October New Rules: ಅಕ್ಟೋಬರ್ 1ರಿಂದ ಬದಲಾಗುತ್ತಿದೆ ಮತ್ತಷ್ಟು ನಿಯಮಗಳು, ಕೇಂದ್ರದ ಸ್ಪಷ್ಟನೆ
ಇದೀಗ ಅಕ್ಟೊಬರ್ ತಿಂಗಳಿನಲ್ಲಿ ಹಲವು ಬದಲಾವಣೆ ಕಂಡು ಬಂದಿದ್ದು, ಅನೇಕ ಆರ್ಥಿಕ ಬದಲಾವಣೆಗಳು ಇವೆ, ಇಂತಹ ಬದಲಾವಣೆಗಳು ಸಾಮಾನ್ಯ ಜನರ ನೇರ ಪರಿಣಾಮ ಕೂಡ ಬೀಳುತ್ತವೆ
New Rules From 1 st October: ಇನ್ನೇನು ಸೆಪ್ಟೆಂಬರ್ ತಿಂಗಳು ಕೊನೆ ಯಾಗಲಿದ್ದುಹೊಸ ತಿಂಗಳು ಅಕ್ಟೋಬರ್ ಬರಲಿದೆ, ಈಗಾಗಲೇ ಬ್ಯಾಂಕ್ ವಿಚಾರ, ಸಾಲ ಪಾವತಿ, ತರಕಾರಿ ಬೆಲೆ, ಆದಾರ್ ಕಾರ್ಡ್(Aadhar Card), ರೇಷನ್ ಕಾರ್ಡ್ (Ration Card) ಕುರಿತಂತೆ ಹಲವಾರು ವಿಚಾರಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಬದಲಾವಣೆ ಮಾಡಲು ತಿಳಿಸಲಾಗಿತ್ತು, ಅದೇರೀತಿ ಜನರು ಕೆಲವು ಮಾಹಿತಿ ಗಳನ್ನು ಸರಿ ಪಡಿಸಿ ಕೊಂಡಿದ್ದಾರೆ, ಇದೀಗ ಅಕ್ಟೊಬರ್ ತಿಂಗಳಿನಲ್ಲಿ ಹಲವು ಬದಲಾವಣೆ ಕಂಡು ಬಂದಿದ್ದು, ಅನೇಕ ಆರ್ಥಿಕ ಬದಲಾವಣೆಗಳು ಇವೆ, ಇಂತಹ ಬದಲಾವಣೆಗಳು ಸಾಮಾನ್ಯ ಜನರ ನೇರ ಪರಿಣಾಮ ಕೂಡ ಬೀಳುತ್ತವೆ
ಏನೆಲ್ಲಾ ಬದಲಾವಣೆ
ಸಾರ್ವಜನಿಕ ಭವಿಷ್ಯ ನಿಧಿ , ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಬರುವ ತಿಂಗಳಿನಲ್ಲಿ ಬದಲಾವಣೆ ಮಾಡಲಿದೆ, ಹೌದು ರಾಷ್ಟ್ರೀಯ ಉಳಿತಾಯ ಯೋಜನೆ, ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡ್ತಾ ಇದ್ದ ಜನರು ಸೆಪ್ಟೆಂಬರ್ 30 ರೊಳಗೆ ಕಡ್ಡಾಯವಾಗಿ ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ಸಲ್ಲಿಸುವುದುಕಡ್ಡಾಯ ವಾಗಿದೆ
ನೊಂದಣಿ ಮಾಡುವುದು ಕಡ್ಡಾಯ
ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ, 2023 ಅಕ್ಟೋಬರ್ 1 ರಿಂದ ಕಟ್ಟು ನಿಟ್ಟಾಗಿ ಈ ನಿಯಮ ಜಾರಿಗೆ ಬರಲಿದ್ದು, ಈ ಜನನ ಪ್ರಮಾಣಪತ್ರವನ್ನು ಎಲ್ಲಾ ಕಡೆ ಒಂದೇ ದಾಖಲೆಯಾಗಿ ಬಳಸಲಾಗುತ್ತದೆ, ಇದುಕೂಡ ಆದಾರ್ ಕಾರ್ಡ್, ಪ್ಯಾನ್ ಕಾರ್ಡ್ ನಂತೆ ಮುಖ್ಯ ದಾಖಲೆ ಯಾಗಲಿದೆ
ಅಕ್ಟೊಂಬರ್ 1 ರಿಂದ 2000 ನೋಟು ಗಳು ನಿಷ್ಕ್ರಿಯವಾಗಲಿದೆ. ಎರಡು ಸಾವಿರ ನೋಟು ಇನ್ನು ಮುಂದೆ ಚಲಾವಣೆ ಯಲ್ಲಿ ಇರುವುದಿಲ್ಲ, ನಿಮ್ಮ ಬಳಿ2000 ರೂಪಾಯಿ ನೋಟು ಇದ್ದರೆ ಸೆಪ್ಟೆಂಬರ್ 30ರೊಳಗೆ ಬದಲಾಯಿಸಿಕೊಳ್ಳಲು ಅವಕಾಶ ಇದೆ,
* ಇನ್ನು ಟ್ರೇಡಿಂಗ್ ಖಾತೆ, ಮ್ಯೂಚುವಲ್ ಫಂಡ್ ಹೂಡಿಕೆದಾರರು ಸೆಪ್ಟೆಂಬರ್ 30 ರೊಳಗೆ ನಾಮನಿರ್ದೇಶನಗಳನ್ನು ನೀಡುವುದು ಕಡ್ಡಾಯ ಮಾಡಲಾಗಿದ್ದು, ಮಾಡದಿದ್ದರೆ ಅಕ್ಟೋಬರ್ 1 ರಂದು ಖಾತೆಯನ್ನು ನಿಷ್ಕ್ರಿಯ ಮಾಡಲಾಗುತ್ತದೆ