Gas Cylinder: ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಕೇಂದ್ರದಿಂದ ಗಿಫ್ಟ್, ಈಗ ಕೇವಲ 500 ರೂಪಾಯಿಗೆ ಬುಕ್ ಮಾಡಿ ಗ್ಯಾಸ್

ಉಜ್ವಲ ಯೋಜನೆಯಡಿ ಈಗ ಕೇವಲ 500 ರೂ. ಗೆ ಗ್ಯಾಸ್ ಸಿಲಿಂಡರ್ ಲಭ್ಯ

Gas Cylinder Price Down: ದೇಶದ ಬಡ ಜನತೆಗೆ ಕಡಿಮೆ ದರದಲ್ಲಿ LPG Cylinder ಅನ್ನು ನೀಡಲು ಕೇಂದ್ರ ಸರ್ಕಾರ Pradhan Mantri Ujjwala ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಆರ್ಥಿಕವಾಗಿ ದುರ್ಬಲಾಗಿರುವ ಕುಟುಂಬದವರು ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯುತ್ತಿದ್ದಾರೆ. ಇದೀಗ ಕೇಂದ್ರದ ಮೋದಿ ಸರ್ಕಾರ LPG Gas ಸಿಲಿಂಡರ್ ಕುರಿತಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಹೌದು, ಉಜ್ವಲ ಯೋಜನೆಯಡಿ ಮಹಿಳೆಯರಿಗೆ ಮೋದಿ ಸರ್ಕಾರ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ.

LPG gas prices cut
Image Credit: Fortune India

Gas ಸಿಲಿಂಡರ್ ಗಳ ಮೇಲೆ 100 ರೂ. ರಿಯಾಯಿತಿ
ಮಾರ್ಚ್ 8 ರಂದು ವಿಶ್ವದಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಕೇಂದ್ರದ ಮೋದಿ ಸರ್ಕಾರ ಮಹಿಲಾರಿಗಾಗಿ ವಿಶೇಷ ಸೌಲಭ್ಯವನ್ನು ನೀಡಲು ನಿರ್ಧರಿಸಿದ್ದಾರೆ. ಮಹಿಳೆಯರಿಗಾಗಿ ನೀಡುತ್ತಿದ್ದ ಗ್ಯಾಸ್ ಸಿಲಿಂಡರ್ ಗಳ ಸಬ್ಸಿಡಿ ಕುರಿತು ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ಯಾಸ್ ಸಿಲಿಂಡರ್ ಗಳ beleyannu 100 ರೂ. ಕಡಿಮೆ ಮಾಡುವುದಾಗಿ ಮೋದಿ ಸರ್ಕಾರ ಘೋಷಿಸಿದೆ. ಈ ಮೂಲಕ ಮಹಿಳಾ ದಿನಾಚರಣೆಯ ದಿನದಂದು ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದೆ. ಈ ಬಗ್ಗೆ PM ಮೋದಿ ಅವರು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಉಜ್ವಲ ಯೋಜನೆಯಡಿ ಈಗ ಕೇವಲ 500 ರೂ. ಗೆ ಗ್ಯಾಸ್ ಸಿಲಿಂಡರ್ ಲಭ್ಯ
ಮೋದಿ ಅವರು ಗ್ಯಾಸ್ ಸಿಲಿಂಡರ್ ಬೆಲೆ 100 ರೂ. ಇಳಿಕೆ ಮಾಡಿದ ನಂತರ, 14.2 ಕೆಜಿ LPG ಸಿಲಿಂಡರ್ ಬೆಲೆ ದೆಹಲಿಯಲ್ಲಿ 803 ರೂ., ಮುಂಬೈನಲ್ಲಿ 802.50 ರೂ., ಕೋಲ್ಕತ್ತಾದಲ್ಲಿ 829 ರೂ. ಮತ್ತು ಚೆನ್ನೈನಲ್ಲಿ 818.50 ರೂ.ಗೆ ಇಳಿದಿದೆ. ಹೊಸ ಬೆಲೆಗಳು ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ. ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ಸಿಲಿಂಡರ್ ಬೆಲೆಗಳು ರಾಜ್ಯಗಳಾದ್ಯಂತ ಬದಲಾಗುತ್ತವೆ. ಈ ಹೊಸ ಬೆಲೆ ನಿಗದಿಯಾದ ನಂತರ ಉಜ್ವಲ ಯೋಜನೆಯ ಫಲಾನುಭವಿಗಳು 300 ರೂ. ಸಬ್ಸಿಡಿ ಪಡೆಯುತ್ತಾರೆ. ಈ ಮೂಲಕ ಕೇವಲ 500 ರೂ. ಗೆ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹದು.

Gas Cylinder Price Updates
Image Credit: Business-Standard

LPG ಸಿಲಿಂಡರ್ ಸಬ್ಸಿಡಿ ಹೆಚ್ಚಳ
ಉಜ್ವಲ ಯೋಜನೆಯಡಿ ಅಕ್ಟೊಬರ್ ನಲ್ಲಿ 200 ರೂ. ಗಳ ಸಬ್ಸಿಡಿಯನ್ನು 300 ರೂ. ಗೆ ಹೆಚ್ಚಿಸಲಾಗಿತ್ತು. ಜನಸಾಮಾನ್ಯರು ಗ್ಯಾಸ್ ಸಿಲಿಂಡರ್ ಅನ್ನು 300 ರೂ. ಗಳ ಸಬ್ಸಿಡಿ ದರದಲ್ಲಿ ಖರೀದಿಸುತ್ತಿದ್ದರು. ಸದ್ಯ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಪ್ರತಿ LPG ಗ್ಯಾಸ್ ಸಿಲಿಂಡರ್ ಗೆ 300 ರೂ. ಗಳ ಸಬ್ಸಿಡಿಯನ್ನು ಮಾರ್ಚ್ 31 2025 ರ ವರೆಗೆ ಒಂದು ವರ್ಷ ವಿಸ್ತರಿಸಲು ಮೋದಿ ಸರ್ಕಾರ ನಿರ್ಧರಿಸಿದೆ. 2025 ರ ಮಾರ್ಚ್ 31 ರ ವರೆಗೆ ಜನಸಾಮಾನ್ಯರು ಗ್ಯಾಸ್ ಸಿಲಿಂಡರ್ ಗಳ ಮೇಲೆ 300 ರೂ. ಗಳ ಸಬ್ಸಿಡಿಯನ್ನು ಪಡೆಯಬಹುದು.

Gas Cylinder Price Down
Image Credit: News 18

Join Nadunudi News WhatsApp Group

Join Nadunudi News WhatsApp Group