Geetha Bharathi Bhat Diet: ಬ್ರಹ್ಮಗಂಟು ಗೀತಾ ಭಟ್ ತೂಕ ಇಳಿಸಿಕೊಂಡಿದ್ದು ಹೇಗೆ, ಡಯೆಟ್ ಪ್ಲ್ಯಾನ್ ಹೇಗಿದೆ.

Actress Geetha Bharathi Bhat Diet Plan: ಜೀ ಕನ್ನಡ (Zee Kannada)ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರಾವಾಹಿ ಮೂಲಕ ಪರಿಚಯವಾದ ನಟಿ ಗೀತಾ ಭಾರತಿ ಭಟ್ (Geetha Bharathi Bhat).

ಬ್ರಹ್ಮಗಂಟು ಸೀರಿಯಲ್ (Brahmagantu Serial) ನಲ್ಲಿ ಗೀತಾ ಎನ್ನುವ ಪಾತ್ರದ ಮೂಲಕ ಕರುನಾಡ ಜನರ ಮನಗೆದ್ದ ನಟಿ ಗೀತಾ ಭಟ್ ಈಗ ಸೂಪರ್ ಕ್ವೀನ್ ವೇದಿಕೆಯಲ್ಲಿ ಮಿಂಚುತ್ತಿದ್ದಾರೆ.

ಅಲ್ಲದೆ ಗೀತಾ ಭಾರತಿ ಭಟ್ ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡು ಸ್ಲಿಮ್ ಆಗಿ ಕಾಣಿಸುತ್ತಿದ್ದಾರೆ. ಇದೀಗ ಇವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣ (Social Media)ದಲ್ಲಿ ವೈರಲ್ ಆಗಿದೆ.

How Brahmagantu Geeta Bhatt lost weight, what is the diet plan.
Image Credit: instagram

30 ಕೆಜಿ ತೂಕ ಇಳಿಸಿಕೊಂಡ ಬ್ರಹ್ಮಗಂಟು ಗೀತಾ
ಬ್ರಹ್ಮಗಂಟು ಧಾರಾವಾಹಿಯಲ್ಲಿ ಗೀತಾ ಭಟ್ ಅವರು ಗುಂಡಮ್ಮನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದರು. ದಪ್ಪಗಿದ್ದವರ ಮನ್ನಸ್ಸಿನ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅರಿವಾಗುವ ನೋವಿನ ಕಥೆ ತೋರಿಸಿದ್ದರು. ನಟಿ ಗೀತಾ ಭಟ್ 30 ಕೆಜಿ ತೂಕ ಇಳಿಸಿಕೊಂಡಿದ್ದು ಸುದ್ದಿಯಾಗಿತ್ತು.

ಅದನ್ನು ಹೇಗೆ ಇಳಿಸಿಕೊಂಡರು ಎಂದು ಜನ ಕೇಳುತ್ತ ಇದ್ದರು. ಅದಕ್ಕೆ ನಟಿ ಗೀತಾ ತಮ್ಮ ಡಯಟ್ ಪ್ಲ್ಯಾನ್ ಇದೆ ಅಂತ ಹೇಳಿದ್ದಾರೆ.

Join Nadunudi News WhatsApp Group

Geeta Bharti Bhatt told how she lost weight
Image Credit: instagram

ಗೀತಾ ಭಾರತಿ ಭಟ್ ಅವರ ಡಯಟ್ ಪ್ಲ್ಯಾನ್
ಪ್ರೊಟೀನ್ ಮತ್ತು ಫೈಬರ್ ಅಂಶ ಇರುವ ಆಹಾರ ಹೆಚ್ಚು ತಿನ್ನಬೇಕು. ದಿನಕ್ಕೆ 4 ರಿಂದ 5 ಲೀಟರ್ ನೀರು ಕುಡಿಬೇಕು. ತಪ್ಪದೆ 7- 8 ಗಂಟೆ ನಿದ್ರೆ ಮಾಡಬೇಕು. ಡಯಟ್ ಪ್ಲ್ಯಾನ್ ಮಾಡಿದ ಮೇಲೆ ಅದನ್ನು ತಪ್ಪದೆ ಪಾಲಿಸಬೇಕು.

ಮೊದ ಮೊದಲು ಅದರ ಬಗ್ಗೆ ಜೋಶ್ ಇರುತ್ತದೆ. ಆಮೇಲೆ ಬೇಸರವಾಗುತ್ತದೆ. ಅದನ್ನೆಲ್ಲಾ ಮೆಟ್ಟಿ ನಿಂತು ಡಯಟ್ ಮಾಡಬೇಕು.

Actress Geeta Bharti Bhatt spoke about her struggles to lose weight
Image Credit: instagram

ಜಿಮ್ ಗೆ ಹೋಗಿ ವರ್ಕೌಟ್ ಮಾಡಬಹುದು. ಆದರೆ ಡಯಟ್ ಮಾಡುವುದು ಕಷ್ಟ ಎಲ್ಲರೂ ಪಾನಿಪುರಿ, ಬಜ್ಜಿ ತಿಂತ ಇದ್ದರೆ, ಅಯ್ಯೋ ನಾವು ಇವನ್ನೆಲ್ಲ ಬಿಟ್ಟು ಇನ್ನು ಬದುಕಿರಬೇಕಾ ಎನಿಸುತ್ತದೆ. ಆ ಆಸೆಯನ್ನು ಬದಿಗಿಟ್ಟು ನಮ್ಮ ಡಯಟ್ ಮುಂದುವರೆಸಬೇಕು ಎಂದು ಹೇಳಿದ್ದಾರೆ.

Join Nadunudi News WhatsApp Group