ಗರುಡ ಗಮನ ವೃಷಭ ವಾಹನಕ್ಕೆ ಜನರು ಫುಲ್ ಫಿದಾ, 5 ದಿನದಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ, ಶಾಕ್ ಆಗುತ್ತದೆ ನೋಡಿ.
ಸದ್ಯ ಕನ್ನಡ ಚಿತ್ರರಂಗದಲ್ಲಿ ಹತ್ತು ಹಲವು ಸೂಪರ್ ಹಿಟ್ ಚಿತ್ರಗಳು ಬಿಡುಗಡೆಯಾಗುತ್ತಿದ್ದು ಇದು ಜನರ ಗಮನವನ್ನ ಸೆಳೆಯುತ್ತಿದೆ ಎಂದು ಹೇಳಬಹುದು. ಹೌದು ಕನ್ನಡ ಚಿತ್ರಗದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಯನ್ನ ಗಳಿಸಿಕೊಂಡಿದೆ. ಇನ್ನು ಇದೆ ತಿಂಗಳ 17 ನೇ ತಾರೀಕಿನಂದು ರಾಜ್ಯದಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಜನರ ಮೆಚ್ಚುಗೆಯನ್ನ ಗಳಿಸಿಕೊಂಡಿರುವ ಚಿತ್ರವೆಂದರೆ ಅದು ಗರುಡ ಗಮನ ವೃಷಭ ವಾಹನ ಚಿತ್ರವೆಂದು ಹೇಳಬಹುದು. ಹೌದು ಬಿಡುಗಡೆಯಾದ ಎಲ್ಲಾ ಚಿತ್ರ ಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿರುವ ಗರುಡ ಗಮನ ವೃಷಭ ವಾಹನ ಜನರ ಮೆಚ್ಚುಗೆಯನ್ನ ಗಳಿಸಿಕೊಂಡಿದೆ. ರಾಜ್ಯದಲ್ಲಿ ಬಹುತೇಕ ಎಲ್ಲಾ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿರುವ ಗರುಡ ಗಮನ ವೃಷಭ ವಾಹನ ರಾಜ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ ಎಂದು ಹೇಳಬಹುದು.
ಚಿತ್ರ ಬಿಡುಗಡೆಯಾಗಿ ಐದು ದಿನಗಳು ಕಳೆದಿದ್ದು ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿದೆ. ಹಾಗಾದರೆ ಗರುಡ ಗಮನ ವೃಷಭ ವಾಹನ ಐದು ದಿನಗಳಲ್ಲಿ ಮಾಡಿದ ಕಲೆಕ್ಶಷನ್ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಗರುಡ ಗಮನ ವೃಷಭ ವಾಹನ ಚಿತ್ರ ರಾಜ್ಯದಲ್ಲಿ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದ್ದು ಚಿತ್ರವನ್ನ ನೋಡಿದ ಸಿನಿ ಪ್ರಿಯರು ಚಿತ್ರ ಬಹಳ ಚನ್ನಾಗಿ ಇದೆ ಎಂದು ಹೇಳುತ್ತಿದ್ದಾರೆ.
ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರ ಪಾತ್ರೆಕ್ಕ ಜನರು ಮನಸೋತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರು ಹರಿ ಮತ್ತು ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಹರಿ ಮತ್ತು ಶಿವನ ಪಾತ್ರಕ್ಕೆ ಜನರು ಫುಲ್ ಫಿದಾ ಆಗಿದ್ದಾರೆ. ಇನ್ನು ಕಲೆಕ್ಷನ್ ವಿಚಾರಕ್ಕೆ ಬರುವುದಾದರೆ, ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದ್ದ ಗರುಡ ಗಮನ ವೃಷಭ ವಾಹನ ಮೊದಲ ದಿನ 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿತ್ತು.
ಇನ್ನು ಈಗ ಚಿತ್ರ ಬಿಡುಗಡೆಯಾಗಲಿ ಐದು ದಿನಗಳು ಕಳೆದಿದ್ದು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಗರುಡ ಗಮನ ವೃಷಭ ವಾಹನ ಐದು ದಿನಗಳಲ್ಲಿ 7 ರಿಂದ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಅಂದಾಜು ಮಾಡಲಾಗಿದೆ. ಚಿತ್ರ ಯುವಜನರ ಮನವನ್ನ ಗೆದ್ದಿದ್ದು ಚಿತ್ರದಲ್ಲಿ ಕೆಲವು ಸನ್ನಿವೇಶಗಳು ನಮ್ಮ ನಿಜ ಜೀವನದಲ್ಲಿ ಬರುವ ಸನ್ನಿವೇಶದ ಹಾಗೆ ಇದೆ ಎಂದು ಚಿತ್ರವನ್ನ ನೋಡಿದ ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಈ ಚಿತ್ರ ಕೆಲವು ದಾಖಲೆಗಳನ್ನ ಅಳಿಸಿ ಹಾಕುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳುತ್ತಿದ್ದಾರೆ. ಸ್ನೇಹಿತರೆ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರ ಅಭಿನಯ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.