Free Power: ಗ್ರಹಜ್ಯೋತಿ ಯೋಜನೆಯಲ್ಲಿ ಹೊಸ ಬದಲಾವಣೆ, ಇಂತವರಿಗೂ ಸಿಗಲಿದೆ 250 ಯೂನಿಟ್ ಉಚಿತ ವಿದ್ಯುತ್
ಉಚಿತ ಕರೆಂಟ್ ಬೆನ್ನಲ್ಲೇ ಇನ್ನೊಂದು ಘೋಷಣೆ ಮಾಡಿದ ಸರ್ಕಾರ.
Free Power Scheme For Weavers: ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಯನ್ನು ಘೋಷಣೆ ಮಾಡಿತ್ತು. ಅದರಲ್ಲಿ ಈಗಾಗಲೇ 4 ಯೋಜನೆಗಳು ಚಾಲನೆಯಲ್ಲಿದೆ, ಇನ್ನೊಂದು ಯೋಜನೆಯಾದ ಯುವ ನಿಧಿ ಸದ್ಯದಲ್ಲೇ ಜಾರಿಯಾಗಲಿದೆ ಎಂದು CM ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳಲ್ಲಿ ಉಚಿತ ವಿದ್ಯುತ್ ಕೂಡ ಒಂದಾಗಿದೆ. ಈ ಯೋಜನೆಯಿಂದ ಫಲಾನುಭವಿಗಳು ಉಚಿತ ವಿದ್ಯುತ್ ಸೌಲಭ್ಯ ವನ್ನು ಪಡೆಯುತ್ತಿದ್ದಾರೆ. ಇದೀಗ ಗೃಹಜ್ಯೋತಿ ಯೋಜನೆ ಆರಂಭವಾದ ಬೆನ್ನಲ್ಲೆ ರಾಜ್ಯದ ನೇಕಾರರಿಗೆ ಕಾಂಗ್ರೆಸ್ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ನೇಕಾರರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ
ಹೌದು ಇದೀಗ ಕಾಂಗ್ರೆಸ್ ಸರ್ಕಾರ ರಾಜ್ಯದ ನೇಕಾರರಿಗೆ 250 ಯೂನಿಟ್ ಉಚಿತ ವಿದ್ಯುತ್ ನಿಡುದಾಗಿ ಘೋಷಣೆ ಹೊರಡಿಸಿದೆ. ಇದರಿಂದ ರಾಜ್ಯದ ಸುಮಾರು ನೇಕಾರ ಕುಟುಂಬಗಳಿಗೆ ಉಪಯೋಗ ಆಗಲಿದೆ. ನೇಕಾರರಿಗೆ ಸರ್ಕಾರ ದಸರಾ ಹಾಗೂ ದೀಪಾವಳಿ ಗಿಫ್ಟ್ ನೀಡಿದೆ ಎಂದು ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ರಾಜ್ಯದ ನೇಕಾರರಿಗೆ 250 ಯೂನಿಟ್ ಉಚಿತ ವಿದ್ಯುತ್
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು 35 ರಿಂದ 40 ಸಾವಿರ ನೇಕಾರರ ಕುಟುಂಬಗಳಿಗೆ ಉಚಿತ ವಿದ್ಯುತ್ ನಿಡುದಾಗಿ ಮಾಹಿತಿ ನೀಡಿದ್ದಾರೆ.
ಈ ಯೋಜನೆ ಅನುಷ್ಠಾನಕ್ಕೆ 2129 ರಿಂದ 2149 ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ದೊಡ್ಡ ನೇಕಾರರಿಗೆ 500 ಯುನಿಟ್ ವರೆಗೆ 71 .25 ರಂತೆ ರಿಯಾಯಿತಿ ದರದಲ್ಲಿ ದ್ಯುತ್ ಪೂರೈಕೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ 1 ರಿಂದ 10 ರಷ್ಟು HP ಹೊಂದಿದ ನೇಕಾರರು ಶೇ .80 ರಷ್ಟು ಇದ್ದಾರೆ. ದೊಡ್ಡ ನೇಕಾರರು ಶೇಜಕದ 20 ರಷ್ಟು ಇದ್ದಾರೆ.