Geetha Bharati Bhat Weight Loss: ಭರ್ಜರಿ ತೂಕ ಇಳಿಸಿಕೊಂಡ ಬ್ರಹ್ಮಗಂಟು ಗೀತಾ, ಇತರರಿಗೆ ಮಾದರಿಯಾದ ನಟಿ ಗೀತಾ.
Geetha Bharati Bhat Weight Loss: ಜೀ ಕನ್ನಡ (Zee Kannada) ವಾಹಿನಿಯ ಬ್ರಹ್ಮಗಂಟು ಸೀರಿಯಲ್ (Bramhagantu) ಮೂಲಕ ತಮ್ಮ ನಟನಾ ಬದುಕನ್ನು ಆರಂಭಿಸಿದ ಗೀತಾ ಭಾರತೀ ಭಟ್ (Geetha Bharati Bhat). ತುಂಬಾ ದಪ್ಪವಿದ್ದ ಕಾರಣ ಎಲ್ಲರೂ ಅವರ ಬಗ್ಗೆ ನೆಗೆಟಿವ್ ಆಗಿ ಮಾತನಾಡುತ್ತಿದ್ದರು ಇದರಿಂದ ಬೇಸರಗೊಂಡ ನಟಿ ಗೀತಾ ಭಾರತಿ ಭಟ್ ತಮ್ಮ ತೂಕ ವನ್ನು ಕಡಿಮೆಮಾಡಿಕೊಳ್ಳುವ ನಿರ್ಧಾರವನ್ನು ತೆಗುದುಕೊಂಡಿದ್ದಾರೆ.
ಬ್ರಹ್ಮಗಂಟು ಧಾರಾವಾಹಿ ಮುಗಿದ ನಂತರ ಬಿಗ್ ಬಾಸ್ (Bigg Boss) ಗೆ ಎಂಟ್ರಿ ಕೊಟ್ಟಿದ್ದಾರೆ. ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸುದರ ಮೂಲಕ ಮನೆಮಾತಾದ ನಟಿ ಗೀತಾ ಭಾರತೀ ಭಟ್ ಬ್ರಹ್ಮಗಂಟು ಧಾರಾವಾಹಿ ಮುಗಿದ ನಂತರ ಬಿಗ್ ಬಾಸ್ ಗೆ ಹೋಗಿ ಅಲ್ಲಿಯೂ ಕೂಡ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಆದರೆ ಅವರು ದಪ್ಪವಿದ್ದ ಕಾರಣ ತುಂಬಾ ಅವಮಾನಗಳಿಗೆ ಒಳಗಾಗಬೇಕಾಯಿತು. ಹಾಗಾಗಿ ಅವರು ತಮ್ಮ ತೂಕವನ್ನು ಕಡಿಮೆಮಾಡಿಕೊಳ್ಳುವ ನಿರ್ಧಾರವನ್ನು ತೆಗುದುಕೊಂಡಿದ್ದಾರೆ.
ನಟನಾ ಬದುಕಿಗೆ ಬ್ರೇಕ್ ಕೊಟ್ಟು ಇವರು ಫಿಟ್ನೆಸ್ ಕಡೆಗೆ ಗಮನಕೊಟ್ಟಿದ್ದಾರೆ. ಝೀ ಕನ್ನಡದಲ್ಲಿ ನಡೆಯಿತ್ತಿರುವ ಹೊಸ ರಿಯಾಲಿಟಿ ಶೋ ಆದ ಸೂಪರ್ ಕ್ವೀನ್ ನಲ್ಲಿ ಭಾಗವಹಿಸುತ್ತಿದ್ದಾರೆ.ರಚಿತಾ ರಾಮ್ (Rachita Ram), ವಿಜಯ್ ರಾಘವೇಂದ್ರ (Vijay Ragavendra) ಅವರು ಜಡ್ಜ್ ಆಗಿ ಸೂಪರ್ ಕ್ವೀನ್ ಅಲ್ಲಿ ಇದ್ದಾರೆ.
ತೂಕ ಇಳಿಸಿಕೊಂಡ ಗೀತಾ
ಈ ಶೋ ಗೆ ಬಂದಾಗ ಗೀತಾ ಭಾರತೀ ಅವರು 30 ಕೆಜಿ. ತೂಕವನ್ನು ಕಡಿಮೆಮಾಡಿಕೊಳ್ಳುದರ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಕಂಪನಿಗಳಲ್ಲಿ ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುತ್ತಿದ್ದ ಗೀತಾ ಭಾರತೀ ಅವರಿಗೆ ಹಾಡುವ ಇಚ್ಛೆ ಇತ್ತು ಎಂದು ಸೂಪರ್ ಕ್ವೀನ್ (Super Queen) ಶೋ ನಲ್ಲಿ ಹೇಳಿಕೊಂಡಿದ್ದಾರೆ.
ಅವರು ಸರಿಗಮಪ (SA RI GA MA PA) ಶೋ ಆಡಿಷನ್ ಗೆ ಹೋಗಿ ಅಲ್ಲಿ ರಿಜೆಕ್ಟ್ ಆದ ವಿಷಯವನ್ನು ಹೇಳಿಕೊಂಡಿದ್ದಾರೆ,ಅಲ್ಲದೆ ಸರಿಗಮಪ ಅಲ್ಲಿ ಹಾಡಲು ಅವಕಾಶ ಸಿಗದ ನನಗೆ ಬ್ರಹ್ಮಗಂಟು ಸೀರಿಯಲ್ ನ ಸಮಯದಲ್ಲಿ ಸರಿಗಪ ಗೆ ಬಂದು ಹಾಡುವ ಅವಕಾಶ ಸಿಕ್ಕಿದಾಗ ಖುಷಿಪಟ್ಟಿದ್ದೇನೆ ಎಂದು ಹೇಳಿದ್ದಾರೆ ಗೀತಾ ಭಾರತೀ ಅವರು ಸೂಪರ್ ಕ್ವೀನ್ ಶೋ ನಲ್ಲಿ ಹೇಳಿಕೊಂಡಿದ್ದಾರೆ.
ಈಗಾಗಲೇ ಸಾಕಷ್ಟು ತೂಕ ಇಳಿಸಿಕೊಂಡ ನಟಿ ಗೀತಾ
ಡಾನ್ಸ್ ಕರ್ನಾಟಕ ಡಾನ್ಸ್ (Dance Karnataka Dance) ಶೋ ನಲ್ಲಿ ಕೂಡ ಗೀತಾ ಭರ್ತಿ ಅವರು ಭಾಗವಹಿಸಿದ್ದರು.ಅಗಳಿಂದಲೇ ಅವರು ತಮ್ಮ ತೂಕ ವನ್ನು ಕಡಿಮೆ ಮಾಡಿಕೊಳ್ಳಬೇಕ್ಕೆನ್ನುವ ಹಂಬಲವನ್ನು ಹೊಂದಿದ್ದರು. 30 ರಿಂದ 50 ಕೆಜಿ,ತೂಕ ಕಡಿಮೆ ಮಾಡಿಕೊಳ್ಳಬೇಕೆಂದು ದಿನ ವರ್ಕೌಟ್, ಡಯಟ್ ಮಾಡುತ್ತಿದ್ದರು.
ನನ್ನ ತಾಯಿ ನನ್ನ ಜೀವನದ ಸೂಪರ್ ಕ್ವೀನ್ ಎಂದು ಗೀತಾ ಭಾರತಿ ಅವರು ಸೂಪರ್ ಕ್ವೀನ್ ಶೋ ನಲ್ಲಿ ಹೇಳಿದ್ದಾರೆ. ಅವರ ತಾಯಿ ಗೀತಾ ಭಾರತಿ ಅವರ ಸಲುವಾಗಿ ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡಿದ್ದಾರೆ,ಹಾಗು ಅವರಿಗೆ ತೂಕ ಕಡಿಮೆ ಮಾಡಿಕೊಳ್ಳಲು ತುಂಬಾ ಸಹಾಯ ಮಾಡಿದ್ದಾರೆ ಆದ್ದರಿಂದ ನನ್ನ ಅಮ್ಮ ನನಗೆ ಸೂಪರ್ ಕ್ವೀನ್ ಎಂದು ಹೇಳಿದ್ದಾರೆ.
ಗೀತಾ ಭಾರತೀ ಅವರ ಬದಲಾವಣೆ ಯನ್ನು ನೋಡಿ,ನೀವು ತುಂಬಾ ಜನರಿಗೆ ಸ್ಫೂರ್ತಿ ಆಗುತ್ತೀರಾ ಎಂದು ಜಿ ಕನ್ನಡದ ಸೂಪರ್ ಕ್ವೀನ್ ಶೋ ನ ಜಡ್ಜ್ ಆದ ವಿಜಯ್ ರಾಘವೇಂದ್ರ ಅವರು ಹೇಳಿದ್ದಾರೆ.