General Coach: ರೈಲಿನಲ್ಲಿ ಜನರಲ್ ಭೋಗಿಗಳು ಮುಂಭಾಗ ಮತ್ತು ಹಿಂಭಾಗದಲ್ಲಿ ಮಾತ್ರ ಇರುತ್ತದೆ ಯಾಕೆ…? ಇಲ್ಲಿದೆ ಅಸಲಿ ಸತ್ಯ.
ರೈಲುಗಳಲ್ಲಿ ಜನರಲ್ ಭೋಗಿಯನ್ನು ಮೊದಲು ಮತ್ತು ಕೊನೆಯಲ್ಲಿ ಯಾಕೆ ಇರಿಸುತ್ತಾರೆ...?
Indian Railway General Coach: ರೈಲು ಪ್ರಯಾಣ ಭಾರತದಲ್ಲಿ ಅನೇಕರಿಗೆ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ದೂರದ ಪ್ರಯಾಣವನ್ನು ಮಾಡುವವರು ಹೆಚ್ಚಾಗಿ ರೈಲು ಪ್ರಯಾಣವನ್ನು ಆರಿಸುತ್ತಾರೆ. ರೈಲು ಪ್ರಯಾಣವು ಹೆಚ್ಚು ಆರಾಮದಾಯಕ ಹಾಗೂ ಸುರಕ್ಷಿತವಾಗಿರುತ್ತದೆ. ಇನ್ನು ಇತ್ತೀಚಿಗೆ ರೈಲ್ವೆ ನಿಯಮದಲ್ಲಿ ಸಾಕಷ್ಟು ನಿಯಮಗಳು ಬದಲಾಗಲಿವೆ. ಜೊತೆಗೆ ಹೊಸ ಹೊಸ ನಿಯಮಗಳು ಕೂಡ ಬಿಡುಗಡೆಯಾಗಿದೆ.
ರೈಲಿನ ಪ್ರಯಾಣಿಕರಿಗೆ ಸಾಕಷ್ಟು ಸೌಲಭ್ಯ ಕೂಡ ಬಿಡುಗಡೆಗೊಂಡಿದೆ. ಇನ್ನು ಸಾಮಾನ್ಯವಾಗಿ ಭಾರತೀಯ ರೈಲುಗಳು ಎಲ್ಲವು ಕೂಡ ಒಂದೇ ರೀತಿಯಲ್ಲಿ ಇರುತ್ತದೆ. ರೈಲುಗಳಲ್ಲಿ ಸಾಮಾನ್ಯವಾಗಿ General Coach ಹಾಗೂ AC Coach ಗಳು ಇರುತ್ತವೆ. ಇದೀಗ ನಾವು ರೈಲುಗಳಲ್ಲಿ ಜನರಲ್ ಭೋಗಿಯನ್ನು ಮೊದಲು ಮತ್ತು ಕೊನೆಯಲ್ಲಿ ಯಾಕೆ ಇರಿಸುತ್ತಾರೆ ಎನ್ನುವ ಬಗ್ಗೆ ತಿಳಿಯೋಣ.
ಜನರಲ್ ಭೋಗಿಯನ್ನು ಮೊದಲು ಮತ್ತು ಕೊನೆಯಲ್ಲಿ ಇರಿಸಲು ಕಾರಣ
ಜನರಲ್ ಕೋಚ್‌ಗಳು ಸಾಮಾನ್ಯವಾಗಿ ಸ್ಲೀಪರ್ ಮತ್ತು ಎಸಿ ಕೋಚ್‌ಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತವೆ. ಎಲ್ಲಾ ರೈಲುಗಳಲ್ಲಿ ಸಾಮಾನ್ಯ ಕೋಚ್ (General Coach) ಗಳು ಮುಂಬಾಗದಲ್ಲಿ ಮತ್ತು ಕೊನೆಯಲ್ಲಿ ಇರುತ್ತದೆ. ಹಾಗೆಯೆ ಎಸಿ ಕೋಚ್ (AC Coach) ಗಳು ರೈಲಿನ ಮಧ್ಯದಲ್ಲಿ ಇರುತ್ತದೆ. ರೈಲಿನಲ್ಲಿ ಕೋಚ್ ಗಳ ರಚನೆ ಈ ರೀತಿ ಇರಲು ಕಾರಣ ಏನೆಂಬುದನ್ನು ತಿಳಿಯೋಣ.
ರೈಲಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಸಾಮಾನ್ಯ ಕೋಚ್‌ಗಳನ್ನು ಇರಿಸುವುದು ಪ್ರಯಾಣಿಕರನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತದೆ. ಸಾಮಾನ್ಯ ಕೋಚ್ ನಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಹತ್ತುವುದು ಮತ್ತು ಇಳಿಯುವುದು ಮಾಡುವುದರಿಂದ ರೈಲಿನಲ್ಲಿ ಜನರಲ್ ಕೋಚ್ ಗಳು ರೈಲಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಇರುತ್ತದೆ.
ಸ್ಲೀಪರ್ ಮತ್ತು ಎಸಿ ಕೋಚ್ ಗಳಲ್ಲಿ ಸಾಮಾನ್ಯ ಕೋಚ್ ಗಳಿಗಿಂತ ಕಡಿಮೆ ಸಂಖ್ಯೆಯ ಪ್ರಯಾಣಿಕರು ಇರುತ್ತಾರೆ. ಹಾಗಾಗಿ ಸ್ಲೀಪರ್ ಮತ್ತು ಎಸಿ ಕೋಚ್ ಗಳನ್ನೂ ರೈಲಿನ ಮಧ್ಯದಲ್ಲಿ ರಚಿಸಲಾಗಿದೆ. ಒಂದು ವೇಳೆ ಮಧ್ಯದಲ್ಲಿ ಸಾಮಾನ್ಯ ಕೋಚ್ ಗಳನ್ನು ಇರಿಸಿದರೆ ರೈಲಿನ ಮಧ್ಯಭಾಗದಲ್ಲಿಯೇ ಜನರು ಹೆಚ್ಚಾಗಿ ಸೇರುತ್ತಾರೆ. ಆಗ ರೈಲ್ವೆ ನಿಲ್ದಾಣದ ವ್ಯವಸ್ಥೆಯಲ್ಲಿ ತುಂಬಾ ತೊಂದರೆಗಳಾಗುತ್ತವೆ.