Gandhi Canteen: ಇಂದಿರಾ ಕ್ಯಾಂಟೀನ್ ಬೆನ್ನಲ್ಲೇ ಜಾರಿಗೆ ಬಂತು ಗಾಂಧಿ ಕ್ಯಾಂಟೀನ್, ಇಂತಹ ನೌಕರರಿಗೆ ಮಾತ್ರ ಊಟ ತಿಂಡಿ.

ಗಾಂಧಿ ಪಾಯಿಂಟ್ ಕ್ಯಾಂಟೀನ್ ನಲ್ಲಿ ಅರ್ಹರಿಗೆ ಮಾತ್ರ ಊಟ ಹಾಗೂ ತಿಂಡಿಯನ್ನು ನೀಡಲಾಗುತ್ತದೆ.

Gandhi Point Canteen For BMTC Workers: ಭಾರತದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಈಗಾಗಲೇ ರಾಜ್ಯದಲ್ಲಿ ‘ಇಂದಿರಾ ಕ್ಯಾಂಟೀನ್‘ (Indira Canteen) ಅನ್ನು ಜನರಿಗೆ ನೀಡಲಾಗಿದೆ. ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಬ್ಸಿಡಿ ಬೆಲೆಯಲ್ಲಿ ಆಹಾರವನ್ನು ನೀಡುವ ಗುರಿಯನ್ನು ಈ ಇಂದಿರಾ ಕ್ಯಾಂಟೀನ್ ಹೊಂದಿದೆ. ಬೆಳಿಗ್ಗಿನ ತಿಂಡಿ, ಮದ್ಯಾಹ್ನದ ಹಾಗೂ ರಾತ್ರಿಯ ಊಟವನ್ನು ಕಡಿಮೆ ಬೆಲೆಗೆ ಇಂದಿರಾ ಕ್ಯಾಂಟೀನ್ ನೀಡುತ್ತಿದೆ.

ಈ ಇಂದಿರಾ ಕ್ಯಾಂಟೀನ್ ನಿಂದ ಜನರು ಹೆಚ್ಚಿನ ಅನುಕೂಲವನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ನ ಸೇವೆ ಲಭ್ಯವಾಗುತ್ತಿರುವ ಬೆನ್ನಲ್ಲೇ ಇದೀಗ ಊಟ ತಿಂಡಿಗಾಗಿ ಹೊಸ ಕ್ಯಾಂಟೀನ್ ಅನ್ನು ತೆರೆಯುವುದಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಹೊರಡಿಸಿದ್ದಾರೆ. ಆದರೆ ಸದ್ಯ ರಾಜ್ಯ ಸರ್ಕಾರ ಪರಿಚಯಿಸಲಿರುವ ಹೊಸ ಕ್ಯಾಂಟೀನ್ ಇಂತವರಿಗೆ ಮಾತ್ರ ಆಹಾರ ಲಭ್ಯವಾಗಲಿದೆ.

Gandhi Point Canteen For BMTC Workers
Image Credit: Oneindia

BMTC ಸಿಬ್ಬಂದಿಗಳಿಗಾಗಿ ಹೊಸ ಸೌಲಭ್ಯ
ಸದ್ಯ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ತಿಂಡಿ, ಊಟವನ್ನು ನೀಡಲು ಹೊಸ ಕ್ಯಾಂಟೀನ್ ಅನ್ನು ತೆರೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ October 2 ರಂದು ಬೆಂಗಳೂರಿನ BMTC ಯಾ 4 ನೇ ಘಟಕದಲ್ಲಿ ಉತ್ತಮ ದರ್ಜೆಯ, ರಿಯಾಯಿತಿ ದರದಲ್ಲಿ ಊಟ, ತಿಂಡಿ ನೀಡುವ “ಗಾಂಧಿ ಪಾಯಿಂಟ್ ಕ್ಯಾಂಟೀನ್” (Gandhi Point Canteen) ಅನ್ನು ತೆರೆದಿದ್ದಾರೆ.

Gandhi Point Canteen
Image Credit: Bangaloremirror

ಇಂತಹ ನೌಕರರಿಗೆ ಮಾತ್ರ ಊಟ ತಿಂಡಿ ಲಭ್ಯ
ಇನ್ನು ಗಾಂಧಿ ಪಾಯಿಂಟ್ ಕ್ಯಾಂಟೀನ್ ನಲ್ಲಿ ಅರ್ಹರಿಗೆ ಮಾತ್ರ ಊಟ ಹಾಗೂ ತಿಂಡಿಯನ್ನು ನೀಡಲಾಗುತ್ತದೆ. BMTC ಉದ್ಯೋಗಿಗಳಿಗೆ ಮಾತ್ರ ರಿಯಾಯಿತಿ ದರದಲ್ಲಿ ಉತ್ತಮ ದರ್ಜೆಯ ತಿಂಡಿ ಮತ್ತು ಊಟವನ್ನು ಗಾಂಧಿ ಪಾಯಿಂಟ್ ಕ್ಯಾಂಟೀನ್ ನಲ್ಲಿ ಒದಗಿಸಲಾಗುತ್ತದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ. ಇನ್ನುಮುಂದೆ BMTC ನೌಕರರು ಗಾಂಧಿ ಪಾಯಿಂಟ್ ಕ್ಯಾಂಟೀನ್ ನಲ್ಲಿ ಕಡಿಮೆ ದರದಲ್ಲಿ ಊಟ ಹಾಗೂ ತಿಂಡಿಯನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group