Fruits Eating: ಹಣ್ಣು ತಿನ್ನುವಾಗ ಈ ತಪ್ಪು ಮಾಡಿದರೆ ಆರೋಗ್ಯಕ್ಕೆ ಅಪಾಯ, ಎಚ್ಚರ ಅಗತ್ಯ.

ಹಣ್ಣುಗಳನ್ನ ತಿನ್ನುವಾಗ ಈ ತಪ್ಪುಗಳನ್ನ ಮಾಡಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.

Fruits Eating Method: ಸಾಮಾನ್ಯವಾಗಿ ಎಲರೂ ತಮ್ಮ ಆರೋಗ್ಯದ (Health) ಮೇಲೆ ಬಹಳ ಕಾಳಜಿಯನ್ನು ವಹಿಸುತ್ತಾರೆ. ಆರೋಗ್ಯವೇ ಭಾಗ್ಯ ಎನ್ನುವ ಹಾಗೆ ಆರೋಗ್ಯವನ್ನು ಹಾಳುಮಾಡಿಕೊಳ್ಳಬಾರದು. ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥಗಳು ಪೌಷ್ಠಿಕಾಂಶಗಳಿಂದ ಕೂಡಿದ್ದರೆ, ಆರೋಗ್ಯವು ಉತ್ತಮವಾಗಿರುತ್ತದೆ.

fruits eating method
Image Credit: healthyeating

ಹಣ್ಣು ಸೇವಿಸುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು
ಉತ್ತಮ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಿದರೆ ಆರೋಗ್ಯದಲ್ಲಿ ಯಾವ ರೀತಿಯ ತೊಂದರೆಯು ಆಗುವುದಿಲ್ಲ. ಇನ್ನು ಉತ್ತಮ ಆಹಾರ ಸೇವನೆಯ ಜೊತೆಗೆ ಹಣ್ಣುಗಳನ್ನು (Fruits) ತಿನ್ನುವುದು ಉತ್ತಮ. ಆದರೆ ಹಣ್ಣುಗಳನ್ನು ತಿನ್ನುವಲ್ಲಿ ಕೂಡ ಕೆಲವು ನಿಯಮಗಳು ಇರುತ್ತದೆ. ನೀವು ಹಣ್ಣುಗಳನ್ನು ತಿನ್ನುವ ಸಮಯದಲ್ಲಿ ಈ ಮೂರು ತಪ್ಪುಗಳನ್ನು ಮಾಡಬೇಡಿ. ಹಣ್ಣು ಸೇವಿಸಲು ಸರಿಯಾದ ಮಾಹಿತಿ ತಿಳಿಯೋಣ.

ಹಣ್ಣು ಸೇವಿಸುವಾಗ ಈ ಮೂರು ತಪ್ಪುಗಳನ್ನು ಮಾಡಬಾರದು

*ಹಣ್ಣುಗಳನ್ನು ತಿನ್ನುವಾಗ ಕತ್ತರಿಸಿ ತಿನ್ನುವುದು ತಪ್ಪು
ಸಾಮಾನ್ಯವಾಗಿ ಎಲ್ಲರೂ ಹಣ್ಣುಗಳನ್ನು ತಿನ್ನುವಾಗ ಕತ್ತರಿಸಿ ಅಥವಾ ಹಣ್ಣಿನ ರಸವನ್ನು ಬೇರ್ಪಡಿಸಿ ಸೇವಿಸುತ್ತಾರೆ. ಹಣ್ಣಿನಿಂದ ರಸವನ್ನು ಹೊರತೆರೆದಾಗ ಅದರಲ್ಲಿರುವ ಫೈಬರ್, ಜೀವಸತ್ವವೂ, ಖನಿಜ, ಕಿಣ್ವಗಳು ಹೊರಟು ಹೋಗುತ್ತವೆ. ಕತ್ತರಿಸಿದ ಹಣ್ಣಿನಲ್ಲಿ ಯೂರಿಕ್ ಆಸಿಡ್ ಕೂಡ ವೇಗವಾಗಿ ಹೆಚ್ಚಾಗುತ್ತದೆ.

 Health Tip Latest News
Image Credit: snexplores

*ಊಟದ ನಂತರ ಹಣ್ಣು ಸೇವನೆ ಅಪಾಯಕಾರಿ
ಊಟ ಆದ ಬಳಿಕ ಹಣ್ಣು ತಿನ್ನುವುದನ್ನು ಎಲ್ಲರು ರೂಡಿ ಮಾಡಿಕೊಂಡಿರುತ್ತಾರೆ. ಆದರೆ ಊಟದ ನಂತರ ಹಣ್ಣು ಸೇವನೆ ಮಾಡುದರಿಂದ ತೊಂದರೆ ಉಂಟಾಗುತ್ತದೆ. ಏಕೆಂದರೆ ಹಣ್ಣು ನಿಮ್ಮ ಹೊಟ್ಟೆಯನ್ನು ಸೇರಿ ನೀವು ತಿಂದ ಆಹಾರವನ್ನು ಹಾಳು ಮಾಡುತ್ತದೆ. ಹಣ್ಣುಗಳು ಹೊಟ್ಟೆಯಲ್ಲಿ ಬೇಗನೆ ಹಾಳಾಗಿ ಆಮ್ಲವನ್ನು ಉತ್ಪಾದಿಸುತ್ತದೆ.

Join Nadunudi News WhatsApp Group

*ಹಣ್ಣು ತಿನ್ನುವ ಮೊದಲು ಡ್ರೈಫ್ರುಟ್ಸ್ ಸೇವನೆ ಉತ್ತಮ
ಹಣ್ಣುಗಳನ್ನು ತಿನ್ನುವ ಮೊದಲು ನೀವು ಡ್ರೈಫ್ರುಟ್ಸ್ ಅನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬಹುದು. ಡ್ರೈಫ್ರುಟ್ಸ್ ಗಳು ಕೊಬ್ಬಿನ ಮೂಲಾಂಶವನ್ನು ಹೊಂದಿರುದರಿಂದ ಆರೋಗ್ಯಕ್ಕೆ ಉತ್ತಮವಾಗಿದೆ.

Join Nadunudi News WhatsApp Group