Expire Date: ಗ್ಯಾಸ್ ಸಿಲಿಂಡರ್ ಗಳಿಗೂ ಬಂತು Expire ಡೇಟ್, ಈಗಲೇ ಮನೆಯ ಗ್ಯಾಸ್ ಸಿಲಿಂಡರ್ Expire ಡೇಟ್ ಚೆಕ್ ಮಾಡಿ.
ಇದೀಗ ಗ್ಯಾಸ್ ಸಿಲಿಂಡರ್ Expire Date ನ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಳ್ಳಿ.
Gas Cylinder Expire Date Identification: ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ Gas Cylinder ಬಳಸೆ ಬಳಸುತ್ತಾರೆ. ಕೇಂದ್ರ ಮೋದಿ ಸರ್ಕಾರ ಉಚಿತ ಗ್ಯಾಸ್ ಸಿಲಿಂಡರ್ ನೀಡಿದ ಸಮಯದಿಂದ ಮನೆ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಹೆಚ್ಚಿದೆ ಎನ್ನಬಹುದು.
ಹಿಂದಿನ ಕಾಲಾದಲ್ಲಿ ಜನರು ಕಟ್ಟಿಗೆಯನ್ನು ಬಳಸಿ ಅಡುಗೆಯನ್ನು ತಯಾರಿಸುತ್ತಿದ್ದರು. ಕಟ್ಟಿಗೆಯಿಂದ ಓಲೆ ಹಚ್ಚಿದಾಗ ಹೊಗೆ ಬಂದು ಸಾಕಷ್ಟು ಮಹಿಳೆಯರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಸದ್ಯ Gas Cylinder ಲಭ್ಯವಾಗುವ ಕಾರಣ ಜನರು ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹದು.
Gas Cylinder Expire Date
ಇನ್ನು ಗ್ಯಾಸ್ ಸಿಲಿಂಡರ್ ಬಳಸುವಾಗ ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಗ್ಯಾಸ್ ಬಳಸುವಾಗ ಸ್ವಲ್ಪ ಅಸಡ್ಡೆ ತೋರಿದರು ಕೂಡ ದೊಡ್ಡ ಅನಾಹುತ ಉಂಟಾಗುತ್ತದೆ. ಇದೀಗ Gas Cylinder ಬಗ್ಗೆ ನಿಮಗೆ ತಿಳಿದಿರದ ಮಾಹಿತಿಯೊಂದು ಲಭ್ಯವಾಗಿದೆ. ಗ್ಯಾಸ್ ಸಿಲಿಂಡರ್ ಗಳಿಗೆ Expire Date ಇರುತ್ತದೆ ಎನ್ನುವುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಹೌದು ಗ್ಯಾಸ್ ಸಿಲಿಂಡರ್ ನಲ್ಲಿ ಕೂಡ ಬಳಸಲು ಕೊನೆಯ ದಿನಾಂಕವನ್ನು ನಮೂದಿಸಲಾಗುತ್ತದೆ. ಇದೀಗ ಗ್ಯಾಸ್ ಸಿಲಿಂಡರ್ Expire Date ನ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.
ಗ್ಯಾಸ್ ಸಿಲಿಂಡರ್ ಗಳಿಗೂ ಬಂತು Expire ಡೇಟ್
ದಿನ ನಿತ್ಯ ಬಳಕೆಯ LPG Cylinder ಗಳಿಗೂ ಕೂಡ Expire Date ಇರುತ್ತದೆ. ಈ ಬಗ್ಗೆ ನಿಮಗೆ ತಿಳಿದಿರಲಿ. Gas Cylinder Expire Date ನಲ್ಲಿ ಮೂರು ರೀತಿಗಳಿವೆ. ಮೂರು ರೀತಿಗಳು ಕೂಡ ಒಂದೊಂದು ರಿಟಾಯ ವಿವರವನ್ನು ನೀಡುತ್ತದೆ. ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ್‌ಗಳ ಈ ಪಟ್ಟಿಗಳಲ್ಲಿ A-23, B-25, C-24, D-23 ಬರೆಯುವುದನ್ನು ನೀವು ನೋಡುತ್ತೀರಿ. ಈ ಆಲ್ಫಾ ನ್ಯೂಮರಿಕ್ ಅಂಕೆಗಳು ಸಿಲಿಂಡರ್‌ನ ಮುಕ್ತಾಯ ದಿನಾಂಕದ ಬಗ್ಗೆ ಮಾಹಿತಿ ನೀಡುತ್ತದೆ. ಇಂಗ್ಲಿಷ್ ನಲ್ಲಿ ಬರೆದಿರುವ A,B,C,D ಅಕ್ಷರಗಳು ತಿಂಗಳ ಬಗ್ಗೆ ಮಾಹಿತಿ ನೀಡುತ್ತವೆ.
ಗ್ಯಾಸ್ ಸಿಲಿಂಡರ್ ನ ಮುಕ್ತಯಾದ ದಿನಾಂಕದ ವಿವರ ಹೇಗೆ ತಿಳಿಯುವುದು..?
A- ಜನವರಿ, ಫೆಬ್ರವರಿ ಮತ್ತು ಮಾರ್ಚ್. B – ಏಪ್ರಿಲ್, ಮೇ ಮತ್ತು ಜೂನ್. C – ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್. D – ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಪ್ರತಿನಿಧಿಸುತ್ತದೆ. ಇದಲ್ಲದೆ, ಈ ಅಕ್ಷರಗಳ ಮುಂದೆ ಸಂಖ್ಯೆಗಳನ್ನು ಬರೆಯಲಾಗುತ್ತದೆ. ಸಂಖ್ಯೆಗಳು ವರ್ಷವನ್ನು ಸೂಚಿಸುತ್ತವೆ. ಉದಾಹರಣೆಗೆ, LPG ಸಿಲಿಂಡರ್‌ನ ಮುಂದೆ C-24 ಎಂದು ಬರೆದಿದ್ದರೆ, ಆ ಸಿಲಿಂಡರ್ ಜುಲೈನಿಂದ ಸೆಪ್ಟೆಂಬರ್ 2014 ರಲ್ಲಿ ಅವಧಿ ಮುಗಿಯುತ್ತದೆ ಎಂದರ್ಥ.