Ads By Google

Solar Pump Set: ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್, ಉಚಿತ ಸೌರ ಪಂಪ್ ಸೆಟ್ ಅರ್ಜಿ ಆಹ್ವಾನ.

solar pump set scheme for farmers

Image Credit: Original Source

Ads By Google

Free Solar Pump Set scheme For Farmers: ರಾಜ್ಯ ಸರ್ಕಾರ ರೈತರ ಏಳಿಗೆಗಾಗಿ ಈಗಾಗಲೇ ವಿವಿಧ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯದ ರೈತರು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹುದು. ರಾಜ್ಯ ಸರ್ಕಾರ ಈಗಾಗಲೇ ರೈತರ ಕೃಷಿಗೆ ಸಹಾಯವಾಗುವಂತಹ ಅನೇಕ ಸೌಲಭ್ಯವನ್ನು ಒದಗಿಸಿದೆ. ಇನ್ನು ರೈತರ ಕೃಷಿಗೆ ನೀರಿನ ಸಮಸ್ಯೆ ಎದುರಾಗುವುದು ಸಹಜ.

ಸರಿಯಾದ ಸಮಯಕ್ಕೆ ಮಳೆ ಬಾರದೆ ಇದ್ದರೆ ನೀರಿನ ಅಭಾವದಿಂದ ಕೃಷಿ ನಾಶವಾಗುತ್ತದೆ. ಇದರಿಂದ ರೈತರು ಸಾಕಷ್ಟು ತೊಂದರೆಗೆ ಸಿಕ್ಕಿಕೊಳ್ಳಬೇಕಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ಕೃಷಿಗೆ ಮುಖ್ಯವಾಗಿ ಬೇಕಾಗುವ ನೀರಾವರಿ ಸೌಲಭ್ಯವನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ಯೋಜನೆಯನ್ನು ಆರಂಭಿಸಲು ಸಜ್ಜಾಗಿದೆ. ರೈತರು ಈ ನೂತನ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

Image Credit: Tatapowersolar

ಉಚಿತ ಸೌರ ಪಂಪ್ ಸೆಟ್ ಅರ್ಜಿ ಆಹ್ವಾನ
ಸದ್ಯ ರಾಜ್ಯ ಸರ್ಕಾರ ರೈತರಿಗಾಗಿ ಸೋಲಾರ್ ಪಂಪ್ ಸೆಟ್ ಗಳನ್ನೂ ನೀಡಲು ನಿರ್ಧರಿಸಿದೆ. ಇದಕ್ಕಾಗಿ Kusum Yojana ಆರಂಭಿಸಿದೆ. ಕುಸುಮ್ ಯೋಜನೆಯಡಿ ಉಚಿತ ಪಂಪ್ ಸೆಟ್ ಅನ್ನು ಪಡೆಯಲು ಅರ್ಜಿ ಸಲ್ಲಿಕೆಗೆ ಕೂಡ ಸರ್ಕಾರ ಅವಕಾಶವನ್ನು ನೀಡಿದೆ. ಸೋಲಾರ್ ಪಂಪ್ ಸೆಟ್ ಗಾಗಿ ನೋಂದಣಿ ಕೂಡ ಆರಂಭವಾಗಿದ್ದು, ರಾಜ್ಯದ 18 ಸಾವಿರ ಲಕ್ಷ ರೈತರು ಕುಸುಮ್ ಯೋಜನೆಯಡಿ ಸೋಲಾರ್ ಪಂಪ್ ಸೆಟ್ ಪಡೆಯಲು ನೋಂದಣಿ ಮಾಡಿಸಿದ್ದಾರೆ. ನೀರಾವರಿಗೆ ಸಾಂಪ್ರದಾಯಕ ಶಕ್ತಿಯ ಬದಲು ಸೌರಶಕ್ತಿ ಬಳಸಿ ಇಂಧನ ಸ್ವಾವಲಂಬನೆ ಸಾಧಿಸಲು ಮುಂದಾಗಿದ್ದಾರೆ.

ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್
ಪ್ರಧಾನಮಂತ್ರಿ ಕಿಸಾನ್‌ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್‌ (ಕುಸುಮ್‌) ವತಿಯಿಂದ ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್‌ ನಲ್ಲಿ ಆಯೋಜಿಸಿದ್ದ ಪ್ರಧಾನಮಂತ್ರಿ ಕುಸುಮ್‌ ಯೋಜನೆಯ ಸಮಪರ್ಕ ಅನುಷ್ಠಾನ ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಇಂಧನ ಇಲಾಖೆಯ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿದರು.

”ಕುಸುಮ್ ಬಿ ಯೋಜನೆಯಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಕುಸುಮ್ ಬಿ ಯೋಜನೆಯಡಿ ರಾಜ್ಯ ಸರಕಾರದ ಅನುದಾನವನ್ನು ಶೇ.30ರಿಂದ 50ಕ್ಕೆ ಹೆಚ್ಚಿಸಿದ್ದು, ಇಂಧನ ಸಚಿವ ಕೆ.ಜೆ.ಜಾರ್ಜ್ ಮಾರ್ಗದರ್ಶನದಲ್ಲಿ ಯೋಜನೆ ಜಾರಿಯಾಗುತ್ತಿದೆ. ರಾಜ್ಯದ 18 ಲಕ್ಷ ರೈತರು ‘ಸೌರಮಿತ್ರ’ ವೆಬ್‌ ಸೈಟ್ ಮೂಲಕ ಸೋಲಾರ್ ಪಂಪ್ ಸೆಟ್‌ ಗಳನ್ನು ಪಡೆಯಲು ಸಮರ್ಥರಾಗಿದ್ದಾರೆ / ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

Image Credit: Solarquarter
Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in