Garlic Price: ಬೆಲೆ ಏರಿಕೆ ಬೆನ್ನಲ್ಲೇ ಪಾತಾಳಕ್ಕೆ ಕುಸಿದ ಬೆಳ್ಳುಳ್ಳಿ ಬೆಲೆ, ಸಂತಸ ಹೊರಹಾಕಿದ ಗ್ರಾಹಕರು

ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಎಷ್ಟು ಇಳಿಕೆಯಾಗಿದೆ, ಸಂತಸ ಹೊರಹಾಕಿದ ಗ್ರಾಹಕರು

Garlic Price Down: ಕೆಲ ತಿಂಗಳುಗಳ ಹಿಂದೆಯಷ್ಟೇ ಅಡುಗೆಗೆ ಮುಖ್ಯವಾಗಿರುವ ಟೊಮೇಟೊ, ಈರುಳ್ಳಿ ಬೆಲೆ ಬಾರಿ ಏರಿಕೆ ಕಂಡಿತ್ತು. ಒಂದು ಕೆಜಿ ಟೊಮೊಟೊ, ಈರುಳ್ಳಿ ಬೆಲೆ ಊಹೆಗೂ ಮೀರಿತ್ತು. ಸದ್ಯ ಈ ಎರಡರ ಬೆಲೆ ಯಥಾಸ್ಥಿತಿ ತಲುಪಿದೆ ಎನ್ನಬಹುದು. ಆದರೆ ಕೆಲವು ದಿನಗಳಿಂದ ಸದ್ಯ ಅಡುಗೆಗೆ ಅಗತ್ಯವಾದ ಇನ್ನೊಂದು ವಸ್ತುವಿನ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎನ್ನಬಹುದು.

ಬೆಳ್ಳುಳ್ಳಿ ಬೆಳೆಯ ಏರಿಕೆಯು ಟೊಮೇಟೊ, ಈರುಳ್ಳಿ ಬೆಲೆಗಿಂತ ಹೆಚ್ಚು ಏರಿಕೆ ಕಂಡಿದೆ. ಜನಸಾಮಾನ್ಯರು ಬೆಳ್ಳುಳ್ಳಿ ಬೆಲೆಯ ಏರಿಕೆಗೆ ಕಂಗಾಲಾಗಿದ್ದರು. ಆದರೆ ಇದೀಗ ಬೆಳ್ಳುಳಿ ಬೆಲೆಯಲ್ಲಿ ಇಳಿಕೆಯಾಗಿದ್ದು, ಜನಸಮಾನ್ಯರ ಮುಖದಲ್ಲಿ ಸಂಸತ ಮೂಡಿದೆ ಎನ್ನಬಹುದು.

Garlic Price Down
Image Credit: The Hindu

ಬೆಳ್ಳುಳ್ಳಿ ಬೆಲೆಯಲ್ಲಿ ದಿಢೀರ್ ಇಳಿಕೆ
ಕಳೆದ ಎರಡು ಮೂರು ತಿಂಗಳಿನಿಂದ Garlic ಬೆಲೆ ಬಾರಿ ಹೆಚ್ಚಾಗುತ್ತಿದೆ. ಬೆಳ್ಳುಳ್ಳಿ ಬೆಲೆಯ ಏರಿಕೆಯ ಪ್ರಮಾಣ ಇನ್ನು ಕಡಿಮೆ ಆಗುತ್ತಿಲ್ಲ ಎಂದು ಜನರು ಚಿಂತಿಸುತ್ತಿದ್ದರು. ಈ ಹಿಂದೆ Garlic ಕೆಜಿಗೆ 150 ರಿಂದ 200 ರೂ. ಲಭ್ಯವಾಗುತ್ತಿತ್ತು. ಆದರೆ ದಿಢೀರ್ ಏರಿಕೆಯ ಕಾರಣ ಬೆಳ್ಳುಳ್ಳಿ ಬಾರಿ ದುಬಾರಿಯಾಗಿತ್ತು. ಅಡುಗೆಗೆ Garlic ಬಳಸಲು ಸಾಧ್ಯವಾಗದ ಪರಿಸ್ಥಿತಿ ತಲುಪಿದೆ ಎಂದರೆ ತಪ್ಪಾಗಲಾರದು.

ದೆಹಲಿ, ಲಕ್ನೋ, ಭೋಪಾಲ್, ಪಾಟ್ನಾ ಸೇರಿದಂತೆ ಬಹುತೇಕ ನಗರಗಳಲ್ಲಿ ಬೆಳ್ಳುಳ್ಳಿ ಕೆಜಿಗೆ 500 ರೂ. ತಲುಪಿತ್ತು. ಬಿಡಿಸಿದ ಬೆಳ್ಳುಳ್ಳಿ ಬೆಲೆ 540 ರೂ. ಆದರೆ ಇಡೀ ಬೆಳ್ಳುಳ್ಳಿ ಬೆಲೆ ಮಾರುಕಟ್ಟೆಯಲ್ಲಿ 492 ರೂ. ಗೆ ಏರಿಕೆಯಾಗಿತ್ತು. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಎಷ್ಟು ಇಳಿಕೆಯಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Garlic Price Down In India
Image Credit: ap7am

500 ರೂ. ಗೆ ತಲುಪಿದ್ದ ಬೆಳ್ಳುಳ್ಳಿ ಬೆಲೆ ಇಷ್ಟು ಕಡಿಮೆಯಾಗಿದೆ
ವಾರದ ಹಿಂದೆಯಷ್ಟೇ ಕೆಜಿಗೆ 500 ರೂ. ಬೆಳ್ಳುಳ್ಳಿ ಬೆಲೆ ಇದೀಗ ಕೆಜಿಗೆ 150 ರಿಂದ 200 ರೂ.ಗೆ ಇಳಿದಿದೆ. ಉತ್ತರ ಭಾರತದಿಂದ ರಾಜ್ಯಕ್ಕೆ ಬೆಳ್ಳುಳ್ಳಿ ಹೇರಳವಾಗಿ ಬಂದಿದ್ದು, ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಇತರ ರಾಜ್ಯಗಳಲ್ಲಿ ಇದನ್ನು ಹೇರಳವಾಗಿ ಬೆಳೆಯಲಾಗುತ್ತದೆ. ಇದರಿಂದ ಉತ್ಪಾದನೆ ಹೆಚ್ಚಾಗಿದ್ದು, ಬೆಲೆ ಕುಸಿದಿದೆ. ದೇಶಾದ್ಯಂತ ಬೆಳ್ಳುಳ್ಳಿ ಕೊರತೆಯಿತ್ತು. ಉತ್ತರ ಭಾರತದ ರಾಜ್ಯಗಳಿಂದ ಬೆಳ್ಳುಳ್ಳಿ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಬಂದಿರುವುದರಿಂದ ಬೆಲೆ ಇಳಿಕೆಯಾಗಿದೆ.

Join Nadunudi News WhatsApp Group

Join Nadunudi News WhatsApp Group