Gas Subsidy: ನಿಮ್ಮ ಖಾತೆಗೆ ಗ್ಯಾಸ್ ಸಬ್ಸಿಡಿ ಹಣ ಬಂದಿದೆಯಾ…? ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ.
ಗ್ಯಾಸ್ ಸಬ್ಸಿಡಿ ಹಣ ಖಾತೆಗೆ ಬಂದಿರುವುದರ ಬಗ್ಗೆ ಈ ರೀತಿಯಾಗಿ ಚೆಕ್ ಮಾಡಿ.
LPG Gas Cylinder Subsidy: ಪ್ರತಿ ಮನೆಯಲ್ಲೂLPG ಗ್ಯಾಸ್ ಬಳಸುತ್ತೇವೆ. ಗ್ಯಾಸ್ ನ ಅವಶ್ಯಕೆತೆ ತುಂಬ ಇದ್ದು ಜನ ಸಾಮಾನ್ಯರಿಗೆ ಖರೀದಿ ಮಾಡುವುದು ಕಷ್ಟಕರವಾಗಿದೆ ಏಕೆಂದರೆ LPG ಗ್ಯಾಸ್ ಬೆಲೆ ಈಗಾಗಲೇ ಗಗನಕ್ಕೆ ಏರಿದೆ.
ಗೃಹ ಬಳಕೆಯ LPG ಗ್ಯಾಸ್ ಗೆ ಕೇಂದ್ರ ಸರಕಾರ ಗ್ಯಾಸ್ ಸಬ್ಸಿಡಿ ಹಣ 200 ರೂಪಾಯಿ ನೀಡುವುದಾಗಿ ತಿಳಿಸಿತು. ಗೃಹ ಬಳಕೆಯ LPG ಸಿಲಿಂಡರ್ ಗೆ 200 ರೂಪಾಯಿ ಹಾಗೂ ಉಜ್ವಲ ಯೋಜನೆಯಡಿ ಸಿಲಿಂಡರ್ ಸೌಲಭ್ಯ ಪಡೆದಿರುವವರಿಗೆ ಈಗಾಗಲೇ ಸಿಗುತ್ತಿರುವ 200 ರೂಪಾಯಿ ಸಹಾಯಧನ ಜೊತೆಗೆ ಹೆಚ್ಚುವರಿ 200 ರೂಪಾಯಿ ಅಂದರೆ ಒಟ್ಟಾರೆಯಾಗಿ 400 ರೂಪಾಯಿ ಸಬ್ಸಿಡಿ ಸಿಗಲಿದೆ.
LPG ಗ್ಯಾಸ್ ಸಬ್ಸಿಡಿ
LPG ಗ್ಯಾಸ್ ಸಬ್ಸಿಡಿ 200 ರೂಪಾಯಿ ಖಾತೆಗೆ ಬಂದಿರಬಹುದೋ ಅಥವಾ ಇಲ್ಲವೋ ಎನ್ನುದರ ಬಗ್ಗೆ ಚೆಕ್ ಮಾಡುವ ವಿಧಾನ:
ಗ್ಯಾಸ್ ಸಬ್ಸಿಡಿ ಬಂದಿರುವುದರ ಬಗ್ಗೆ ಬ್ಯಾಂಕ್ ಗೆ ಹೋಗಿ ಚೆಕ್ ಮಾಡಬೇಕಂತಿಲ್ಲ ಮೊಬೈಲ್ ಮುಖಾಂತರ ಕೊಡ ನೋಡಬಹುದಾಗಿದೆ. ಮೊದಲಿಗೆ ಮೊಬೈಲ್ ನಲ್ಲಿ https://www.mylpg.in ವೆಬ್ ಸೈಟ್ ಅನ್ನು ತೆರೆಯಬೇಕು . ಇದರಲ್ಲಿ ಎಲ್ಲಾ LPG ಕಂಪನಿಗಳ ಹೆಸರು ಇರುತ್ತದೆ. ಇದರಲ್ಲಿ ನಿಮ್ಮ ಮನೆಗೆ ಬರುತ್ತಿರುವ ಸಿಲಿಂಡರ್ ಕಂಪನಿ ಯಾವುದು ಅದನ್ನು ಸೆಲೆಕ್ಟ್ ಮಾಡಬೇಕು.
ನಂತರ ನಮ್ಮ ಭಾಷೆಯ ಆಯ್ಕೆಯ ಬಗ್ಗೆ ಬರುತ್ತದೆ. ಆಗ ನಿಮ್ಮ ಆಯ್ಕೆ ಕನ್ನಡ ಭಾಷೆ ಆಗಿದ್ದರೆ ಭಾಷೆಗಳು ಆಯ್ಕೆಯಲ್ಲಿ ಕನ್ನಡ ಎನ್ನುವುದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ನೀವು ಹೊಸ ಬಳಕೆದಾರ ಎಂದು ಇರುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ LPG ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಎಂಟ್ರಿ ಮಾಡಿ ಮುಂದುವರೆಯಿರಿ ಹಾಗು ಮುಂದೆ ಮೊಬೈಲ್ ಗೆ OTP ಬರುತ್ತದೆ, ನಂತರ ಮತ್ತೆ Click here to generate OTP ಎನ್ನುವ ಆಯ್ಕೆ ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.ಮತ್ತೊಂದು OTP ಬರುತ್ತದೆ ಅದನ್ನು ಕೂಡ ಎಂಟ್ರಿ ಮಾಡಿಬೇಕು.