PMUY: ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಕೇಂದ್ರದಿಂದ ಇನ್ನೊಂದು ದೀಪಾವಳಿ ಗಿಫ್ಟ್, ಉಚಿತವಾಗಿ ಗ್ಯಾಸ್ ತುಂಬಿಸಿಕೊಳ್ಳಿ.

ಕೇಂದ್ರ ಸರ್ಕಾರ ಉಚಿತ ಗ್ಯಾಸ್ ಸಿಲಿಂಡರ್ ರಿಫಿಲ್ಲಿಂಗ್ ಸೌಲಭ್ಯವನ್ನು ನೀಡುವ ಮೂಲಕ ದೀಪಾವಳಿ ಉಡುಗೊರೆ ನೀಡಲು ಮುಂದಾಗಿದೆ.

Free Gas Cylinder Re-Filling: Pradhan Mantri Ujjwala ಯೋಜನೆಯಡಿ BPL Ration card ಹೊಂದಿರುವವರಿಗೆ ಗ್ಯಾಸ್ ಸಿಲಿಂಡರ್ ಗಳ ಮೇಲೆ 200 ರೂ. ಸಬ್ಸಿಡಿಯನ್ನು ಸರ್ಕಾರ ಘೋಷಿಸಿದೆ. ಈ ಯೋಜನೆಯಡಿ ದೇಶದ ಬಡ ಜನತೆ ಸಬ್ಸಿಡಿ ದರದಲ್ಲಿ Gas Cylinder ಅನ್ನು ಪಡೆಯುತ್ತಿದ್ದಾರೆ. ಇದರ ಜೊತೆಗೆ ಈ ಯೋಜನೆಯಡಿ ಕೇಂದ್ರವು ದೇಶದಲ್ಲಿ 75 ಲಕ್ಷ ಹೊಸ LPG ಸಂಪರ್ಕವನ್ನು ಘೋಷಿಸಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 75 ಲಕ್ಷ ಬಡ ಕುಟುಂಬಗಳಿಗೆ ಉಚಿತ LPG ಸಂಪರ್ಕ ನೀಡುವಂತೆ ಕೇಂದ್ರದ ಮೋದಿ ಸರ್ಕಾರ ನಿರ್ಧರಿಸಿದೆ. ಇದೀಗ PMUY ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಸದ್ಯ ಕೇಂದ್ರ ಸರಕಾರ PMU ಯೋಜನೆಯ ಫಲಾನುಭವಿಗಳಿಗೆ ದೀಪಾವಳಿ ಗಿಫ್ಟ್ ನೀಡಲು ಸರ್ಕಾರ ಮುಂದಾಗಿದೆ.

Free Gas Cylinder Re-Filling
Image Credit: India TV

PM ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಕೇಂದ್ರದಿಂದ ದಿವಾಲಿ ಗಿಫ್ಟ್
ಜನರು ಪ್ರತಿ ತಿಂಗಳ ಆರಂಭದಲ್ಲಿ ಗಾಸ್ ಸಿಲಿಂಡರ್ ಬೆಲೆಯ ಇಳಿಕೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಆದರೆ November ತಿಂಗಳಿನಲ್ಲಿ ಕೂಡ Gas Cylinder ಬೆಲೆಯಲ್ಲಿ 103 ರೂ. ಏರಿಕೆ ಕಂಡು ಬಂದಿದೆ.

ಇನ್ನು ಕೇಂದ್ರ ಸರ್ಕಾರ ಜನತೆಗೆ ಗ್ಯಾಸ್ ಬೆಲೆಯ ಏರಿಕೆಯಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು Pradhan Mantri Ujjwala ಯೋಜನೆಯನ್ನು ಪ್ರಾರಂಭಿಸಿತ್ತು. ಈ ಯೋಜನೆಯಲ್ಲಿ ಅರ್ಹ ಫಲಾನುಭವಿಗಳು ಸಬ್ಸಿಡಿ 200 ರೂ. ಮೂಲಕ ಗಾಸ್ ಸಿಲಿಂಡರ್ ಅನ್ನು ಪಡೆಯುತ್ತಿದ್ದಾರೆ. ಸದ್ಯ ಇದೀಗ ಕೇಂದ್ರ ಸರ್ಕಾರ ಈ ಯೋಜನೆಯ ಫಲಾನುಭವಿಗಳಿಗೆ ದೀಪಾವಳಿ ಹಬ್ಬದ ಉಡುಗೊರೆ ನೋಡಲು ಮುಂದಾಗಿದೆ.

Free Gas Cylinder
Image Credit: Navbharattimes

ಕೇಂದ್ರದಿಂದ ಉಚಿತ ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಸೌಲಭ್ಯ
ಸದ್ಯ ಕೇಂದ್ರ ಸರ್ಕಾರ PMU ಯೋಜನೆಯ ಫಲಾನುಭವಿಗಳಿಗೆ ನವೆಂಬರ್ ಮತ್ತು ಡಿಸೇಂಬರ್ ನಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ರಿಫಿಲ್ಲಿಂಗ್ ಸೌಲಭ್ಯವನ್ನು ನೀಡುವ ಮೂಲಕ ದೀಪಾವಳಿ ಉಡುಗೊರೆ ನೀಡಲು ಮುಂದಾಗಿದೆ. ಸಿಲಿಂಡರ್ ಮರುಪೂರಣಕ್ಕೆ ಮಾಡಿದ ವೆಚ್ಚದ ಮೊತ್ತವನ್ನು ಉಜ್ವಲ ಯೋಜನೆಯ ಫಲಾನುಭವಿಗಳ ಖಾತೆಗೆ ನೇರವಾಗಿ ಕಳುಹಿಸಲಾಗುತ್ತದೆ ಎಂದು ಕೇಂದ್ರದಿಂದ ಮಾಹಿತಿ ಲಭಿಸಿದೆ.

Join Nadunudi News WhatsApp Group

ಅರ್ಹ ಫಲಾನುಭವಿಗಳು ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಕೊಂಡರೆ ಯೋಜನೆಯ ಲಾಭವನ್ನು ಪಡೆಯಬಹುದು. ಬ್ಯಾಂಕ್ ಖಾತೆಯನ್ನು ನವೀಕರಿಸದಿದ್ದರೆ ನೀವು ಸರ್ಕಾರದ ಉಚಿತ ರಿಫಿಲ್ಲಿಂಗ್ ಸೌಲಭ್ಯದಿಂದ ವಂಚಿತರಾಗುತ್ತೀರಿ.

Join Nadunudi News WhatsApp Group