Free Sewing Machine: ಸರ್ಕಾರದಿಂದ ಇಂತಹ ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ, ಈ ದಾಖಲೆ ಕೊಟ್ಟು ಅರ್ಜಿ ಸಲ್ಲಿಸಿ
ಮಹಿಳೆಯರೇ ನಿಮಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ, ಮಹಿಳೆಯರಿಗಾಗಿ ಇನ್ನೊಂದು ಯೋಜನೆ
Free Sewing Machine Scheme 2024: ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಪರಿಚಯಿಸಲಾಗಿದೆ. ಈ ಯೋಜನೆಗಳು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಬಹಳ ಅನುಕೂಲಕರ ಆಗಿದೆ. ಹಲವು ರೀತಿಯಿಂದ ಮಹಿಳೆಯರು ತಮ್ಮ ಜೀವನವನ್ನು ಕಟ್ಟಿಕೊಳ್ಳಬಹುದಾಗಿದೆ, ಆರ್ಥಿಕವಾಗಿ ಪ್ರಬಲರಾಗಲು ಹಲವು ರೀತಿಯ ವ್ಯವಸ್ಥೆಯನ್ನು ಸರಕಾರ ಮಾಡಿದೆ. ಹೌದು ಈ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಅರ್ಜಿ ಕರೆಯಲಾಗಿದ್ದು ಮಹಿಳೆಯರು ಅಗತ್ಯ ಮಾಹಿತಿಯ ಜೊತೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ
ಗ್ರಾಮೀಣ ಹಾಗು ನಗರ ಭಾಗದಲ್ಲಿ ವಾಸಿಸುವ ಮಹಿಳೆಯರು ಸ್ವಉದ್ಯೋಗ ಮಾಡಲು ಸಹಾಯವಾಗುವಂತೆ ಈ ಯೋಜನೆಯನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ. ಈ ಯೋಜನೆಯಡಿ ಕೈಗಾರಿಕೆ ಹಾಗು ವಾಣಿಜ್ಯ ಇಲಾಖೆಯಿಂದ ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಲು ಸರಕಾರ ಅರ್ಜಿ ಆಹ್ವಾನಿಸಿದ್ದು, ಅರ್ಹ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಹಾಕಲು ಬೇಕಾಗಿರುವ ದಾಖಲೆಗಳು
ಸರ್ಕಾರದಿಂದ ಸಿಗುವ ಉಚಿತ ಹೊಲಿಗೆ ಯಂತ್ರ ಪಡೆಯಲು ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ, ಶೈಕ್ಶಣಿಕ ಪ್ರಮಾಣ ಪತ್ರ, ಜನ್ಮ ದಿನಾಂಕ ನಮೂದಿಸಿದ ದಾಖಲೆ ಪತ್ರ (10ನೇ ತರಗತಿ ಅಂಕ ಪತ್ರ ಇತ್ಯಾದಿ) , ಪಾಸ್ ಪೋರ್ಟ್ ಅಳತೆಯ ಫೋಟೋ, ಗ್ರಾಮ ಪಂಚಾಯತ್ ವತಿಯಿಂದ ಧ್ರಡೀಕರಿಸಿದ ಹೊಲಿಗೆ ತರಬೇತಿ ಪ್ರಮಾಣ ಪತ್ರ ಕಡ್ಡಾಯವಾಗಿದೆ.
ಉಚಿತ ಹೊಲಿಗೆ ಯಂತ್ರ ಪಡೆಯಲು ಬೇಕಾಗಿರುವ ಅರ್ಹತೆಗಳು
ಕೈಗಾರಿಕಾ ಹಾಗು ವಾಣಿಜ್ಯ ಇಲಾಖೆ ನೀಡುವ ಉಚಿತ ಹೊಲಿಗೆ ಯಂತ್ರ ಪಡೆಯಲು ಗ್ರಾಮ ಪಂಚಾಯತ್ ಅಡಿಯಲ್ಲಿ ಅಥವಾ ಇತರ ಸಂಸ್ಥೆಗಳ ಅಡಿಯಲ್ಲಿ ಹೊಲಿಗೆ ತರಬೇತಿ ಪಡೆದ ಹಾಗು ಹೊಲಿಗೆ ವೃತ್ತಿ ಮಾಡಲು ಇಚ್ಛೆ ಇರುವ ಮಹಿಳಾ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಹಾಕಬಹುದಾಗಿದೆ. ಸರಕಾರಿ ನೌಕರಿ ಹೊಂದಿರುವವರು ಈ ಯೋಜನೆಗೆ ಅರ್ಜಿ ಹಾಕುವಂತಿಲ್ಲ. ಈ ಯೋಜನೆಗೆ ಅರ್ಜಿ ಹಾಕಲು ಕೊನೆಯ ದಿನಾಂಕ ಜನವರಿ 15 , 2024 ಆಗಿರುತ್ತದೆ.
ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ
ಹೊಲಿಗೆ ಯಂತ್ರ ಪಡೆಯಲು ಆಸಕ್ತಿ ಇರುವ ಅಭ್ಯರ್ಥಿಗಳು https://sevasindhuservices.karnataka.gov.in/login .do? ಈ ವೆಬ್ ಸೈಟ್ ನಲ್ಲಿ ಲಾಗಿನ್ ಆಗುವ ಮೂಲಕ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ , ಸಂಬಂಧಪಟ್ಟ ದಾಖಲೆಯನ್ನು ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಕೈಗಾರಿಕಾ ಹಾಗು ವಾಣಿಜ್ಯ ಇಲಾಖೆಗೆ ಭೇಟಿ ನೀಡಿ ಅಧಿಕಾರಿಗಳ ಬಳಿ ಮಾಹಿತಿ ಪಡೆಯಿರಿ.