ರೇಷನ್ ಕಾರ್ಡ್ ಹೊಂದಿರುವ ಎಲ್ಲರಿಗೂ ಕೇಂದ್ರದಿಂದ ಶಾಕಿಂಗ್ ಸುದ್ದಿ, ಇನ್ನುಮುಂದೆ ಉಚಿತವಾಗಿ ಯಾವುದು ಸಿಗಲ್ಲ, ನಿಯಮದಲ್ಲಿ ದೊಡ್ಡ ಬದಲಾವಣೆ.

ದೇಶದಲ್ಲಿ ದಿನದಿಂದ ದಿನಕ್ಕೆ ಹಲವು ನಿಯಮಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯನ್ನ ಮಾಡಲಾಗುತ್ತಿದ್ದು ಇದು ಜನರ ಬೇಸರಕ್ಕೆ ಕಾರಣವಾಗುತ್ತಿದೆ ಎಂದು ಹೇಳಬಹುದು. ಹೌದು ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಿಯಮಗಳಲ್ಲಿ ಬದಲಾವಣೆಯನ್ನ ಮಾಡಲಾಗುತ್ತಿದ್ದು ಇದು ಜನರ ಮೇಲೆ ನೇರ ಪರಿಣಾಮವನ್ನ ಬೀರಿದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಈಗ ಕೇಂದ್ರ ಸರ್ಕಾರದ ಬಹುಮುಖ್ಯವಾದ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯನ್ನ ಮಾಡಲಾಗಿದ್ದು ಈ ಬದಲಾವಣೆ ನವೆಂಬರ್ 4 ನೇ ತಾರೀಕಿನಿಂದಲೇ ಜಾರಿಗೆ ಬಂದಿರುತ್ತದೆ ಎಂದು ಹೇಳಬಹುದು. ಇನ್ನು ಬದಲಾದ ನಿಯಮಗಳ ಪ್ರಕಾರ ಪ್ರಸ್ತುತ ತಿಂಗಳಿಂದ ಪಡಿತರ ಅಂಗಡಿಯಲ್ಲಿ ಪಡಿತರ ದಾನ್ಯವವನ್ನ ಉಚಿತವಾಗಿ ಕೊಡುವುದನ್ನ ನಿಲ್ಲಿಸಲಾಗಿದೆ.

ಹಾಗಾದರೆ ಬದಲಾಗಿರುವ ಆ ನಿಯಮ ಏನು ಮತ್ತು ನಿಯಮದಲ್ಲಿ ಬದಲಾವಣೆ ಮಾಡಲು ಪ್ರಮುಖವಾದ ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ನಿಮಗೆಲ್ಲ ತಿಳಿದಿರುವ ಹಾಗೆ ಕೊರೊನಾ ಮಹಾಮಾರಿ ಶುರುವಾಗಿನ ಸಮಯದಿಂದ ದೇಶದ ಜನತೆ ಸಂಕಷ್ಟಕ್ಕೆ ಸಿಲುಕಿರುವುದು ಎಲ್ಲರಿಗೂ ಗೊತ್ತೇ ಇದೆ ಮತ್ತು ಅಷ್ಟೇ ಅಲ್ಲದೆ ಲಾಕ್‌ಡೌನ್‌ ನಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಮತ್ತು ಜನರು ಉದ್ಯೋಗ ಅಥವಾ ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದಾರೆ ಕೂಡ.

Garib Kalyan scheme

ಇನ್ನು ಕರೋನ ಆರ್ಥಿಕ ಸಂಕಷ್ಟದ ಸಮಯದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಅಡಿಯಲ್ಲಿ ಬಡ ಜನರಿಗೆ ರೇಷನ್ ಅಂಗಡಿಯಲ್ಲಿ ಉಚಿತವಾಗಿ ಪಡಿತರ ದಾನ್ಯಗಳನ್ನ ವಿತರಣೆ ಮಾಡಲಾಗಿತ್ತು ಎಂದು ಹೇಳಬಹುದು. ಇನ್ನು ಈಗ ಶಾಕಿಂಗ್ ಸುದ್ದಿ ಬಂದಿದ್ದು ಈ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯನ್ನ ಮಾಡಲಾಗಿದೆ ಎಂದು ಹೇಳಬಹದು. ಹೌದು ಸ್ನೇಹಿತರೆ ಯೋಜನೆಯು ನವೆಂಬರ್‌ನಲ್ಲಿ ಮುಕ್ತಾಯಗೊಳ್ಳುತ್ತದೆ ಎನ್ನಲಾಗಿದೆ. ಇನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKY) ಅಡಿಯಲ್ಲಿ, ಭಾರತದ ಸುಮಾರು 80 ಕೋಟಿ ಪಡಿತರ ಚೀಟಿದಾರರಿಗೆ ತಿಂಗಳಿಗೆ 5 ಕೆಜಿ ಹೆಚ್ಚು ಆಹಾರ ಧಾನ್ಯಗಳನ್ನು (ಗೋಧಿ-ಅಕ್ಕಿ) ನೀಡಲಾಯಿತು.

ಪಡಿತರ ಚೀಟಿಯನ್ನು ಹೊಂದಿರುವ ದೇಶದ ನಾಗರಿಕನು ತನ್ನ ಕೋಟಾದ ಪಡಿತರ ಜೊತೆಗೆ ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 5 ಕೆಜಿ ಹೆಚ್ಚುವರಿ ಪಡಿತರವನ್ನು ಪಡೆದುಕೊಳ್ಳುತ್ತಿದ್ದ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪಡೆದ ಹೆಚ್ಚುವರಿ ಪಡಿತರವು ಸಂಪೂರ್ಣವಾಗಿ ಉಚಿತವಾಗಿದೆ ಮತ್ತು ಇದಕ್ಕೆ ಒಂದು ಪೈಸೆಯೂ ವಿಧಿಸಲಾಗಿಲ್ಲ. ಇನ್ನು ಬಂದಿರುವ ಮಾಹಿತಿಯ ಪ್ರಕಾರ ಈ ಯೋಜನೆಯ ಎರಡನೇ ಹಂತವು ದೀಪಾವಳಿಯವರೆಗೆ 4 ನೇ ತಾರೀಕಿನ ನಂತರ ಈ ಯೋಜನೆ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮುಕ್ತವಾಗಲಿದ್ದು ಜನರು ಇನ್ನುಮುಂದೆ ಆಹಾರಧಾನ್ಯಗಳಿಗೆ ಹಣವನ್ನ ನೀಡಬೇಕು. ಸ್ನೇಹಿತರೆ ಈ ಮಾಹಿತಿಯನ್ನ ಉಚಿತವಾಗಿ ದಾನ್ಯಗಳನ್ನ ಪಡೆದುಕೊಳ್ಳುತ್ತಿರುವ ಎಲ್ಲರಿಗೂ ತಲುಪಿಸಿ.

Join Nadunudi News WhatsApp Group

Garib Kalyan scheme

Join Nadunudi News WhatsApp Group