FOSSiBOT: 108 MP ಕ್ಯಾಮೆರಾ ಮತ್ತು 300 LED ಲೈಟ್ ಇರುವ ಮೊಬೈಲ್ ಬಿಡುಗಡೆ, ಕಡಿಮೆ ಬೆಲೆ ಮತ್ತು ಹಲವು ಫೀಚರ್.

300 LED ಲೈಟ್ ಇರುವ ಆಕರ್ಷಕ ಮೊಬೈಲ್ ಮಾರುಕಟ್ಟೆಗೆ ಲಾಂಚ್ ಆಗಿದೆ.

FOSSiBOT F102: ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಿದೆ. ವಿವಿಧ ಪ್ರತಿಷ್ಠಿತ ಕಂಪನಿಗಳು ಹೊಸ ಹೊಸ ವಿನ್ಯಾಸದ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿವೆ.

ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗಿದ್ದು ಇದೀಗ FOSSiBOT ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಇದೀಗ ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದ್ದು ಗ್ರಾಹಕರಿಗೆ ಹೆಚ್ಚಿನ ಫೀಚರ್ ಸಿಗಲಿದೆ.

Mobile launch with 108 MP camera and 300 LED light
Image Credit: Maloumaweb

FOSSiBOT F102 ಸ್ಮಾರ್ಟ್ ಫೋನ್ (FOSSiBOT F102 Smartphone)
ಕಂಪನಿಯು ಈ ನೂತನ FOSSiBOT F102 ಸ್ಮಾರ್ಟ್ ಫೋನ್ ನಲ್ಲಿ ವಿಶೇಷ ಫೀಚರ್ ಅನ್ನು ಅಳವಡಿಸಿದೆ. ಉತ್ತಮ ಕ್ಯಾಮರಾಗಳ ಜೊತೆಗೆ ವಿಭಿನ್ನ ಫೀಚರ್ ಗಳನ್ನೂ ಅಳವಡಿಸಲಾಗಿದೆ. 108MP ಪ್ರಾಥಮಿಕ ಕ್ಯಾಮರಾವನ್ನು ಇದರಲ್ಲಿ ನೀಡಲಾಗಿದ್ದು, 20MP ಸೆಕೆಂಡರಿ ಮತ್ತು 5MP ಮ್ಯಾಕ್ರೋ ಲೆನ್ಸ್ ಅನ್ನು ನೀಡಿದೆ. ಉತ್ತಮ ಛಾಯಾಗ್ರಹಣಕ್ಕೆ ಈ ಫೋನ್ ಸಹಾಯವಾಗಲಿದೆ.

108 MP ಕ್ಯಾಮೆರಾ ಮತ್ತು 300 LED ಲೈಟ್ ಇರುವ ಮೊಬೈಲ್ ಬಿಡುಗಡೆ
ರಾತ್ರಿ ಸಮಯದಲ್ಲಿ ಫೋಟೋ ಚಿತ್ರೀಕರಣಕ್ಕಾಗಿ ಸೋನಿ IMX350 ಅನ್ನು ನೀಡಲಾಗಿದೆ. ಈ ಫೋನ್ ನ ಕ್ಯಾಮರಾ ಫೀಚರ್ ಜೊತೆಗೆ 45 ಮೀಟರ್ ದೂರದ ಚಿತ್ರಗಳನ್ನು ಬಹಳ ಸ್ಪಷ್ಟವಾಗಿ ತೆಗೆಯಬಹುದಾಗಿದೆ. ಇನ್ನು ಉತ್ತಮ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಸೋನಿ IMX616 ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

FOSSiBOT F102 Smart Phone Price
Image Credit: Technow

ಇನ್ನು 300 LED ಲೈಟ್ ಗಳೊಂದಿಗೆ ಶಕ್ತಿಶಾಲಿ 3W ಅಲ್ಟ್ರಾ ಬ್ರೈಟ್ ಲೈಟ್ ವೈಶಿಷ್ಟ್ಯವನ್ನು ನೀಡಿದೆ. ಇನ್ನು FOSSiBOT F102 ಸ್ಮಾರ್ಟ್ ಫೋನ್ ನಲ್ಲಿ 495 ಲ್ಯೂಮೆನ್ಸ್ ಫುಲ್ ಬ್ರೈಟ್ ನೆಸ್ ಸೌಲಭ್ಯ ಲಭ್ಯವಿದೆ.

Join Nadunudi News WhatsApp Group

FOSSiBOT F102 ಸ್ಮಾರ್ಟ್ ಫೋನ್ ಬೆಲೆ
ಪ್ರೊಸೆಸರ್‌ಗಾಗಿ, ಮೀಡಿಯಾಟೆಕ್ ಹೆಲಿಯೊ ಜಿ99 ಆಕ್ಟಾ-ಕೋರ್ ಪ್ರೊಸೆಸರ್ ನೀಡಲಾಗಿದ್ದು, Android 13 OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್ ಫೋನ್ ಬಳಕೆದಾರರಿಗೆ 12GB + 8GBRAM ಜೊತೆಗೆ 256GB ಸ್ಟೋರೇಜ್ ಸಾಮರ್ಥ್ಯವನ್ನು ನೀಡಿದೆ. ಇನ್ನು 33W ವೇಗದ ಚಾರ್ಜಿಂಗ್ ನೊಂದಿಗೆ 16500 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

FOSSiBOT F102 Smart Phone Price
Image Credit: Gizglobe

ಅತಿ ಕಡಿಮೆ ಸಮಯದಲ್ಲಿ ಈ ಫೋನ್ ಅನ್ನು ಸಂಪೂರ್ಣ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು ಕಂಣಿಯ ಅಧಿಕೃತ ವೆಬ್ ಸೈಟ್ ನಲ್ಲಿ ಈ FOSSiBOT F102 ಸ್ಮಾರ್ಟ್ ಫೋನ್ ಖರೀದಿಗೆ ವಿಶೇಷ ರಿಯಾಯಿತಿ ಲಭ್ಯವಿದೆ. ಆಗಸ್ಟ್ 21 ರಿಂದ 27 ರ ವರೆಗೆ ರಿಯಾಯಿತಿ ಲಭ್ಯವಿದೆ. ಕಂಪನಿಯು ನೀಡಿರುವ ರಿಯಾಯಿತಿಗಳನ್ನು ಬಳಸಿಕೊಂಡು ಕೇವಲ 14,000 ಕ್ಕೆ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.

Join Nadunudi News WhatsApp Group