Gas E -KYC: ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್, ಕೇಂದ್ರದ ಮಹತ್ವದ ಘೋಷಣೆ.

ಗ್ಯಾಸ್ ಸಿಲಿಂಡರ್ KYC ಬಗ್ಗೆ ಕೇಂದ್ರದ ಮಹತ್ವದ ಘೋಷಣೆ

Gas Cylinder E -KYC Latest Update:ದೇಶದಲ್ಲಿ ಸಿಲಿಂಡರ್ ಬೆಲೆಗಳು ಹೆಚ್ಚುತ್ತಿರುವ ಮಧ್ಯೆ ಸದ್ಯ ಕೇಂದ್ರದ ಉಜ್ವಲ ಯೋಜನೆಯಡಿ ಬಡ ಮಹಿಳೆಯರು ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯುತ್ತಿದ್ದಾರೆ. ಸಬ್ಸಿಡಿ ಯೋಜನೆಯು ಜನರಿಗೆ ಸಿಲಿಂಡರ್ ಬೆಲೆಯನ್ನು ಕಡಿಮೆಗೊಳಿಸುತ್ತಿದೆ ಎನ್ನಬಹುದು.

ಸದ್ಯ ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ಬರಲಿದೆ ಎನ್ನುವ ಬಗ್ಗೆ ವರದಿಯಾಗಿದೆ. ಸಿಲಿಂಡರ್ ಸಬ್ಸಿಡಿ ರದ್ದಾಗುತ್ತದೆಯೇ…? ಎನ್ನುವ ಚಿಂತೆ ಜನರನ್ನು ಕಾಡುತ್ತಿದೆ. ಸದ್ಯ ಸರ್ಕಾರ ಗ್ಯಾಸ್ ಸಿಲಿಂಡರ್ ಸಬ್ಸಿಡಿ ರದ್ದಾಗುವ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಮೂಲಕ ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ.

Gas Cylinder E -KYC Latest Update
Image Credit: Live Mint

ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್
ಸದ್ಯ ಗಾಸ್ ಸಿಲಿಂಡರ್ ಬಳಸುತ್ತಿರುವವರು ಹಾಗೂ ಕೇಂದ್ರ ಉಜ್ವಲ ಯೋಜನೆಯಡಿ ಸಬ್ಸಿಡಿ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಹೌದು, LPG Gas Cylinder Subsidy ಪಡೆಯಲು ಗ್ರಾಹಕರು KYC ಮಾಡಿಸುವುದು ಕಡ್ಡಾಯವಾಗಿದೆ. ಜುಲೈ ಅಂತ್ಯದೊಳಗೆ LPG Cylinder KYC ಕಡ್ಡಾಯವಾಗಿದೆ. ಇನ್ನುಮುಂದೆ ಸಬ್ಸಿಡಿ ಹಣವನ್ನು ಪಡೆಯಲು ಸರ್ಕಾರ KYC ಅನ್ನು ಕಡ್ಡಾಯಗೊಳಿಸಿದೆ. ಜುಲೈ ಮುಕ್ತಾಯದ ನಂತರ ನಿಮ್ಮ LPG Cylinder KYC ಹಣ ಬಂದ್ ಆಗುತ್ತದೆ ಎನ್ನುವ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ.

ಜುಲೈ ಅಂತ್ಯದೊಳಗೆ ನೀವು KYC ಅಪ್ಡೇಟ್ ಮಾಡದೆಯೇ ಇದ್ದರೆ ನಿಮಗೆ ಸಬ್ಸಿಡಿ ಹಣ ಲಭ್ಯವಾಗುವುದಿಲ್ಲ ಎನ್ನುವುದು ಸದ್ಯದ ಸುದ್ದಿಯಾಗಿದೆ. ಇದೀಗ ಈ ವೈರಲ್ ಸುದ್ದಿಯ ಬಗ್ಗೆ ಸ್ಪಷ್ಟನೆ ಲಭಿಸಿದೆ. ಗ್ಯಾಸ್ ಸಿಲಿಂಡರ್ KYC ಆಗದಿದ್ದರೆ ಸಬ್ಸಿಡಿ ರದ್ದಾಗುತ್ತದೆಯೇ….? ಎನ್ನುವ ಬಗ್ಗೆ ಸರ್ಕಾರ ಏನು ಹೇಳುತ್ತದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Gas Cylinder E -KYC
Image Credit: Hindustantimes

ಗ್ಯಾಸ್ ಸಿಲಿಂಡರ್ KYC ಬಗ್ಗೆ ಕೇಂದ್ರದ ಮಹತ್ವದ ಘೋಷಣೆ
ಎಲ್‌ಪಿಜಿ ಸಿಲಿಂಡರ್‌ಗಳಿಗೆ ಇ-ಕೆವೈಸಿ ದೃಢೀಕರಣವನ್ನು ಪಡೆಯಲು ಜನರು ಗ್ಯಾಸ್ ಏಜೆನ್ಸಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಗಡುವು ಹತ್ತಿರದಲ್ಲಿದೆ ಎನ್ನುವ ಚಿಂತೆ ಗ್ಯಾಸ್ ಸಿಲಿಂಡರ್ ಬಳಕೆದಾರರನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಎಲ್‌ಪಿಜಿ ಸಿಲಿಂಡರ್‌ ಗಳಿಗೆ ಇಕೆವೈಸಿ ಅನುಮೋದನೆ ಪ್ರಕ್ರಿಯೆಯನ್ನು ಅನುಸರಿಸಲು ಯಾವುದೇ ಗಡುವು ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ವೈರಲ್ ಆಗುತ್ತಿರುವ ಎಲ್ಲ ಸುದ್ದಿಗೆ ಬ್ರೇಕ್ ನೀಡಿದ್ದಾರೆ. ಜನರು ಗಡುವಿನ ಬಗ್ಗೆ ಇನ್ನುಮುಂದೆ ಚಿಂತಿಸುವಂತಿಲ್ಲ.

Join Nadunudi News WhatsApp Group

Gas Cylinder E -KYC Karnataka
Image Credit: Zeebiz

Join Nadunudi News WhatsApp Group