Gandhada Gudi Behind The Shooting: ಗಂಧದ ಶೂಟಿಂಗ್ ನಡೆಯುವಾಗ ಮಗುಚಿತ್ತು ಅಪ್ಪು ದೋಣಿ, ಅನಾಹುತದ ಬಗ್ಗೆ ಹೇಳಿಕೊಂಡ ಅಮೋಘವರ್ಷ.
Gandhada Gudi Behind The Shooting: ಪುನೀತ್ ರಾಜಕುಮಾರ್ (Puneeth Rajakumar) ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ. ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ದೇಶದ ಟಾಪ್ ನಟ ಅನ್ನುವ ಪಟ್ಟವನ್ನ ಪಡೆದುಕೊಂಡಿರುವ ನಟ ಪುನೀತ್ ರಾಜಕುಮಾರ್ ಅವರು ಇಂದು ನಮ್ಮಜೊತೆ ಇಲ್ಲ ಅನ್ನುವುವುದು ಬಹಳ ಬೇಸರದ ಸಂಗತಿ ಆಗಿದೆ.
ಹೌದು ನಟ ಪುನೀತ್ ರಾಜಕುಮಾರ್ ಅವರು ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ಸ್ಕಾಸ್ತು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ಹಲವು ಅನಾಥ ಆಶ್ರಮಗಳು, ಹಲವು ವೃದ್ಧಾಶ್ರಮಗಳು ಮತ್ತು ಹಲವು ಮಕ್ಕಳ ವಿಧ್ಯಾಭ್ಯಾಸವನ್ನ ನೋಡಿಕೊಳ್ಳುತ್ತಿದ್ದ ನಟ ಪುನೀತ್ ರಾಜಕುಮಾರ್ ಅವರು ಕಳೆದ ವರ್ಷ ಹೃದಾಗಾಘಾತದಿಂದ ಇಹಲೋಕವನ್ನ ತ್ಯಜಿಸಿದರು.
ಸದ್ಯ ನಟ ಪುನೀತ್ ರಾಜಕುಮಾರ್ ಅವರ ಕನಸಿನ ಚಿತ್ರದವಾದ ಗಂಧದ ಗುಡಿ (Gandhada Gudi) ಚಿತ್ರ ಈಗ ದೇಶಾದ್ಯಂತ ತೆರೆಕಂಡಿದ್ದು ಬಹಳು ಚಿತ್ರ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದೆ ಎಂದು ಹೇಳಬಹುದು.
ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಪ್ರದರ್ಶನವನ್ನ ಕಂಡಿರುವ ನಟ ಪುನೀತ್ ರಾಜಕುಮಾರ್ ಅವರ ಕನಸಿನ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ತನ್ನದೇ ದಾಖಲೆಯನ್ನ ಮಾಡಿದೆ ಎಂದು ಹೇಳಬಹುದು.
ರಾಜ್ಯದಲ್ಲಿ ಯಶಸ್ವಿ ಪ್ರದರ್ಶನವನ್ನ ಕಾಣುತ್ತಿದೆ ಗಂಧದ ಗುಡಿ
ನಟ ಪುನೀತ್ ರಾಜಕುಮಾರ್ ಅವರ ಕನಸಿನ ಚಿತ್ರವಾದ ಗಂಧದ ಗುಡಿ ರಾಜ್ಯದಲ್ಲಿ ಯಶಸ್ವಿ ಫ್ರಾಡ್ಸ್ರಹಣವನ್ನ ಕಾಣುತ್ತಿದೆ ಎಂದು ಹೇಳಬಹುದು.
ರಾಜ್ಯದ ಬಹುತೇಕ ಎಲ್ಲಾ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾದ ಗಂಧದ ಗುಡಿ ಎಲ್ಲಾ ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿದ್ದು ಚಿತ್ರಕ್ಕೆ ಬಹಳ ಒಳ್ಳೆಯ ರೆಸ್ಪಾನ್ಸ್ ಕೂಡ ಬಂದಿದೆ ಎಂದು ಹೇಳಬಹುದು.
ಗಂಧದ ಗುಡಿ ಚಿತ್ರದಲ್ಲಿ ಪರಿಸರದ ಬಗ್ಗೆ ಬಹಳ ಸುಂದರವಾಗಿ ತೋರಿಸಲಾಗಿದ್ದು ನಟ ಪುನೀತ್ ರಾಜಕುಮಾರ್ ಅವರಿಗೆ ಪರಿಸರದ ಬಗ್ಗೆ ಪ್ರೀತಿ ಇತ್ತು ಅನ್ನುವುದು ಇದರಿಂದ ತಿಳಿಯುತ್ತದೆ.
ಚಿತ್ರೀಕರಣದ ವೇಳೆ ಆಗಿತ್ತು ಸಮಸ್ಯೆ
ಗಂಧದ ಗುಡಿ ಚಿತ್ರೀಕರಣವನ್ನ ಕಾಳಿ ನದಿ ಭಾಗದಲ್ಲಿ ಮಾಡುವ ಸಮಯದಲ್ಲಿ ಆದ ಸಮಸ್ಯೆಯ ಬಗ್ಗೆ ಈಗ ತಿಳಿದುಬಂದಿದೆ. ಹೌದು ಚಿತ್ರದಲ್ಲಿ ಅರಣ್ಯ ಮತ್ತು ಸಮುದ್ರ ಪ್ರಕೃತಿಯ ಬಗ್ಗೆ ಬಹಳ ಚನ್ನಾಗಿ ತೋರಿಸಲಾಗಿದೆ. ಈ ಚಿತ್ರವನ್ನ ಶೂಟ್ ಮಾಡುವ ಸಮಯದಲ್ಲಿ ನಟ ಪುನೀತ್ ರಾಜಕುಮಾರ್ ಅವರು ಕೆಲವು ಸಮಸ್ಯೆಯನ್ನ ಕೂಡ ಎದುರಿಸಬೇಕಾಗಿತ್ತಂತೆ. ಗಂಧದ ಗುಡಿ ಚಿತ್ರವನ್ನ ಕಾಳಿ ನದಿಯ ಭಾಗದಲ್ಲಿ ಮಾಡುವ ಸಮಯದಲ್ಲಿ ನಟ ಕೆಲವು ಸಮಸ್ಯೆಗಳನ್ನ ಎದುರಿಸಿದ್ದು ಸದ್ಯ ವಿಷಯ ಈಗ ಬೆಳಕಿಗೆ ಬಂದಿದೆ.
ಅಪ್ಪು ಇದ್ದ ದೋಣಿ ಮಗುಚಿತ್ತು
ಕಾಳಿ ನದಿಯಲ್ಲಿ ಮಾಡಿದ ಶೂಟಿಂಗ್ ಬಗ್ಗೆ ಮಾತನಾಡಿದ ಅಮೋಘವರ್ಷ ಅವರು ದೋಣಿ ಮಗುಚಿದ ಬಗ್ಗೆ ಮಾತನಾಡಿದರು. ಕಾಳಿ ನದಿಯಲ್ಲಿ ಶೂಟಿಂಗ್ ಮಾಡುವ ಸಮಯದಲ್ಲಿ ಒಂದು ದೋಣಿಯನ್ನ ಆಯೋಜನೆ ಮಾಡಿಕೊಳ್ಳಲಾಗಿತ್ತು.
ಅಮೋಘವರ್ಷ ಮತ್ತು ಅಪ್ಪು ಅವರು ಬಗೆ ಮತ್ತು ಇತರೆ ವಸ್ತುಗಳನ್ನ ತಗೆದುಕೊಂಡು ಕಾಳಿ ನದಿಯಲ್ಲಿ ದೋಣಿಯಲ್ಲಿ ಸುಮಾರು 100 ಮೀಟರ್ ಹೋದಮೇಲೆ ದೋಣಿ ಮಗುಚಿತಂತೆ. ಇದಾದ ನಂತರ ಮೇಲೆದ್ದ ಅಪ್ಪು ಅವರು ಏನಿದು ಹೀಗಾಗಿ ಹೋಯಿತು ಎಂದು ಹೇಳಿ ನಕ್ಕರಂತೆ. ಆ ಸಮಯದಲ್ಲಿ ಅವರ ಅಂಗರಕ್ಷಕ ಚಲಪತಿ ಕೂಡ ನೀರಿಗೆ ಧುಮುಕಿದ್ದರಂತೆ.
ಆ ಸಮಯದಲ್ಲಿ ಎಲ್ಲರೂ ಕೂಡ ಭಯಪಟ್ಟಿದ್ದರಂತೆ. ಅಪ್ಪು ಅವರೇ ನೀರಿನಿಂದ ಮೇಲೆ ಬಂದು ನನಗೆ ಏನು ಆಗಲಿಲ್ಲ ಎಂದು ಹೇಳಿದರಂತೆ. ಈ ಎಲ್ಲಾ ವಿಷಯವನ್ನ ಚಿತ್ರದಲ್ಲಿ ಅಪ್ಪು ಅವರ ಜೊತೆಗೆ ಅಮೋಘವರ್ಷ ಅವರು ಹೇಳಿಕೊಂಡಿದ್ದಾರೆ.