Bank Free Facilities Account Holders: ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬ ದೇಶದ ನಾಗರೀಕ ಬ್ಯಾಂಕಿನಿಂದ ಕೆಲವು ಸೇವೆ ಉಚಿತವಾಗಿ ಪಡೆದುಕೊಳ್ಳುತ್ತಾನೆ. ಅದೇ ರೀತಿಯಲ್ಲಿ, ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಬ್ಯಾಂಕ್ ನಲ್ಲಿ ಪ್ರತಿ ಗ್ರಾಹಕನಿಗೆ ಕೆಲವು ಮೂಲಭೂತ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ ಕೆಲವರು ಆ ಸೌಲಭ್ಯದ ಅರಿವು ಇಲ್ಲದೆ ಶುಲ್ಕವನ್ನು ಪಾವತಿ ಮಾಡುತ್ತಾರೆ. ನಾವೀಗ ಬ್ಯಾಂಕ್ ನೀಡುವ 5 ಮೂಲಭೂತ ಸೌಕರ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
ಬ್ಯಾಂಕ್ ನೀಡುವ 5 ಮೂಲಭೂತ ಸೌಕರ್ಯಗಳು
* ಆನ್ಲೈನ್ ನಲ್ಲಿ NEFT ಮತ್ತು RTGS ವರ್ಗಾವಣೆ ಉಚಿತ
ನೀವು ಮೊಬೈಲ್ ಬ್ಯಾಂಕಿಂಗ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ NEFT ಅಥವಾ RTGS ಮಾಡಿದರೆ ಅದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. 2020 ರಿಂದಲೂ ಎಲ್ಲಾ ಬ್ಯಾಂಕ್ ಗಳಲ್ಲಿ ಆನ್ಲೈನ್ NEFT / RTGS ಸಂಪೂರ್ಣ ಉಚಿತವಾಗಿದೆ. ಬ್ಯಾಂಕ್ ಬ್ರಾಂಚ್ ಗೆ ಹೋಗಿ ಮಾಡಿದರೆ ಮಾತ್ರ ಕೆಲವೊಮ್ಮೆ ಶುಲ್ಕ ಪಾವತಿಮಾಡಬೇಕು. ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಉಚಿತವಾಗಿ NEFT ಮತ್ತು RTGS ವರ್ಗಾವಣೆ ಮಾಡಬಹುದಾಗಿದೆ.
* ATM ವಹಿವಾಟು
ನಿಮ್ಮ ಬ್ಯಾಂಕ್ ನ ATM ನಲ್ಲಿ ತಿಂಗಳಿಗೆ ಎಷ್ಟು ಬಾರಿ ಬೇಕಾದರೂ ಹಣವನ್ನು ಹಿಂಪಡೆಯಬಹುದಾಗಿದೆ. ಆದರೆ ಇತರ ಬ್ಯಾಂಕ್ ATM ನಲ್ಲಿ ತಿಂಗಳಿಗೆ ಮೊದಲ 5 ವಹಿವಾಟು ಮಾತ್ರ ಉಚಿತವಾಗಿರುತ್ತದೆ. ಆ ನಂತರ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
* SMS ಸೇವೆ ಸಂಪೂರ್ಣ ಉಚಿತ
ಹಿಂದೆ ಕೆಲವು ಬ್ಯಾಂಕ್ ಗಳು ಖಾತೆಯಲ್ಲಿ ಹಣ ಬಂದಾಗ, ಹೋದಾಗ SMS ಗೆ ಶುಲ್ಕವನ್ನು ವಿಧಿಸುತ್ತಿದ್ದವು, ಆದರೆ 2014 ರಿಂದ RBI ಎಲ್ಲಾ SMS ಅಲರ್ಟ್ ಉಚಿತಗೊಳಿಸಿದೆ.
*ಪಾಸ್ ಬುಕ್ ಅನ್ನು ಉಚಿತವಾಗಿ ಎಂಟ್ರಿ ಮಾಡಬಹುದಾಗಿದೆ
ಪಾಸ್ ಬುಕ್ ತೆಗೆದುಕೊಂಡು ಬ್ಯಾಂಕ್ ಗೆ ಹೋಗಿ ಎಂಟ್ರಿ ಮಾಡಿದರೆ ಯಾವುದೇ ಶುಲ್ಕ ಇಲ್ಲ. ತಿಂಗಳಿಗೆ ಎಷ್ಟು ಬಾರಿ ಬೇಕಾದರೂ ಎಂಟ್ರಿ ಮಾಡಬಹುದಾಗಿದೆ. ಇ-ಸ್ಟೇಟ್ಮೆಂಟ್ ಕೂಡ ಉಚಿತವಾಗಿದೆ.
* ಡೆಬಿಟ್ ಕಾರ್ಡ್ ವಾರ್ಷಿಕ ಶುಲ್ಕ ರದ್ದು
ಬೇಸಿಕ್ ಸೇವಿಂಗ್ಸ್ ಖಾತೆ (BSBDA) ಹೊಂದಿದವರಿಗೆ ಮೊದಲ ವರ್ಷದ ಡೆಬಿಟ್ ಕಾರ್ಡ್ ಮತ್ತು ವಾರ್ಷಿಕ ನಿರ್ವಹಣಾ ಶುಲ್ಕ ಉಚಿತವಾಗಿದೆ. RuPay ಕಾರ್ಡ್ ಆಗಿದ್ದರೆ ವಾರ್ಷಿಕ ಶುಲ್ಕವೇ ಇರುವುದಿಲ್ಲ. ಈ ಕಾರಣಗಳಿಂದ ಕೆಲವು ಬ್ಯಾಂಕುಗಳು ಹೆಚ್ಚಾಗಿ ಗ್ರಾಹಕರಿಗೆ ವೀಸಾ ಕಾರ್ಡ್ ಕೊಡುತ್ತವೆ.
ಈ ಎಲ್ಲಾ ಸೇವೆಗಳ ಹೊರತಾಗಿಯೂ ಗ್ರಾಹಕರು ಬ್ಯಾಂಕಿನಿಂದ ಕೆಲವು ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಬ್ಯಾಂಕಿಂಗ್ ನಿಯಮಗಳಿಂದ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ನಾಡುನುಡಿ ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

