G.Parameshwar: ಫ್ರೀ ಭಾಗ್ಯಗಳ ವಿಚಾರದಲ್ಲಿ ಮತ್ತೆ ಉಲ್ಟಾ ಹೊಡೆದ ಕಾಂಗ್ರೆಸ್, ಜಿ ಪರಮೇಶ್ವರ್ ಹೊಸ ಹೇಳಿಕೆ.

ಕಾಂಗ್ರೆಸ್ ನ ಫ್ರೀ ಭಾಗ್ಯಗಳ ಬಗ್ಗೆ ಜಿ. ಪರಮೇಶ್ವರ್ ಅವರು ಸ್ಪಷ್ಟನೆಯನ್ನ ನೀಡಿದ್ದಾರೆ ಮತ್ತು ಯಾರು ಯಾರಿಗೆ ಈ ಯೋಜನಗೆಳ ಲಾಭ ಸಿಗಲಿದೆ ಅನ್ನುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.

G.Parameshwar About Congress Offers: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಮುಗಿದಿದ್ದು ಇದೀಗ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಕಾಂಗ್ರೆಸ್ (Congress) ಪಕ್ಷ ಬರೋಬ್ಬರಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ.

ಇನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮೇ 20 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಗ್ಯಾರೆಂಟಿ ಗಳ ಬಗ್ಗೆ ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಈ ನಡುವೆ ಜಿ. ಪರಮೇಶ್ವರ್ (G.Parameshwar) ಐದು ಗ್ಯಾರೆಂಟಿ ಗಳ ಬಗ್ಗೆ ಮಾತನಾಡಿದ್ದಾರೆ.

G.Parameshwar About Congress Offers
Image Credit: odishabhaskar

ಕಾಂಗ್ರೆಸ್ ನ ಐದು ಗ್ಯಾರೆಂಟಿ ಬಗ್ಗೆ ಮಾತನಾಡಿದ ಜಿ ಪರಮೇಶ್ವರ್
ಕರ್ನಾಟಕದ ಏಳನೇ ಮುಖ್ಯಮಂತ್ರಿಯಾಗಿದ್ದ ಜಿ ಪರಮೇಶ್ವರ್ ಅವರು ಕಾಂಗ್ರೆಸ್ ಘೋಷಣೆ ಮಾಡಿದ ಐದು ಕಂಡೀಷನ್ ಬಗ್ಗೆ ಮೊನ್ನೆ ಅಷ್ಟೇ ಮಾತನಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾದ ಜಿ ಪರಮೇಶ್ವರ್ ಅವರು ಕಾಂಗ್ರೆಸ್ ನ ಐದು ಭರವಸೆ ಬಗ್ಗೆ ಕಂಡೀಷನ್ ಇದೆ ಎಂದು ಹೇಳಿದ್ದಾರೆ. ಐದು ಕಂಡೀಷನ್ ಗಳಿಗೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ.

ಐದು ಗ್ಯಾರೆಂಟಿಗಳಿಗೆ ಕಂಡೀಷನ್ ಇರುತ್ತದೆ ಎಂದ ಪರಮೇಶ್ವರ್
200 ಯೂನಿಟ್ ವಿದ್ಯುಚ್ಛಕ್ತಿ ನೀಡುವುದನ್ನು ಪ್ರ್ಯಾಕ್ಟಿಕಲ್ ಆಗಿ ಇಲಾಖೆ ಜೊತೆ ಸೇರಿ ಚರ್ಚೆ ಮಾಡುತ್ತೇವೆ ಅಂತ ಹೇಳಿದ್ದಾರೆ. ಇನ್ನು ಗೃಹಲಕ್ಷ್ಮಿ ಯೋಜನೆ, ವಿಧವಾ ವೇತನ ಹಾಗು ಪೆನ್ಷನ್ ಬಗ್ಗೆ ಸಹ ಭರವಸೆಯನ್ನು ಪರಮೇಶ್ವರ್ ಅವರು ನೀಡಿದ್ದಾರೆ. ಆದರೆ ಅವರು ಐದು ಗ್ಯಾರೆಂಟಿಗಳಿಗೆ ಕಂಡಿಷನ್ ಇರುತ್ತದೆ, ಕಂಡೀಷನ್ ಇಲ್ಲದೆ ಏನು ಆಗುವುದಿಲ್ಲ ಎಂದು ಮೊನ್ನೆ ಅಷ್ಟೇ ಹೇಳಿದ್ದರು.

G. Parameshwar spoke about five guarantees of Congress

Join Nadunudi News WhatsApp Group

ಆದರೆ ಈಗ ಇವರು ಮತ್ತೆ ಉಲ್ಟಾ ಹೊಡೆದಿದ್ದಾರೆ. ಕಂಡಿಷನ್ ಹಕ್ಕುತ್ತೇವೆ ಅಂತ ನಾವು ಹೇಳಿಲ್ಲ.ನಾವು ಕೆಲವು ಪ್ರೊಸೀಜರ್ ಮಾಡಬೇಕು. ಕಂಡಿಷನ್ ಬಗ್ಗೆ ಇನ್ನು ನಾವು ಯೋಚನೆ ಮಾಡಿಲ್ಲ ಎಂದಿದ್ದಾರೆ. ಪ್ರೊಸೀಜರ್ ಮಾಡದೆ ನಾವು ಏನು ಮಾಡಲ್ಲ ಎಂದಿದ್ದಾರೆ.

Join Nadunudi News WhatsApp Group