Free electricity: ಇಂತವರು ಮುಂದಿನ ತಿಂಗಳ ಕರೆಂಟ್ ಬಿಲ್ ಕಟ್ಟಬೇಕಾಗುತ್ತದೆ, ಇಲಾಖೆಯ ಹೊಸ ನಿಯಮ
ಜುಲೈ 27ರ ಒಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯ ಎಂದು ಗೃಹ ಜ್ಯೋತಿ ಯೋಜನೆ (Gruha Jyothi Yojana) ಗೆ ಸಂಬಂಧಪಟ್ಟ ಹಾಗೆ ಇಂಧನ ಇಲಾಖೆ ಮಾಹಿತಿಯನ್ನು ಬಿಡುಗಡೆ ಮಾಡಿದೆ.
ಸರ್ಕಾರದ ಗ್ಯಾರಂಟಿ ಭರವಸೆಗಳಲ್ಲಿ ಒಂದಾದ 200 ಯುನಿಟ್ ವಿದ್ಯುತ್ ಉಚಿತವಾಗಿ ಜನರಿಗೆ ನೀಡುವ ಯೋಜನೆಯ ಲಾಭವನ್ನು ಅರ್ಹ ಗ್ರಾಹಕರು ತ್ವರಿತವಾಗಿ ಪಡೆದುಕೊಳ್ಳಲು ಸರ್ಕಾರ ತಿಳಿಸಿದೆ.ಯಾರೆಲ್ಲಾ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೋ ಅವರು ಇದೇ ತಿಂಗಳ 27 ನೇ ತಾರೀಖಿನ ಒಳಗೆ ತಮ್ಮ ಹೆಸರುಗಳನ್ನ ನೋಂದಾಯಿಸಿಕೊಳ್ಳಬೇಕುಇಲ್ಲದೇ ಇದ್ದಲ್ಲಿ ಆಗಸ್ಟ್ ತಿಂಗಳ ವಿದ್ಯುತ್ ಬಿಲ್ ನ್ನು ಪಾವತಿಸಬೇಕಾಗುತ್ತದೆ.
ಜುಲೈ 27ರ ಒಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯ ಎಂದು ಗೃಹ ಜ್ಯೋತಿ ಯೋಜನೆ (Gruha Jyothi Yojana) ಗೆ ಸಂಬಂಧಪಟ್ಟ ಹಾಗೆ ಇಂಧನ ಇಲಾಖೆ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ಮಾತನಾಡಿದ ಸಚಿವ ಎ.ಜೆ ಜಾರ್ಜ್ ಅವರು ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಅಪ್ ಡೇಟ್ ನೀಡಿದ್ದಾರೆ. ಗೃಹ ಜೋತಿ ಯೋಜನೆಯ ಅಡಿಯಲ್ಲಿ ಮನೆಯ ವಿದ್ಯುತ್ ಬಿಲ್ (Electricity Bill) ಸೊನ್ನೆ ಆಗಬೇಕು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪ್ರಯೋಜನ ಪಡೆಯಬೇಕು ಅಂದರೆ ಜುಲೈ 27ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದಿದ್ದಾರೆ.
ಆದರೆ ಇದು ಗೃಹಜ್ಯೋತಿ ಯೋಜನೆ (Gruha Jyothi Yojana) ಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವಲ್ಲ. ಜುಲೈ 22ರ ನಂತರವೂ ಅರ್ಜಿ ಸಲ್ಲಿಸಬಹುದು. ಆದರೆ ಅಗಸ್ಟ್ ತಿಂಗಳ ವಿದ್ಯುತ್ ಬಿಲ್ Electricity Bill ಕಟ್ಟದೇ ಇರಬೇಕಾದರೆ ಅಂದರೆ ಅಗಸ್ಟ್ ತಿಂಗಳಿನಲ್ಲಿ ನಿಮಗೆ ವಿದ್ಯುತ್ ಬಿಲ್ (Electricity Bill) ಸೊನ್ನೆ / ಫ್ರೀ ಆಗಬೇಕು ಎಂದರೆ ನೀವು 27 ಜುಲೈ 2023ರ ಒಳಗೆ ಅರ್ಜಿ ಸಲ್ಲಿಸಬೇಕು.
ಗೃಹ ಜೊತೆ ಯೋಜನೆಯ ಅಡಿ ಜೂನ್ 18 ರಿಂದಲೇ ಅರ್ಜಿ ಸಲ್ಲಿಸಲು ಸರ್ಕಾರ ಆಹ್ವಾನ ನೀಡತ್ತು. ಇನ್ನು 200 ಯುನಿಟ್ ವರೆಗಿನ ಉಚಿತ ವಿದ್ಯುತ್ ಪ್ರಯೋಜನವನ್ನು ಪಡೆದುಕೊಳ್ಳಲು ಈಗಾಗಲೇ ಕೋಟ್ಯಾಂತರ ಜನ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ ಇನ್ನು ಕೆಲವರು ಸಲ್ಲಿಸಬೇಕಿದೆ. ನೀವು ಯೋಜನೆಯ ಅಡಿಯಲ್ಲಿ ಇನ್ನು ಅರ್ಜಿ ಸಲ್ಲಿಸದಿದ್ದರೆ https://sevasindhugs.karnataka.gov.in/ ಈ ವೆಬ್ಸೈಟ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಜುಲೈ 27ರ ಒಳಗೆ ಅರ್ಜಿ ಸಲ್ಲಿಸಿದವರು ಜುಲೈ ವಿದ್ಯುತ್ ಬಿಲ್ಲನ್ನು ಕಟ್ಟಬೇಕಾಗುತ್ತದೆ. ಜುಲೈ 27ರ ಒಳಗೆ ಅರ್ಜಿ ಸಲ್ಲಿಸಿದೆ ಇದ್ದಲ್ಲಿ ಮುಂದೆಯೂ ಸಲ್ಲಿಸಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಗಸ್ಟ್ ತಿಂಗಳ ಬಿಲ್ ನ್ನು ಕೂಡ ಪಾವತಿಸಬೇಕು. ಹಾಗಾಗಿ ವೇಗವಾಗಿ ಅರ್ಜಿ ಸಲ್ಲಿಸಿದಷ್ಟು ಒಂದು ತಿಂಗಳ ವಿದ್ಯುತ್ ಬಿಲ್ ಉಳಿತಾಯ ಮಾಡಬಹುದು.