G20 India: ದೇಶದ ಪ್ರತಿಯೊಬ್ಬ ಜನರು ಡೌನ್ಲೋಡ್ ಮಾಡಬೇಕು ಈ ಆಪ್, ನರೇಂದ್ರ ಮೋದಿ ಮಹತ್ವದ ಘೋಷಣೆ.

ಪ್ರಧಾನಿ ಮೋದಿ ಡೌನ್ಲೋಡ್ ಮಾಡಲು ಸಲಹೆ ನೀಡಿದ 'ಅಪ್ಲಿಕೇಶನ್' ಯಾವುದು.? ಅದರ ವೈಶಿಷ್ಟ್ಯವೇನು.?

G20 India Application Use: ದೇಶದ ಏಳಿಗೆಗಾಗಿ ಪ್ರಧಾನಿ Narendra Modi ಅವರು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ದೇಶದ ಅಭಿವೃದ್ದಿಗಾಗಿ ಮೋದಿ ಅವರು ಹೆಚ್ಚಿನ ಕೆಲಸಲಗಳನ್ನು ಮಾಡುತ್ತಿದ್ದಾರೆ. ಇನ್ನು ಇತ್ತೀಚಿಗೆ ಉಡಾವಣೆಗೊಂಡ ಚಂದ್ರಯಾನ 3 (Chandrayaan 3) ಭಾರತ ದೇಶದ ಹಿರಿಮೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿದೆ. ಇನ್ನು ಮೋದಿ ಅವರು ದೇಶದ ಹೆಸರನ್ನು ಇಂಡಿಯಾ (India) ಬದಲಾಗಿ ಭಾರತ (Bharat) ಎಂದು ಬದಲಾಯಿಸಲು ನಿರ್ಧರಿಸಿದ್ದಾರೆ.

ಸದ್ಯ ದೇಶದಲ್ಲಿ ಮೋದಿ ಅವರು ಹೇಳಿರುವ ಹೊಸ Application ಬಗ್ಗೆ ಚರ್ಚೆಗಳು ಹೆಚ್ಚುತ್ತಿದೆ. ಹೊಸ App ಅನ್ನು ಮೋದಿ ಅವರು ಡೌನ್ಲೋಡ್ ಮಾಡಿಕೊಳ್ಳಲು ಸಲಹೆ ನೀಡಿದ್ದು ಇದರಿಂದ ಯಾವ ರೀತಿ ಪ್ರಯೋಜನ ಆಗಲಿದೆ ಎನ್ನುವ ಬಗ್ಗೆ ಜನರು ಕುತೂಹಲರಾಗಿದ್ದರೆ. ಇನ್ನು ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿರುವ ಶೃಂಗಸಭೆಯನ್ನು ಯಶಸ್ವಿಗೊಳಿಸುವ ಸಲುವಾಗಿ ಮೋದಿ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ.

G20 India Application Use
Image Credit: Zeebiz

G20 India
ಭಾರತ ಪ್ರಧಾನಿ ನರೇಂದ್ರ ಮೋದಿ ಅವರು G20 India ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ಜನತೆಗೆ ಮಾಹಿತಿ ನೀಡಿದ್ದಾರೆ. ಈ ಅಪ್ಲಿಕೇಶನ್ ನ ಸಹಾಯದಿಂದ ಜಿ- 20 ಶೃಂಗ ಸಭೆಯ ಕ್ಷಣ ಕ್ಷಣದ ಮಾಹಿತಿ ನಿಮಗೆ ತಲುಪಲಿದೆ. G20 India ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಶೃಂಗ ಸಭೆಯ ಸಂಪೂರ್ಣ ಮಾಹಿತಿಯ್ನನು ತಿಳಿದುಕೊಳ್ಳಬಹುದು.

G20 India ಅಪ್ಲಿಕೇಶನ್ ಯಾವ ರೀತಿ ಸಹಾಯವಾಗಲಿದೆ
G20 India ಅಪ್ಲಿಕೇಶನ್ ಶೃಂಗಸಭೆಗೆ ಸಂಬಂಧಿಸಿದ ಕ್ಯಾಲೆಂಡರ್ ಆಗಿದೆ. ಮಾಧ್ಯಮ ಮತ್ತು ಜಿ-20 ಬಗ್ಗೆ ಸಂಪೂರ್ಣ ಮಾಹಿತಿ ಒಳಗೊಂಡಿದೆ. ಈ ಅಪ್ಲಿಕೇಶನ್ ಜಿ- 20 ಸಭೆಯಲ್ಲಿ ಭಾಗವಹಿಸುವ ಜನರಿಗೆ ಹೆಚ್ಚು ಸಹಾಯವಾಗಲಿದೆ. ಈ ಅಪ್ಲಿಕೇಶನ್ ನ್ಯಾವಿಗೇಶನ್ ಸೌಲಭ್ಯವನ್ನು ಹೊಂದಿದೆ. G20 India ಅಪ್ಲಿಕೇಶನ್ ವಿದೇಶಿ ಪ್ರತಿನಿಧಿಗಳಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮತ್ತು ಭರತ್ ಮಂತವನ್ನ ತಲುಪಲು ಸಹಾಯ ಮಾಡುತ್ತದೆ.

How to use G20 India Application
Image Credit: Etvbharat

G20 India ಅಪ್ಲಿಕೇಶನ್ ಬಳಸುವ ವಿಧಾನ
ಇನ್ನು G20 India ಅಪ್ಲಿಕೇಶನ್ ಎಲ್ಲ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿರುತ್ತದೆ. ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟಾರ್ ಗೆ ಭೇಟಿ ನೀಡುವ ಮೂಲಕ ಈ G20 India ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇನ್ನು ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ಲಾಗಿನ್ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

Join Nadunudi News WhatsApp Group

ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಲಾಗಿನ್ ನೋಂದಣಿ ಪೂರ್ಣಗೊಂಡ ಬಳಿಕ ಈ ಆಪ್ ನ ಮೂಲಕ ನೀವು ಜಿ- 20 ಶೃಂಗಸಭೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

Join Nadunudi News WhatsApp Group