Gas Cylinder Subsidy: ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಶಿವರಾತ್ರಿ ಹಬ್ಬದ ಬಂಪರ್ ಆಫರ್, ಕೇಂದ್ರದಿಂದ ಇಷ್ಟು ಸಬ್ಸಿಡಿ ಹೆಚ್ಚಳ

LPG ಸಿಲಿಂಡರ್ ಸಬ್ಸಿಡಿ ಹೆಚ್ಚಳ ಮಾಡಿದ ಮೋದಿ ಸರ್ಕಾರ.

Gas Cylinder Subsidy Hike: ದೇಶದ ಬಡ ಜನತೆಗೆ ಕಡಿಮೆ ದರದಲ್ಲಿ LPG Cylinder ಅನ್ನು ನೀಡಲು ಕೇಂದ್ರ ಸರ್ಕಾರ Pradhan Mantri Ujjwala ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಆರ್ಥಿಕವಾಗಿ ದುರ್ಬಲಾಗಿರುವ ಕುಟುಂಬದವರು ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯುತ್ತಿದ್ದಾರೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 75 ಲಕ್ಷ ಬಡ ಕುಟುಂಬಗಳಿಗೆ ಉಚಿತ LPG ಸಂಪರ್ಕ ನೀಡುವಂತೆ ಕೇಂದ್ರದ ಮೋದಿ ಸರ್ಕಾರ ನಿರ್ಧರಿಸಿದೆ. ಇದೀಗ ಕೇಂದ್ರದ ಮೋದಿ ಸರ್ಕಾರ LPG Gas ಸಿಲಿಂಡರ್ ಕುರಿತಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಹೌದು, ಉಜ್ವಲ ಯೋಜನೆಯಡಿ ಮೋದಿ ಸರ್ಕಾರ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದೆ.

Gas Cylinder Subsidy Hike
Image Credit: Good Returns

LPG ಸಿಲಿಂಡರ್ ಸಬ್ಸಿಡಿ ಹೆಚ್ಚಳ
ಹೆಚ್ಚುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಯ ಹೊರೆಯನ್ನು ಕಡಿಮೆ ಮಾಡಲು ಕೇಂದ್ರದ ಮೋದಿಸರ್ಕಾರ 2016 ರಲ್ಲಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯಡಿ ಈವರೆಗೆ ಗ್ಯಾಸ್ ಸಿಲಿಂಡರ್ ಗಳ ಮೇಲೆ 200 ರೂ. ಸಬ್ಸಿಡಿಯನ್ನು ನೀಡಲಾಗುತ್ತಿತ್ತು. ಇನ್ನು ಅಕ್ಟೊಬರ್ ನಲ್ಲಿ 200 ರೂ. ಗಳ ಸಬ್ಸಿಡಿಯನ್ನು 300 ರೂ. ಗೆ ಹೆಚ್ಚಿಸಲಾಗಿತ್ತು.

ಜನಸಾಮಾನ್ಯರು ಗ್ಯಾಸ್ ಸಿಲಿಂಡರ್ ಅನ್ನು 300 ರೂ. ಗಳ ಸಬ್ಸಿಡಿ ದರದಲ್ಲಿ ಖರೀದಿಸುತ್ತಿದ್ದರು. ಸದ್ಯ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಪ್ರತಿ LPG ಗ್ಯಾಸ್ ಸಿಲಿಂಡರ್ ಗೆ 300 ರೂ. ಗಳ ಸಬ್ಸಿಡಿಯನ್ನು ಮಾರ್ಚ್ 31 2025 ರ ವರೆಗೆ ಒಂದು ವರ್ಷ ವಿಸ್ತರಿಸಲು ಮೋದಿ ಸರ್ಕಾರ ನಿರ್ಧರಿಸಿದೆ. 2025 ರ ಮಾರ್ಚ್ 31 ರ ವರೆಗೆ ಜನಸಾಮಾನ್ಯರು ಗ್ಯಾಸ್ ಸಿಲಿಂಡರ್ ಗಳ ಮೇಲೆ 300 ರೂ. ಗಳ ಸಬ್ಸಿಡಿಯನ್ನು ಪಡೆಯಬಹುದು.

Gas Cylinder Subsidy Update
Image Credit: Economic Times

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಈ ರೀತಿಯಾಗಿ ಅರ್ಜಿ ಸಲ್ಲಿಸಿ
•ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್‌ಸೈಟ್ www.pmuy.gov.in ಗೆ ಭೇಟಿ ನೀಡಿ.

Join Nadunudi News WhatsApp Group

•ನಂತರ PMUY ಸಂಪರ್ಕಕ್ಕಾಗಿ ‘ಅನ್ವಯಿಸು’ ಅನ್ನು ಕ್ಲಿಕ್ ಮಾಡಬೇಕು.

•ನೀವು ಖರೀದಿಸಲು ಬಯಸುವ ಗ್ಯಾಸ್ ಸಿಲಿಂಡರ್ ಅನ್ನು ಆಯ್ಕೆ ಮಾಡಿ.

•ನಂತರ ಎಲ್ಲಾ ಮಾಹಿತಿಯನ್ನು ದಾಖಲೆಗಳೊಂದಿಗೆ ಭರ್ತಿ ಮಾಡಿ ಮತ್ತು ಅನ್ವಯಿಸು ಬಟನ್ ಕ್ಲಿಕ್ ಮಾಡಿ.

Join Nadunudi News WhatsApp Group