Free Hit Rule: ಕ್ರಿಕೆಟ್ ಫ್ರೀ ಹಿಟ್ ನಿಯಮದಲ್ಲಿ ಹೊಸ ರೂಲ್ಸ್, ಫ್ರೀ ಹಿಟ್ ನಲ್ಲಿ ಐತಿಹಾಸಿಕ ಬದಲಾವಣೆ ಜಾರಿಗೆ.

ನೋ ಬೌಲ್ ಫ್ರೀ ಹಿಟ್ ನಿಯಮದಲ್ಲಿ ಈಗ ಬದಲಾವಣೆಯನ್ನ ಜಾರಿಗೆ ತರಲಾಗಿದೆ.

No Bowl Free Hit Rules Changes: ಸಾಮಾನ್ಯವಾಗಿ ಎಲ್ಲರು ಕ್ರಿಕೆಟ್ (Cricket) ಅನ್ನು ಇಷ್ಟಪಡುತ್ತಾರೆ. ಪ್ರಸ್ತುತ ಐಪಿಎಲ್ ನ ಹದಿನಾರನೇ ಆವೃತ್ತಿ ನಡೆಯುತ್ತಿದೆ. ಇನ್ನು ಈ ಬಾರಿಯ ಕ್ರಿಕೆಟ್ ಟೂರ್ನಿ ಕ್ರಿಕೆಟ್ ಪ್ರಿಯರನ್ನು ಸೆಳೆಯುತ್ತಿದೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕ್ರಿಕೆಟ್ ನ ನಿಯಮದಲ್ಲಿ ಹೊಸ ಬದಲಾವಣೆಯನ್ನು ಜಾರಿಗೆ ತಂದಿದೆ. ಫ್ರೀ ಹಿಟ್ ನಿಯಮದಲ್ಲಿ ಹೊಸ ನಿಯಮ ಜಾರಿಗೊಳಿಸಲು ಐಸಿಸಿ ನಿರ್ಧರಿಸಿದೆ.

ಕ್ರಿಕೆಟ್ ಫ್ರೀ ಹಿಟ್ ನಿಯಮದಲ್ಲಿ ಹೊಸ ರೂಲ್ಸ್
ಫ್ರೀ ಹಿಟ್ ನಿಯಮದಲ್ಲಿ ಐತಿಹಾಸಿಕ ಬದಲಾವಣೆಯನ್ನು ಜಾರಿಗೆ ತರಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ  (ICC)  ಕ್ರಿಕೆಟ್ ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಜಾರಿಗೊಳಿಸಿದೆ. ಫ್ರೀ ಹಿಟ್ ನಿಯಮದಲ್ಲಿನ ಬದಲಾವಣೆ ಬ್ಯಾಟ್ಸ್ ಮೆನ್ ಗಳಿಗೆ ಮತ್ತಷ್ಟು ಪ್ರಯೋಜನವಾಗಲಿದೆ.

No Bowl Free Hit Rules Changes
Image Source: India Today

ಫ್ರೀ ಹಿಟ್ ಹೊಸ ನಿಯಮದ ಬಗ್ಗೆ ಮಾಹಿತಿ
ಫ್ರೀ ಹಿಟ್ ನಿಯಮದಲ್ಲಿನ ಐತಿಹಾಸಿಕ ಬದಲಾವಣೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಫ್ರೀ ಹಿಟ್ ನ ಹೊಸ ನಿಯಮದ ಪ್ರಕಾರ, ಚೆಂಡು ಫ್ರೀ ಹಿಟ್ ನಲ್ಲಿ ಸ್ಟಂಪ್‌ ಗೆ ಬಡಿದು ಬ್ಯಾಟ್ಸ್ ಮ್ಯಾನ್ ರನ್ ತಗೆದುಕೊಂಡರೆ, ಆ ರನ್ ಬ್ಯಾಟ್ಸ್ ಮೈನ್ ಖಾತೆಯಲ್ಲಿ ಸೇರಿಸಲಾಗುತ್ತದೆ. ಈಗ ಹೆಚ್ಚುವರಿ ರನ್ ಗಳ ಖಾತೆಗೆ ಫ್ರೀ ಹಿಟ್ ರನ್ ಗಳನ್ನೂ ಸೇರಿಸಲಾಗುವುದಿಲ್ಲ.

ಬಾಲ್ ಫ್ರೀ ಹಿಟ್ ನಲ್ಲಿ ಸ್ಟಂಪ್‌ ಗೆ ಬಡಿದರೆ ಮತ್ತು ಬ್ಯಾಟ್ಸ್ ಮ್ಯಾನ್ ಅದರ ಮೇಲೆ ರನ್ ಗಳಿಸಿದರೆ, ಅದನ್ನು ಸ್ಕೊರ್ ಗೆ ಸೇರಿಸಲಾಗುತ್ತದೆ. ಅಂದರೆ ಬ್ಯಾಟ್ಸ್ ಮ್ಯಾನ್ ಫ್ರೀ ಹಿಟ್ ನಲ್ಲಿ ಬೌಲ್ಡ್ ಮಾಡಿದರು ರನ್ ಗಳಿಸಬಹುದು. ಈಗ ಎಲ್ಲ ರನ್ ಗಳು ಬ್ಯಾಟ್ಸ್ ಮ್ಯಾನ್ ಗಳ ಖಾತೆಗೆ ಸೇರುತ್ತದೆ.

ಇನ್ನು ಅಪಾಯಕಾರಿ ಸಮಯದಲ್ಲಿ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇನ್ನು ಈ ಹೊಸ ನಿಯಮಗಳು ಜೂನ್ 1, 2023 ರಿಂದ ಇಂಗ್ಲೆಂಡ್ ಮತ್ತು ಐರಲೇಂಡ್ ನಡುವೆ ಲಾರ್ಡ್ಸ್ ನಲ್ಲಿ ನಡೆಯಲಿರುವ ಪಂದ್ಯದಿಂದ ಅನ್ವಯವಾಗುತ್ತದೆ.

Join Nadunudi News WhatsApp Group

No Bowl Free Hit Rules Changes
Image Source: Vijay karnataka

Join Nadunudi News WhatsApp Group