Farmers Loan: ಇನ್ನೊಮ್ಮೆ ಮನ್ನಾ ಆಗುತ್ತಾ ರೈತರ ಬ್ಯಾಂಕ್ ಸಾಲ, ರೈತರ ಸಾಲಗಳ ಬಗ್ಗೆ ಸರ್ಕಾರದ ಮಹತ್ವದ ನಿರ್ಧಾರ.

ರೈತರ ಸಾಲದ ಪುನರ್ ರಚನೆಗೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

Farmers Agricultural Loan Update: ಸದ್ಯ ದೇಶದಲ್ಲಿ ರೈತರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ ಎನ್ನಬಹುದು. ರೈತ ದೇಶದ ಬೆನ್ನೆಲುಬಾಗಿದ್ದಾನೆ. ಹಿಗ್ಗಿ ರೈತರಿಗೆ ಮೊದಲ ಆಧ್ಯತೆ ನೀಡಲು ಸರ್ಕಾರ ಮುಂದಾಗುತ್ತದೆ. ಇನ್ನು ಈಗಾಗಲೇ ಸರ್ಕಾರ ರೈತರಿಗೆ ಆರ್ಥಿಕವಾಗಿ ಸ್ಥಿರತೆ ನೀಡಲು ಒಂದಿಷ್ಟು ಯೋಜನೆಯನ್ನು ಕೂಡ ಪರಿಚಯಿಸಿದೆ.

ಅದಲ್ಲದೆ ಪ್ರಧಾನ್ ಮಂತ್ರಿ ಅವರ ಕಿಸಾನ್ ಯೋಜನೆಯಡಿ ರೈತರು ಪ್ರತಿ ವರ್ಷ ಹಣವನ್ನು ಪಡೆಯುತ್ತಿದ್ದಾರೆ. ವಿವಿಧ ಯೋಜನೆಗಳ ಮೂಲಕ ರೈತರಿಗೆ ನೆರವಾಗುತ್ತಿರುವ ಸರಕಾರ ರೈತರ ಸಾಲದ ಬಗ್ಗೆ ಕೊಡ ಗಮನ ಹರಿಸಬೇಕಿದೆ. ಇದೀಗ ರೈತರ ಸಾಲದ ಪುನರ್ ರಚನೆಗೆ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Farmers Agricultural Loan
Image Credit: Fincash

ರಾಜ್ಯದ ರೈತರಿಗಾಗಿ ಸಾಲದ ಪುನರ್ ರಚನೆಗೆ ಮುಂದಾದ ಸರ್ಕಾರ
ಸದ್ಯ ರಾಜ್ಯದಲ್ಲಿ ರೈತರು ಮಳೆಯ ಅಭಾವದಿಂದಾಗಿ ಕಂಗಾಲಾಗಿದ್ದಾರೆ. ರೈತರು ಹೊಲದಲ್ಲಿ ಬೆಳೆಯನ್ನು ಬೆಳೆದಿದ್ದು, ಸಕಾಲದಲ್ಲಿ ಮಳೆ ಬೀಳದೆ ಇರುವುದರಿಂದ ಬಾರಿ ನಷ್ಟವನ್ನು ಎದುರಿಸಬೇಕಾದ ಪರಿಸ್ಥಿತ ರೈತರಿಗೆ ಎದುರಾಗಿದೆ. ರೈತರ ಬೆಳೆಯ ಹಾನಿಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಬರಗಾಲದಿಂದ ರೈತರು ಪಡುತ್ತಿರುವ ಕಷ್ಟಕ್ಕೆ ಸರ್ಕಾರ ಸಹಾಯ ಹಸ್ತ ಚಾಚಬೇಕಿದೆ.

ಬ್ಯಾಂಕುಗಳಿಗೆ ಸಾಲ ಪುನರ್ ರಚನೆಗೆ ಆದೇಶ
ಬರಗಾಲದ ಹಿನ್ನಲೆ ರೈತರು ಅನುಭವಿಸುತ್ತಿರುವ ನಷ್ಟವನ್ನು ಗಮನದಲ್ಲಿಟ್ಟುಕೊಂಡು ರೈತರ ಸಾಲ ಪುನರ್ ರಚಿಸುವಂತೆ ಎಲ್ಲ ಬ್ಯಾಂಕ್ಗಳಿಗೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಬ್ಯಾಂಕ್ ಗಳ ಸಮಿತಿಯ (ಎಸ್ಎಲ್ಬಿಸಿ) ವಿಶೇಷ ಸಭೆಯಲ್ಲಿ ಸರ್ಕಾರ ರೈತರ ಸಾಲ ಪುನರ್ ರಚಿಸುವಂತೆ ಸೂಚನೆ ನೀಡಿದೆ.

Farmers Agricultural Loan Update
Image Credit: Zeebiz

ಬರ ಪೀಡಿತ ಪ್ರದೇಶಗಳಿಗೆ ಪರಿಹಾರ ಕ್ರಮ ಕೈಗೊಂಡ ಸರ್ಕಾರ
ಬರ ಪೀಡಿತ ಪ್ರದೇಶಗಳ ರೈತರಿಗೆ ಬ್ಯಾಂಕ್ ಗಳು ನೀಡುವ ವಿವಿಧ ಪರಿಹಾರ ಕ್ರಮಗಳ ಕುರಿತು ಚರ್ಚಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್ ಅವರು ಸಭೆ ಕರೆದಿದ್ದು, ಸಭೆಯಲ್ಲಿ ರೈತರ ಸಾಲದ ಪುನರ್ ರಚನೆಯ ಬಗ್ಗೆ ಚರ್ಚೆ ನಡೆಸಲಾಗಿದೆ. ಆಯಾ ಇಲಾಖೆಗಳು ಸಲ್ಲಿಸಿದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ನಷ್ಟದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.

Join Nadunudi News WhatsApp Group

ಅರ್ಹ ರೈತರ ಸಾಲವನ್ನು ಪುನರ್ ರಚಿಸಲು ರಾಜ್ಯದ ಎಲ್ಲಾ ಬ್ಯಾಂಕ್ ಗಳಿಗೆ ಸೂಚಿಸಲಾಗಿದೆ. ನಿಗದಿತ ವಾಣಿಜ್ಯ ಬ್ಯಾಂಕ್ ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಿಗೆ ಬರ ಪೀಡಿತ ಪ್ರದೇಶಗಳಿಗೆ ಪರಿಹಾರ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಬಗ್ಗೆ ವರದಿಯಾಗಿದೆ. ಸದ್ಯದಲ್ಲೇ ರಾಜ್ಯದ ರೈತರ ಸಾಲದ ಪುನರ್ ರಚನೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಮೂಲಕ ರೈತರ ಕಷ್ಟಕ್ಕೆ ಪರಿಹಾರ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ.

Join Nadunudi News WhatsApp Group