Ads By Google

Free Aadhaar Update: 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಮತ್ತಷ್ಟು ದಿನ ಉಚಿತ

Old Aadhar card

Image Source: Times Now

Ads By Google

Free Aadhaar Update Date Extend: ಸದ್ಯ UIDAI ಆಧಾರ್ ನವೀಕರಣ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಆನ್ಲೈನ್ ಪೋರ್ಟಲ್ ಗೆ(Online Portal) ಭೇಟಿ ನೀಡುವ ಮೂಲಕ ಬಳಕೆದಾರರು ತಮ್ಮ ಹೆಸರು, ವಿಳಾಸ, ಲಿಂಗ, ಫೋನ್ ಸಂಖ್ಯೆ, ಲಿಂಗ ಮತ್ತು ಇಮೇಲ್ ಇತ್ಯಾದಿಯನ್ನು ಉಚಿತವಾಗಿ ಬದಲಾಯಿಸಬಹುದಾಗಿದೆ.

ಬಳಕೆದಾರರು ತಮ್ಮ ದಾಖಲೆಗಳನ್ನು ಡಿಸೇಂಬರ್ 14 ರೊಳಗೆ ನವೀಕರಿಸುವುದು ಕಡ್ಡಾಯವಾಗಿದ್ದು, ನೀವು ಈ ದಿನಾಂಕದ ನಂತರ ಆಧಾರ್ ನವೀಕರಣವನ್ನು ಮಾಡಿದರೆ ಶುಲ್ಕವನ್ನು ಕಟ್ಟಬೇಕಾಗುತ್ತದೆ ಎನ್ನುವ ಬಗ್ಗೆ ಸುದ್ದಿಗಳು ವೈರಲ್ ಆಗಿದೆ. ಆದರೆ ಸದ್ಯ UIDAI ಉಚಿತ ಆಧಾರ್ ನವೀಕರಣ ದಿನಾಂಕವನ್ನು ಮತ್ತಷ್ಟು ವಿಸ್ತರಿಸಿದೆ. ಇನ್ನು ಕೂಡ ಆಧಾರ್ ನವೀಕರಣ ಮಾಡದವರಿಗೆ UIDAI ಇನ್ನೊಂದು ಅವಕಾಶವನ್ನು ನೀಡಿದೆ. ನೀವು ಇನ್ನಷ್ಟು ತಿಂಗಳುಗಳ ಕಾಲ ಉಚಿತ ಆಧಾರ್ ನವೀಕರಣವನ್ನು ಮಾಡಿಕೊಳ್ಳಬಹುದಾಗಿದೆ.

Image Credit: ABP News

10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಹತ್ತು ವರ್ಷಗಳ ಹಿಂದೆ ಮಾಡಿಸಲಾದ ಆಧಾರ್ ಕಾರ್ಡ್ ನಲ್ಲಿ ವ್ಯಕ್ತಿಯ ಮಾಹಿತಿ ತಪ್ಪಾಗಿರಬಹುದು. ಹೀಗಾಗಿ ತಪ್ಪಾಗಿರುವ ಮಾಹಿತಿ ಸರಿಪಡಿಸುವ ಉದ್ದೇಶದಿಂದ UIDAI ಆಧಾರ್ ನವೀಕರಣವನ್ನು ಕಡ್ಡಾಯಗೊಳಿಸಿದೆ. ಸದ್ಯ UIDAI 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ ನೀಡಿದೆ.

ಉಚಿತ ಆಧಾರ್ ನವೀಕರಣಕ್ಕೆ ಇನ್ನು 3 ತಿಂಗಳು ಬಾಕಿ ಇದೆ
ಇದೀಗ  UIDAI ಆಧಾರ್ ನವೀಕರಣಕ್ಕೆ ಇನ್ನು 3 ತಿಂಗಳುಗಳ ಕಾಲ ಸಮಯಾವಕಾಶವನ್ನು ನೀಡಿದೆ. ಅಂದರೆ December 15 2023 ರಿಂದ March 14 2024 ರ ವರೆಗೆ ನಿಮಗೆ ಉಚಿತ ಆಧಾರ್ ನವೀಕರಣಕ್ಕೆ  ಅವಕಾಶವಿದೆ. ಇನ್ನು ಕೂಡ ಸಾಕಷ್ಟು ಜನರ ಆಧಾರ್ ಕಾರ್ಡ್ ನವೀಕರಣ ಆಗದೆ ಇರುವ ಕಾರಣ UIDAI ಈ ನಿರ್ಧಾರವನ್ನು ಕೈಗೊಂಡಿದೆ. Free Aadhaar Update Date Extend ಮಾಡುವ ಬಗ್ಗೆ UIDAI ಅಧಿಕೃತ ಘೋಷಣೆ ಹೊರಡಿಸಿದೆ.

Image Credit: Digit

ಈ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿಕೊಳ್ಳಿ
*ಮೊದಲು UIDAI ವೆಬ್ ಸೈಟ್ ಗೆ ಭೇಟಿ ನೀಡಬೇಕು.

*UIDAI ವೆಬ್ ಸೈಟ್ ನಲ್ಲಿ ಲಾಗಿನ್ ಆಗಿ ಪಾಸ್ ವರ್ಡ್ ರಚಿಸಬೇಕು.

*ನಂತರ MY AADHAAR ಮೇಲೆ ಟ್ಯಾಬ್ ಮಾಡಿ ಆಧಾರ್ ವಿವರಗಳನ್ನು ನವೀಕರಿಸಿ ನಮೂದಿಸಬೇಕು.

*ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ ಲಾಗಿನ್ ಆಗಬೇಕು.

*ನಂತರ ನೀವು ಬದಲಾವಣೆ ಮಾಡಬೇಕಾದ ವಿವರವನ್ನು ಭರ್ತಿ ಮಾಡಬೇಕು.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in