Ration Distribution: BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, ಹೊಸ ಯೋಜನೆ ಜಾರಿ.

BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್

Free Ration Distribution In June: ಜನಸಾಮಾನ್ಯರಿಗಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಸೌಲಭ್ಯವನ್ನು ನೀಡಿದೆ. ದೇಶದ ಬಡವರಿಗಾಗಿ ಹಲವಾರು ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಸರ್ಕಾರದ ಅನೇಕ ಯೋಜನೆಗಳು ಬಡ ನಾಗರಿಕರಿಗೆ ಉಪಯೋಗವಾಗಿದೆ.

ಇನ್ನು ದೇಶದಲ್ಲಿನ ಬಡ ಜನರಿಗಾಗಿ ಸರ್ಕಾರ ಪಡಿತರ ವಿತರಣೆ ಯೋಜನೆನ್ನು ಜಾರಿಗೊಳಿಸಿತ್ತು. ಇದರಿಂದಾಗಿ ಅದೆಷ್ಟೋ ಬಡ ಜನರು ಕಡಿಮೆ ದರದಲ್ಲಿ ಪಡಿತರನ್ನು ಪಡೆಯುತ್ತಿದ್ದರು. ಇದೀಗ ಪಡಿತರ ಚೀಟಿದಾರರಿಗೆ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬಡ ನಾಗರೀಕರಿಗಾಗಿ ಸರ್ಕಾರ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ.

Free Ration Distribution In June
Image Credit: Live Mint

BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಜೂನ್ ತಿಂಗಳಿನಿಂದ ಜಾರಿಗೆ ಬರುವಂತೆ ಪಡಿತರ ಧಾನ್ಯಗಳನ್ನು ವಿತರಿಸಲಾಗಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡ್‌ ಗೆ 21 ಕೆಜಿ ಅಕ್ಕಿ, ಕಾರ್ಡ್‌ ಗೆ 14 ಕೆಜಿ ರಾಗಿ, 3 ಕೆಜಿ ಅಕ್ಕಿ ಮತ್ತು 2 ಕೆಜಿ ರಾಗಿಯನ್ನು ಆದ್ಯತಾ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸಲಾಗುವುದು. ಪಡಿತರ ಚೀಟಿದಾರರಿಗೆ ಸರ್ಕಾರದ ಖಾತರಿ ಯೋಜನೆಯಡಿ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಜೂನ್ ನಲ್ಲಿ ಉಚಿತ ಪಡಿತರ ಜೊತೆಗೆ ಫಲಾನುಭವಿಗಳು ಹೆಚ್ಚುವರಿ ಅಕ್ಕಿಯ ಹಣವನ್ನು ಕೂಡ ಪಡೆಯಲಿದ್ದಾರೆ.

ಇಂತವರಿಗೆ ಸಿಗಲಿದೆ ಹೊಸ BPL ಕಾರ್ಡ್
ಹೊಸ ಪಡಿತರ ಚೀಟಿಗಾಗಿ 2.95 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಈ ಅಪ್ಲಿಕೇಶನ್‌ ಗಳಲ್ಲಿ, ಕ್ಯಾನ್ಸರ್, ಮೂತ್ರಪಿಂಡ, ಹೃದಯ ಸಮಸ್ಯೆಗಳು ಮತ್ತು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರೂ ಇದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬಿಪಿಎಲ್ ಕಾರ್ಡ್ ಪ್ರಮುಖ ದಾಖಲೆಯಾಗಿದ್ದು, ಅಂತಹವರಿಗೆ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ವಿತರಿಸಲು ನಿರ್ಧರಿಸಿದ್ದು, ಶೀಘ್ರದಲ್ಲಿಯೇ ಕಾರ್ಡ್ ವಿತರಿಸಲಾಗುವುದು ಎಂದು ತಿಳಿದುಬಂದಿದೆ.

ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಹೊಸ ರೇಷನ್ ಕಾರ್ಡ್ ಅನ್ನು ಪಡೆಯಲು ಇನ್ನು ಹೆಚ್ಚು ಸಮಯ ಕಾಯಬೇಕಾಗಿದೆ. ಈ ತಿಂಗಳಿನಲ್ಲಿ ಕ್ಯಾನ್ಸರ್, ಕಿಡ್ನಿ, ಹೃದಯ ಮತ್ತಿತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೊಸದಾಗಿ ಬಿಪಿಎಲ್ ನೀಡಲು ಆಹಾರ ಇಲಾಖೆ ಸಿದ್ಧವಾಗಿದೆ.

Join Nadunudi News WhatsApp Group

Free Ration Distribution
Image Credit: Patrika

Join Nadunudi News WhatsApp Group