Shakti Scheme: ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಇನ್ನೊಂದು ಗುಡ್ ನ್ಯೂಸ್, ಆಧಾರ್ ನಿಯಮ ಬದಲಾವಣೆ.

ಶಕ್ತಿ ಯೋಜನೆಯ ಕುರಿತಂತೆ ಆಧಾರ್ ಕಾರ್ಡ್ ನಿಯಮ ಬದಲಾವಣೆ.

Free Travel By Using Aadhaar Card: ರಾಜ್ಯ ಸರ್ಕಾರದ Shakti ಯೋಜನೆ ರಾಜ್ಯದಲ್ಲಿ ಅನುಷ್ಠಾನಗೊಂಡು ಐದಾರು ತಿಂಗಳು ಕಳೆದಿದೆ. ರಾಜ್ಯದ ಪ್ರತಿಯೊಬ್ಬ ಮಹಿಳೆಯಾರೂಕೂಡ ಶಕ್ತಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ರಾಜ್ಯದ ಯಾವುದೇ ಸ್ಥಳಕ್ಕೆ ಹೋಗಲು ಮಹಿಳಾ ಪ್ರಯಾಣಿಕರು ಯಾವುದೇ ಮೊತ್ತವನ್ನು ನೀಡಬೇಕೆಂದಿಲ್ಲ.

ದಿನ ನಿತ್ಯ ಲಕ್ಷಾಂತರ ಮಹಿಳಾ ಪ್ರಯಾಣಿಕರು ಉಚಿತ ಬಸ್ ನ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸದ್ಯ ಉಚಿತ ಬಸ್ ಪ್ರಯಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಮಾಹಿತಿ ಹೊರಡಿಸಿದೆ.

Free Travel By Using Aadhaar Card
Image Credit: Zeebiz

ಶಕ್ತಿ ಯೋಜನೆಯ ಕುರಿತು ಬಿಗ್ ಅಪ್ಡೇಟ್
ಜೂನ್ ತಿಂಗಳಿನಿಂದ ಶಕ್ತಿ ಯೋಜನೆ ರಾಜ್ಯದ ಎಲ್ಲ ಮಹಿಳೆಯರಿಗೆ ಶೂನ್ಯ ಮೊತ್ತದಲ್ಲಿ ಪ್ರಯಾಣವನ್ನು ಕಲ್ಪಿಸಿಕೊಟ್ಟಿತ್ತು. ಕಾಂಗ್ರೆಸ್ ನ ಪಂಚ ಗ್ಯಾರಂಟಿಗಳಲ್ಲಿ ಮೊದಲು ಅನುಷ್ಠಾನಗೊಂಡಿರುವುದು ಶಕ್ತಿ ಯೋಜನೆ. ಈ ಶಕ್ತಿ ಯೋಜನೆ ಲಾಭ ಮಹಿಳೆಯರಿಗೆ ಲಭ್ಯವಾಗಲಿದೆ.

ಇನ್ನು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಲು ಮಹಿಳೆಯರು ತಮ್ಮ ಗುರುತಿನ ಪುರಾವೆಯಾದ Aadhaar Card ಅನ್ನು ಹೊಂದುವದು ಕಡ್ಡಾಯವಾಗಿದೆ. Aadhaar Card ಪ್ರತಿ ಹೊಂದಿಲ್ಲದಿದ್ದರೆ ಅಂತಹ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡಲಾಗುವುದಿಲ್ಲ ಎಂದು ಸರ್ಕಾರ ಆದೇಶಿಸಿತ್ತು. ಸದ್ಯ ಕಾಂಗ್ರೆಸ್ ಸರ್ಕಾರ ಈ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿದೆ. ಈ ಮೂಲಕ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

Free Travel By Using Aadhaar Card
Image Credit: India Today

ಮಹಿಳೆಯರ ಉಚಿತ ಪ್ರಯಾಣ ಇನ್ನುಮುಂದೆ ಸುಲಭ
ಮಹಿಳೆಯರ ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್ ಮುಖ್ಯ ಧಾಖಲೆಯಾಗಿದೆ. ಕೆಲವೊಮ್ಮೆ ಮಹಿಳೆಯರು ಆಧಾರ್ ಕಾರ್ಡ್ ಅನ್ನು ತೆಗೆದುಕೊಂಡು ಹೋಗುವುದನ್ನು ಮರೆಯುತ್ತಾರೆ. ಈ ವೇಳೆ ಬಸ್ ಕಂಡಕ್ಟರ್ ಆಧಾರ್ ಮಾಹಿತಿ ತೋರಿಸದಿದ್ದರೆ ಉಚಿತ ಪ್ರಯಾಣ ನೀಡಲಾಗುವುದಿಲ್ಲ ಎಂದರೆ ಅಲ್ಲಿ ಜಗಳ ಉಂಟಾಗುವುದು ಸಾಮಾನ್ಯ. ಹೀಗಾಗಿ ಇದೀಗ ಸಾರಿಗೆ ಸಂಸ್ಥೆ ಉಚಿತ ಪ್ರಯಾಣಕ್ಕೆ ಹೊಸ ಮಾರ್ಗವನ್ನು ಕಂಡುಹಿಡಿದಿದೆ.

Join Nadunudi News WhatsApp Group

ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ತೋರಿಸಿ ಪ್ರಯಾಣ ಮಾಡಬಹದು
ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ನ ಫೋಟೋವನ್ನು ತೋರಿಸುವ ಮೂಲಕ ಮಹಿಳೆಯರು ಉಚಿತ ಪ್ರಯಾಣವನ್ನು ಮಾಡಬಹುದಾಗಿದೆ. ಸದ್ಯದ ಡಿಜಿಟಲ್ ದುನಿಯಾದಲ್ಲಿ ಸ್ಮಾರ್ಟ್ ಫೋನ್ ಗಳನ್ನೂ ಹೆಚ್ಚಿನ ಜನರು ಬಳಸುತ್ತಾರೆ.

ಹೀಗಾಗಿ ಇನ್ನುಮುಂದೆ ಉಚಿತ ಪ್ರಯಾಣ ಮಾಡುವವರು ಕೈಯಲ್ಲಿ ಆಧಾರ್ ಹಿಡಿದುಕೊಳ್ಳುವ ಬದಲು ನಿಮ್ಮ ಮೊಬೈಲ್ ಫೋನ್ ನಲ್ಲಿ ಆಧಾರ್ ಕಾರ್ಡ್ ನ ಒಂದು ಫೋಟೋವನ್ನು ತೆಗೆದಿಟ್ಟುಕೊಂಡು ನೀವು ಆ ಫೋಟೋದ ಮೂಲಕ ಉಚಿತ ಪ್ರಯಾಣವನ್ನು ನಡೆಸಬಹುದು. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕೃತ ಘೋಷಣೆ ಹೊರಡಿಸಿದೆ.

Join Nadunudi News WhatsApp Group