Ads By Google

GPF Interest: ಸರ್ಕಾರಿ ನೌಕರರಿಗೆ ಬೇಸರದ ಸುದ್ದಿ, ನಿಮ್ಮ ಹಣಕ್ಕೆ ಸಿಗಲ್ಲ ಹೆಚ್ಚಿನ ಬಡ್ಡಿ.

Government employees GPF interest rate
Ads By Google

Government employees General Provident Fund: ಇದೀಗ ಕೇಂದ್ರ ಸರ್ಕಾರದಿಂದ (Central Govt) ಹೊಸ ಸುದ್ದಿ ಒಂದು ಪ್ರಕಟವಾಗಿದೆ. ಸರ್ಕಾರಿ ನೌಕರಿಗೆ ಕೇಂದ್ರ ಸರ್ಕಾರ ದೊಡ್ಡ ಶಾಕ್ ನೀಡಿದೆ. 65 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ದೊಡ್ಡ ಹೊಡೆತ ಬಿದ್ದಿದೆ.

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ ನಂತರ ಉದ್ಯೋಗಿಗಳ ಸಾಮಾನ್ಯ ಭವಿಷ್ಯ ನಿಧಿ ಮೇಲಿನ ಬಡ್ಡಿದರವನ್ನು ಕೂಡ ಹೆಚ್ಚಿಸುವ ನಿರೀಕ್ಷೆಯಿತ್ತು. ಆದರೆ ಸತತ 14 ನೇ ತ್ರೈಮಾಸಿಕ ಜೆಪಿಎಫ್ ಮೇಲಿನ ಬಡ್ಡಿ ದರದಲ್ಲಿ ಸರ್ಕಾರ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.

Image Credit: ipleaders

ಜಿಪಿಎಫ್ ನಲ್ಲಿ ಬಡ್ಡಿದರ ಏರಿಕೆ ಇಲ್ಲ
ಬಡ್ಡಿದರ ಏರಿಕೆ ಮಾಡದ ಕಾರಣ ಸರ್ಕಾರಿ ಉದ್ಯೋಗಿಗಳಿಗೆ ನಷ್ಟ ಉಂಟಾಗುತ್ತದೆ. 2023 ಏಪ್ರಿಲ್ ಮತ್ತು ಜೂನ್ ತ್ರೈಮಾಸಿಕದಲ್ಲೂ GPF ಬಡ್ಡಿ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.

ಏಪ್ರಿಲ್ 1 ರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಹಣಕಾಸು ಸಚಿವಾಲಯವು ಬದಲಾಯಿಸಿದೆ. ಆದರೆ ಸಾಮಾನ್ಯ ಭವಿಷ್ಯ ನಿಧಿ ಬಡ್ಡಿದರವನ್ನು ಹೆಚ್ಚಿಸದಿರಲು ಸರ್ಕಾರ ನಿರ್ಧಾರ ಮಾಡಿದೆ. ಇದರಿಂದಾಗಿ ಬಡ್ಡಿದರ ಏರಿಕೆ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರಿಗೆ ಶಾಕ್ ನೀಡಿದಂತೆ ಎನ್ನಬಹುದು.

Image Credit: india

ಜಿಪಿಎಫ್ ಹೂಡಿಕೆ
ಇನ್ನು ಸಾಮಾನ್ಯ ಭವಿಷ್ಯ ನಿಧಿಯನ್ನು ಸರ್ಕಾರಿ ನೌಕರರಿಗೆ ಮಾತ್ರ ನೀಡಲಾಗುತ್ತದೆ. GPF ಅಡಿಯಲ್ಲಿ ಸರ್ಕಾರಿ ನೌಕರರು ತಮ್ಮ ವೇತನದ ನಿರ್ದಿಷ್ಟ ಭಾಗವನ್ನು ಸಾಮಾನ್ಯ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಲು ಅನುವು ನೀಡಲಾಗಿದೆ. ಹೀಗೆ ಸಂಗ್ರಹವಾದ ಒಟ್ಟು ಮೊತ್ತವನ್ನು ನಿವೃತ್ತಿಯ ಸಮಯದಲ್ಲಿ ಉದ್ಯೋಗಿಗಳಿಗೆ ನೀಡಲಾಗುತ್ತದೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in