Gas Cylinder: ಒಂದು ವರ್ಷದಲ್ಲಿ ಒಂದು ರೇಷನ್ ಕಾರ್ಡಿನಲ್ಲಿ ಎಷ್ಟು ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು, ಕೇಂದ್ರದ ನಿಯಮ

ಒಂದು ವರ್ಷದಲ್ಲಿ ಒಂದು ರೇಷನ್ ಕಾರ್ಡಿನಲ್ಲಿ ಎಷ್ಟು ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು...?

Gas Cylinder Booking Rules: ಹಣದುಬ್ಬರ ಸಮಸ್ಯೆ ಎದುರಿಸುತ್ತಿರುವ ಜನಸಾಮಾನ್ಯರಿಗೆ ಪ್ರತಿಯೊಂದು ವಸ್ತುವಿನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಇದರ ಜೊತೆಗೆ LPG ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾದರೆ ಅದು ಇನ್ನಷ್ಟು ಹೊರೆಯಾಗಲಿದೆ.

ಇದಕ್ಕಾಗಿ ಕೇಂದ್ರ ಸರ್ಕಾರ ದೇಶದ ಬಡ ಜನರಿಗಾಗಿ Gas Cylinder Subsidy ನೀಡಲು ಮುಂದಾಗಿದೆ. ಗ್ಯಾಸ್ ಸಿಲಿಂಡರ್ ಅನ್ನು ಸಾಮಾನ್ಯವಾಗಿ ಎಲ್ಲರೂ ಬಳಕೆ ಮಾಡುತ್ತಾರೆ ಎಂದು ಹೇಳಬಹುದು. ಹೌದು ಗ್ಯಾಸ್ ಬಳಕೆ ಮಾಡದ ಮನೆ ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ.

Gas Cylinder Booking Rules
Image Credit: Oneindia

ಉಜ್ವಲ ಯೋಜನೆಯಡಿ LPG ಸಿಲಿಂಡರ್ ಸಬ್ಸಿಡಿ ಹೆಚ್ಚಳ
ಹೆಚ್ಚುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಯ ಹೊರೆಯನ್ನು ಕಡಿಮೆ ಮಾಡಲು ಕೇಂದ್ರದ ಮೋದಿ ಸರ್ಕಾರ 2016 ರಲ್ಲಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯಡಿ ಈವರೆಗೆ ಗ್ಯಾಸ್ ಸಿಲಿಂಡರ್ ಗಳ ಮೇಲೆ 200 ರೂ. ಸಬ್ಸಿಡಿಯನ್ನು ನೀಡಲಾಗುತ್ತಿತ್ತು. ಇನ್ನು ಅಕ್ಟೊಬರ್ ನಲ್ಲಿ 200 ರೂ. ಗಳ ಸಬ್ಸಿಡಿಯನ್ನು 300 ರೂ. ಗೆ ಹೆಚ್ಚಿಸಲಾಗಿತ್ತು. ಜನಸಾಮಾನ್ಯರು ಗ್ಯಾಸ್ ಸಿಲಿಂಡರ್ ಅನ್ನು 300 ರೂ. ಗಳ ಸಬ್ಸಿಡಿ ದರದಲ್ಲಿ ಖರೀದಿಸಬಹುದಾಗಿದೆ. ಇದೀಗ ಮೋದಿ ಸರ್ಕಾರ ಈ ಸಬ್ಸಿಡಿ ಯನ್ನು 2025 ರ ಮಾರ್ಚ್ 31 ರ ವರೆಗೆ ವಿಸ್ತರಿಸಲು ನಿರ್ಧರಿಸಿದೆ.

ಒಂದು ವರ್ಷದಲ್ಲಿ ಒಂದು ರೇಷನ್ ಕಾರ್ಡಿನಲ್ಲಿ ಎಷ್ಟು ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು…?
ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತದೆ ಎನ್ನುವ ಕಾರಣಕ್ಕೆ ಎಷ್ಟು ಬೇಕಾದರೂ ಗ್ಯಾಸ್ ಸಿಲಿಂಡರ್ ಖರೀದಿಸುವಂತಿಲ್ಲ. ಗ್ಯಾಸ್ ಸಿಲಿಂಡರ್ ಖರೀದಿಗೂ ಮಿತಿಯನ್ನು ಇರಿಸಲಾಗಿದೆ. ಈ ನಿಯಮ ಪಾಲಿಸದಿದ್ದರೆ ಹೆಚ್ಚಿನ ದಂಡ ಪಾವತಿಸಬೇಕಾದ ಪರಿಸ್ಥಿತಿ ಬರುತ್ತದೆ. ಅಥವಾ ಸಬ್ಸಿಡಿ ಸಿಗದೇ ಇರಬಹುದು. ವರದಿಯ ಪ್ರಕಾರ ಒಂದು ವರ್ಷದಲ್ಲಿ ಒಂದು ರೇಷನ್ ಕಾರ್ಡ್ ನಿಂದ ವರ್ಷಕ್ಕೆ 15 ಗ್ಯಾಸ್ ಸಿಲಿಂಡರ್ ಅನ್ನು ಖರೀದಿಸಬಹುದು. ಅದರಲ್ಲಿ 12 ಗ್ಯಾಸ್ ಸಿಲಿಂಡರ್ ಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತದೆ.

Ujjwala Yojana Gas Cylinder
Image Credit: India Blooms

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಈ ರೀತಿಯಾಗಿ ಅರ್ಜಿ ಸಲ್ಲಿಸಿ
•ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್‌ಸೈಟ್ www.pmuy.gov.in ಗೆ ಭೇಟಿ ನೀಡಿ.

Join Nadunudi News WhatsApp Group

•ನಂತರ PMUY ಸಂಪರ್ಕಕ್ಕಾಗಿ ‘ಅನ್ವಯಿಸು’ ಅನ್ನು ಕ್ಲಿಕ್ ಮಾಡಬೇಕು.

•ನೀವು ಖರೀದಿಸಲು ಬಯಸುವ ಗ್ಯಾಸ್ ಸಿಲಿಂಡರ್ ಅನ್ನು ಆಯ್ಕೆ ಮಾಡಿ.

•ನಂತರ ಎಲ್ಲಾ ಮಾಹಿತಿಯನ್ನು ದಾಖಲೆಗಳೊಂದಿಗೆ ಭರ್ತಿ ಮಾಡಿ ಮತ್ತು ಅನ್ವಯಿಸು ಬಟನ್ ಕ್ಲಿಕ್ ಮಾಡಿ.

Join Nadunudi News WhatsApp Group