Chandraprabha: ಗಿಚ್ಚಿ ಗಿಲಿಗಿಲಿ ವಿನ್ನರ್ ಚಂದ್ರಪ್ರಭಾಗೆ ಸಿಕ್ಕ ಒಟ್ಟು ಬಹುಮಾನದ ಹಣ ಎಷ್ಟು.

ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿ ಮೊದಲನೇ ಸ್ಥಾನ ಪಡೆದ ಚಂದ್ರಪ್ರಭಾಗೆ ಸಿಕ್ಕ ಒಟ್ಟು ಬಹುಮಾನ ಎಷ್ಟು.

Gicchi Gili Gili Season 2 Winer Chandraprabha: ಕಲರ್ಸ್ ಕನ್ನಡ ವಾಹಿನಿಯ ನೆಚ್ಚಿನ ಕಾಮಿಡಿ ಶೋ ಆದ ಗಿಚ್ಚಿ ಗಿಲಿ ಗಿಲಿ ಸೀಸನ್ 2 (Gicchi Gili Gili Season 2) ಕಳೆದ ವಾರ ಅಂತ್ಯಗೊಂಡಿದೆ. ಗಿಚ್ಚಿ ಗಿಲಿ ಗಿಲಿ ಸೀಸನ್ 2 ಪಟ್ಟವನ್ನು ಜನಪ್ರಿಯ ಹಾಸ್ಯನಟ ಚಂದ್ರಪ್ರಭ ಅವರು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಚಂದ್ರಪ್ರಭ ಅವರು ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿ ಸಾಕಷ್ಟು ಹಾಸ್ಯಮಯ ಸ್ಕಿಟ್ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇನ್ನು ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿ ಗೆದ್ದವರಿಗೆ ಎಷ್ಟು ಲಕ್ಷ ಬಹುಮಾನವನ್ನು ನೀಡಲಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Gicchi Gili Gili season 2 is won by popular comedian Chandraprabha.
Image Credit: timesofindia

ಗಿಚ್ಚಿ ಗಿಲಿ ಗಿಲಿ ಸೀಸನ್ 2 ವಿನ್ನರ್ ಗೆ ಸಿಕ್ಕ ಬಹುಮಾನ ಎಷ್ಟು
ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿ ಚಂದ್ರಪ್ರಭಾ (Chandraprabha) ಅವರು ಮೊದಲನೇ ಸ್ಥಾನ ಪಡೆದು ವಿನ್ನರ್ ಟ್ರೋಫಿ ಜೊತೆಗೆ ಬರೋಬ್ಬರಿ 3 ಲಕ್ಷ ಬಹುಮಾನವನ್ನು ಪಡೆದಿದ್ದಾರೆ.

ಇನ್ನು ಗಿಚ್ಚಿ ಗಿಲಿ ಗಿಲಿ ಸೀಸನ್ 2 ನ ಫಸ್ಟ್ ರನ್ನರ್ ಆಗಿ ರಾಘವೇಂದ್ರ ಟ್ರೋಫಿ ಪಡೆದಿದ್ದಾರೆ. ಎರಡನೇ ಸ್ಥಾನ ಪಡೆದ ರಾಘವೇಂದ್ರ ಅವರಿಗೆ 2 ಲಕ್ಷ ಬಹುಮಾನವನ್ನು ನೀಡಲಾಗಿದೆ. ಮೂರನೇ ಸ್ಥಾನವನ್ನು ಜಾಹ್ನವಿ ಪಡೆದಿದ್ದು ಟ್ರೋಫಿ ಜೊತೆಗೆ 1 ಲಕ್ಷ ಬಹುಮಾನವನ್ನು ಪಡೆದಿದ್ದಾರೆ.

Gicchi Gili Gili season 2 is won by popular comedian Chandraprabha.
Image Credit: timesofindia

ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಂದ್ರಪ್ರಭ
ಚಂದ್ರಪ್ರಭ ಅವರು ಮಜಾಭಾರತ ಕಾಮಿಡಿ ಶೋ ನ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದರು. ನಂತರ ಒಂದಿಷ್ಟು ಚಿತ್ರಗಳಲ್ಲಿ ಹಾಸ್ಯ ಪಾತ್ರಧಾರಿಯಾಗಿ ನಟಿಸಿದ್ದಾರೆ.

Join Nadunudi News WhatsApp Group

ಇನ್ನು ಇತ್ತೀಚೆಗಷ್ಟೇ ಚಂದ್ರಪ್ರಭ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗಿಚ್ಚಿ ಗಿಲಿ ಗಿಲಿ ಸೀಸನ್ 2 ವೇದಿಕೆ ಮೇಲೆ ಕೂಡ ಚಂದ್ರಪ್ರಭ ಅವರ ಮದುವೆ ನಡೆದಿದೆ. ಇನ್ನು ಚಂದ್ರಪ್ರಭ ಅವರು ಮದುವೆ ಹಾಗೂ ಗಿಚ್ಚಿ ಗಿಲಿ ಗಿಲಿ ಸೀಸನ್ 2 ನ ಗೆಲುವಿನ ಸಂಭ್ರಮದಲ್ಲಿದ್ದಾರೆ.

Join Nadunudi News WhatsApp Group