Why ganesh is not doing pan india movie: ಪ್ಯಾನ್ ಇಂಡಿಯಾ ಸಿನೆಮಾ ಏಕೆ ಮಾಡಲ್ಲ ಎಂದ ಗಣೇಶ್.
Why ganesh is not doing pan india movie here is the information: ನಟ ಯಶ್(Yash) ಅಭಿನಯದ ಕೆಜಿಎಫ್(KGF) ಪ್ಯಾನ್ ಇಂಡಿಯಾ ಚಿತ್ರವಾಗಿ ಗೆದ್ದ ಬಳಿಕ ಬಂದಂತಹ ಹಲವು ದೊಡ್ಡ ಬಜೆಟ್‌ನ ಸಿನಿಮಾಗಳೆಲ್ಲಾ ಬಿಡುಗಡೆಗೊಂಡದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ. ಹೌದು ಇಲ್ಲಿ ವಿಶೇಷವೆಂದರೆ ಬಾಲಿವುಡ್(Bollywood) ಚಿತ್ರಗಳೂ ಕೂಡ ದಕ್ಷಿಣ ಭಾರತದ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಗೊಂಡಿದ್ದು ಈ ಪೈಕಿ ಹಲವು ಚಿತ್ರಗಳು ಗೆದ್ದರೆ ಇನ್ನೂ ಕೆಲ ಚಿತ್ರಗಳು ನಿರೀಕ್ಷಿಸಿದಷ್ಟು ತಲುಪಲಿಲ್ಲ.
ಇನ್ನು ಇತ್ತೀಚೆಗಷ್ಟೆ ದೊಡ್ಡ ಸಕ್ಸಸ್ ಕಂಡಿರುವ ಕಾಂತರ ಸಹ ಪ್ಯಾನ್ ಇಂಡಿಯಾ ಚಿತ್ರವೇ ಆಗಿದ್ದು ಈಗ ಎಲ್ಲಾ ನಟರೂ ಇದೇ ಟ್ರೆಂಡ್‌ನಲ್ಲಿ ಸಿನಿಮಾ ಮಾಡುತ್ತಾರ ಎಂಬುದು ಸದ್ಯಕ್ಕಿರುವ ಪ್ರಶ್ನೆ. ಇದೇ ಪ್ರಶ್ನೆಯನ್ನು ಸದ್ಯ ತ್ರಿಬಲ್ ರೈಡಿಂಗ್(Tribble Riding) ಚಿತ್ರದ ಪತ್ರಿಕಾಗೋಷ್ಟಿ ಸಂದರ್ಭದಲ್ಲಿ ಗೋಲ್ಡನ್ ಸ್ಟಾರ್(Golden star) ಗಣೇಶ್ ಅವರಿಗೂ ಕೇಳಲಾಗಿದ್ದು ಇದಕ್ಕೆ ಗಣೇಶ್ ಕೂಡ ಉತ್ತರಿಸಿದ್ದಾರೆ.
ಹೌದು ಅಭಿಮಾನಿಗಳಲ್ಲಿ ಗಣೇಶ್ ಅವರು ಪ್ಯಾನ್ ಇಂಡಿಯಾ ಸಿನಿಮಾವನ್ನು ಯಾವಾಗ ಮಾಡುತ್ತಾರೆ ಎಂಬ ಪ್ರಶ್ನೆ ಇದ್ದು ಈ ಪ್ರಶ್ನೆ ನಟನಿಗೆ ಎದುರಾದಾಗ ನಂಗೆ ಯಾವ ರೀತಿ ಎಂದರೆ ನಮ್ಮ ಸಿನಿಮಾವನ್ನು ಎಲ್ಲರೂ ನಮ್ಮ ಭಾಷೆಯಲ್ಲೇ ನೋಡಬೇಕು ಎಂಬ ಆಸೆ. ಅದಾದ ಮೇಲೆ ಪ್ಯಾನ್ ಇಂಡಿಯಾಗೆ ಹೋಗಬೇಕು ಅಂತ. ಹೌದು ಒಂದೆರಡು ಚಿತ್ರಗಳ ಮಾತುಕತೆ ನಡೀತಿದೆ. ಈ ವರ್ಷ ಮಾಡಿಕೊಂಡು ಹೋಗ್ತೇನೆ ಎಂದು ಗಣೇಶ್ ಉತ್ತರಿಸಿದ್ದಾರೆ.
ಕನ್ನಡ ನಟರ ವಿಚಾರಕ್ಕೆ ಬರುವುದಾದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ತಮ್ಮ ಮುಂದಿನ ಚಿತ್ರ ಕ್ರಾಂತಿ ಮೂಲಕ ಪ್ಯಾನ್ ಇಂಡಿಯಾ ಕದ ತಟ್ಟಲಿದ್ದು ಈಗಾಗಲೇ ಚಿತ್ರದ ಪ್ರಚಾರ ಕೆಲಸಗಳು ಆರಂಭಗೊಂಡಿದ್ದು ಚಿತ್ರ ಜನವರಿ 26ರ ಗಣರಾಜ್ಯೋತ್ಸವ ಪ್ರಯುಕ್ತ ತೆರೆಕಾಣಲಿದೆ. ಈ ಚಿತ್ರಕ್ಕೆ ಈ ಹಿಂದೆ ಯಜಮಾನ ಚಿತ್ರ ನಿರ್ದೇಶಿಸಿದ್ದ ವಿ ಹರಿಕೃಷ್ಣ ನಿರ್ದೇಶನವಿರದ್ದು ನಾಯಕಿಯಾಗಿ ರಚಿತಾ ರಾಮ್ ಅಭಿನಯಿಸಿದ್ದು ಇನ್ನು ಎಲ್ಲಾ ಸಿನಿಮಾಗಳಂತೆ ಕಾಂತಾರ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂಬ ಉದ್ದೇಶದಿಂದ ತಯಾರಿಸಿರಲಿಲ್ಲ.
ಹೌದು ಪ್ರೇಕ್ಷಕರ ಪ್ರತಿಕ್ರಿಯೆ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ದು ಗೆಲ್ಲಿಸಿದ್ದು ಗಣೇಶ್ ಅವರ ಹೇಳಿಕೆ ಕಾಂತಾರ ಯಶಸ್ಸು ಎರಡಕ್ಕೂ ಸಾಮ್ಯತೆ ಇದೆ. ಹೌದು ಅವರು ಹೇಳಿದಂರೆ ಕಾಂತಾರ ಚಿತ್ರ ಮೊದಲು ಕನ್ನಡದಲ್ಲಿ ಬಿಡುಗಡೆಗೊಂಡಿದ್ದು ಎಲ್ಲರೂ ಚಿತ್ರವನ್ನು ಕನ್ನಡ ಭಾಷೆಯಲ್ಲೇ ವೀಕ್ಷಿಸಿದರು ತದನಂತರ ಚಿತ್ರ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋಗಲಾಯಿತು.
ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾ ಇದೇ ನವೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು ಗಾಳಿಪಟ 2 ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಗೋಲ್ಡನ್ ಸ್ಟಾರ್ ಮತ್ತೊಂದು ಸಕ್ಸಸ್‌ಫುಲ್ ಸಿನಿಮಾ ನೀಡುವುದಕ್ಕೆ ಮುಂದಾಗಿದ್ದಾರೆ.
ಇನ್ನು ಗಣೇಶ್ ಸಿನಿಮಾ ಅಂದರೆ ಮನರಂಜನೆಗೇನು ಕೊರತೆ ಇರೋದಿಲ್ಲ. ಆ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಸೀನ್‌ಗಳಿರುತ್ತೆ.
ಹೌದು ನವಿರಾದ ಪ್ರೇಮಕಥೆಗಂತೂ ಕೊರತೆ ಇರೋದಿಲ್ಲ. ಇನ್ನು ಜೊತೆಗೆ ಕಾಮಿಡಿ ದೃಶ್ಯಗಳು ಇರಲಿದ್ದು ಮಸ್ತ್ ಆಗಿರೋ ಹಾಡುಗಳಂತೂ ಇದ್ದೇ ಇರುತ್ತದೆ. ಸದ್ಯ ಈ ವಾರ ಬಿಡುಗಡೆ ಆಗುತ್ತಿರುವ ತ್ರಿಬಲ್ ರೈಡಿಂಗ್ ಸಿನಿಮಾ ಕೂಡ ಹಾಗೇ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡುವ ಸೂಚನೆಯಂತೂ ನೀಡಿದೆ ಈಗಾಗಲೇ ರಿಲೀಸ್ ಆಗಿರೋ ಸಿನಿಮಾದ ಹಾಡುಗಳು ಟ್ರೈಲರ್ ಟೀಸರ್ ಎಲ್ಲವೂ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ.