಿ ಮಾಡಿ ಬದುಕು ಕಟ್ಟಿಕೊಂಡವರು ಇದ್ದಾರೆ.
ಅರಣ್ಯ ಭೂಮಿಯ ಪೈಕಿ ಶೇಕಡಾ 40ರಷ್ಟು ಭೂಮಿಯನ್ನು ಮರಳಿ ಮೀಸಲು ಅರಣ್ಯವಾಗಿ ಪರಿವರ್ತನೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಈಗ ಬಹಳಷ್ಟು ಸುದ್ದಿ ಮಾಡುತ್ತಿದೆ. ರಾಜ್ಯದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ಸರ್ವೆ ಯಿಂದ ಕಾಡಿನಲ್ಲಿ ಮನೆ ಮಾಡಿ ಕೊಂಡಿರುವ ನೂರಾರು ವರ್ಷಗಳಿಂದ ವಾಸ ಮಾಡುತ್ತಿರುವ ಹಾಗೂ ವ್ಯವಸಾಯ ಮಾಡುತ್ತಿರುವ ಜನರಿಗೆ ಆತಂಕದ ಸ್ಥಿತಿ ಈಗ ಎದುರಾಗಿದೆ.
ಅರಣ್ಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಸಂಘರ್ಷ
ಈಗ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅರಣ್ಯದಂಚಿನ ಗ್ರಾಮಸ್ಥರ ನಡುವಿನ ಸಂಘರ್ಷ ಬಹಳಷ್ಟು ಜೋರಾಗಿದೆ. ಜನರು ಮನೆ ಮಾಡಿದ್ದರೂ ಅವರ ಮನೆ ಮಠ ಎಂದು ಪರಿಗಣೆಸದೇ ಅರಣ್ಯ ಇಲಾಖೆಯವರು ಮನೆ ದಂಸ್ವ ಮಾಡಲು ಮುಂದಾಗಿದ್ದಾರೆ. ಈಗ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು ಸಹ ತಿರುಗಿಬಿದ್ದಿದ್ದಾರೆ. ಭೂಮಿ ಸರ್ವೇಗೆ ಹೋದ ಸಂಧರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿರುವ ಘಟನೆಯು ಸಹ ನಡೆದಿದೆ
ಅರಣ್ಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವಿನ ಸಂಘರ್ಷಕ್ಕೆ ಕ್ರಮ
ಅರಣ್ಯ ಇಲಾಖೆ ಮತ್ತು ಸಚಿವರ ಈ ಕ್ರಮದಿಂದ ಇಂದು ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಶಾಸಕರು ತಿರುಗಿ ಬಿದ್ದಿದ್ದು ಜನರ ಪರಿಸ್ಥಿತಿ ಯ ಬಗ್ಗೆ ವಿವರಿಸಿದ್ದಾರೆ. ಹೀಗೆ ಅರಣ್ಯ ನಿಯಮ ಘೋಷಣೆಯಿಂದ ನಿಯಮಗಳನ್ನು ಹಾಕಿರುವುದರಿಂದ ಕಾಡಿನಲ್ಲಿ ವಾಸ ಮಾಡುವ ಜನರು ಸಂಕಷ್ಟ ಅನುಭವಿಸ್ತಾ ಇದ್ದು, ಮುಖ್ಯಮಂತ್ರಿಗಳಿಗೆ ದೂರು ನೀಡಲು ತೀರ್ಮಾನಿಸಿದ್ದಾರೆ.
ಒಟ್ಟಿನಲ್ಲಿ ಸಂಘರ್ಷ ಗಳು ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ಅರಣ್ಯದಲ್ಲಿ ಬದುಕು ಕಟ್ಟಿ ವಾಸ ಮಾಡ್ತಾ ಇರುವ ಜನರಿಗೆ ಇದೀಗ ಆತಂಕ ಕಾಡಿದೆ. ಮುಂದಿನ ದಿನಗಲ್ಲಿ ಅರಣ್ಯ ಇಲಾಖೆಯಿಂದ ಯಾವ ನಿರ್ಧಾರ ಹೊರಬರುತ್ತದೆ ಎಂದು ಸಾಕಷ್ಟು ಜನರು ಕಾದು ಕುಳಿತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.