Free Gas Cylinder: PM ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್, ಹೋಳಿ ಹಬ್ಬದಂದು ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್.

ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಹೋಳಿ ಹಬ್ಬದಂದು ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್.

Free Gas Cylinder Will Be Available On Holi Festival: ಪ್ರಸ್ತುತ ದೇಶದಲ್ಲಿ Gas cylinder ಗಳ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎನ್ನಬಹುದು. Gas ಬೆಲೆಯ ಏರಿಕೆಗೆ ಬ್ರೇಕ್ ಹಾಕಲು ಕೇಂದ್ರದ ಮೋದಿ ಸರ್ಕಾರ ವಿಶೇಷವಾಗಿ PM Ujjwala ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ ಈಗಾಗಲೇ ದೇಶದ ಕೋಟ್ಯಾಂತರ ಜನ ಅರ್ಹರು ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯುತ್ತಿದ್ದಾರೆ. ಸದ್ಯ ಈ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಹೊರಬಿದ್ದಿದೆ.

UP Govt Free Gas Cylinder
Image Credit: Patrika

PM ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್
ಇನ್ನು 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಜ್ವಲ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯಡಿ 9 ಕೋಟಿಗೂ ಹೆಚ್ಚು ಜನರಿಗೆ ಉಚಿತ LPG ಸಂಪರ್ಕ ನೀಡಲಾಗಿದೆ. ಸದ್ಯ ಈ ರಾಜ್ಯ ಸರ್ಕಾರದಿಂದ PM ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಹೌದು ಈ ದಿನದಂದು PM ಉಜ್ವಲ ಯೋಜನೆಯ ಫಲಾನುಭವಿಗಳು ಯಾವುದೇ ಹಣವನ್ನು ನೀಡದೆ ಗ್ಯಾಸ್ ಸಿಲಿಂಡರ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಹೋಳಿ ಹಬ್ಬದಂದು ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್
ಕಳೆದ ವರ್ಷ ನವೆಂಬರ್‌ ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ರಾಜ್ಯದ 1.75 ಕೋಟಿ ಅರ್ಹ ಕುಟುಂಬಗಳಿಗೆ ಉಚಿತ LPG ಸಿಲಿಂಡರ್ ವಿತರಿಸುವ ಅಭಿಯಾನವನ್ನು ಪ್ರಾರಂಭಿಸಿದ್ದರು. ವರ್ಷಕ್ಕೆ ಎರಡು ಬಾರಿ ದೀಪಾವಳಿ ಮತ್ತು ಹೋಳಿಯ ಸಮಯದಲ್ಲಿ ಉಚಿತ LPG ಸಿಲಿಂಡರ್‌ ಗಳನ್ನು ನೀಡಲು ಸರ್ಕಾರ ಯೋಜಿಸಿದೆ. ಸದ್ಯ ಈ ಯೋಜನೆ UP ಯಲ್ಲಿ ಜಾರಿಯಲ್ಲಿ ಇದ್ದು ಉತ್ತರ ಪ್ರದೇಶದ ಜನರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.

Free Gas Cylinder Will Be Available On Holi Festival
Image Credit: Linkedin

ಈ ಯೋಜನೆಯಡಿ, ನವೆಂಬರ್‌ ನಲ್ಲಿ ದೀಪಾವಳಿಯ ಸಮಯದಲ್ಲಿ LPG ಸಿಲಿಂಡರ್‌ ಗಳನ್ನು ನೀಡಲಾಗಿದೆ. ಇದೀಗ ಹೋಳಿ ಹಬ್ಬದಂದು ಫಲಾನುಭವಿಗಳಿಗೆ ಈ ಉಡುಗೊರೆ ಸಿಗಲಿದೆ. ಹೀಗಾಗಿ ಉತ್ತರ ಪ್ರದೇಶದ ಜನತೆಗೆ ಹೋಳಿ ಹಬ್ಬದಂದು ಉಚಿತವಾಗಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಭಾವುದಾಗಿದೆ.

Join Nadunudi News WhatsApp Group

Join Nadunudi News WhatsApp Group