Chandraprabha: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ, ಮದುವೆಯ ಫೋಟೋಗಳು ವೈರಲ್.
ಗಿಚ್ಚಿ ಗಿಲಿಗಿಲಿ ಶೋ ಮೂಲಕ ಫೇಮಸ್ ಆಗಿದ್ದ ಚಂದ್ರಪ್ರಭ ಅವರು ಮದುವೆಯನ್ನ ಮಾಡಿದ್ದು ಅವರ ಮದುವೆಯ ಫೋಟೋಸ್ ವೈರಲ್ ಆಗಿದೆ.
Gicchi Giligili Chandraprabha Marriage: ಕಿರುತೆರೆಯ ಜನಪ್ರಿಯ ಶೋ ಮಜಾಭಾರತ ಹಾಗು ಗಿಚ್ಚಿ ಗಿಲಿಗಿಲಿ ಯ ಹಾಸ್ಯ ಕಲಾವಿದ ಚಂದ್ರಪ್ರಭಾ ಅವರು ಇದೀಗ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹಾಸ್ಯ ಕಲಾವಿದ ಚಂದ್ರಪ್ರಭಾ ಅವರು ಕಿರುತೆರೆ ಶೋ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ಗಿಚ್ಚಿ ಗಿಲಿಗಿಲಿ ಹಾಸ್ಯ ಕಲಾವಿದ ಚಂದ್ರಪ್ರಭಾ
ಇದೀಗ ಚಂದ್ರಪ್ರಭಾ ಅವರು ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಕುರಿತಾಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಸ್ಯ ಕಲಾವಿದ ಚಂದ್ರಪ್ರಭಾ ಕಿರುತೆರೆಯ ಜನಪ್ರಿಯ ನಟರಾಗಿದ್ದಾರೆ. ನಗುವಿನ ಮೂಲಕ ಎಲ್ಲರನ್ನು ಮೋಡಿ ಮಾಡಿರುವ ಚಂದ್ರಪ್ರಭಾ ಬಹಳ ಜನಪ್ರಿಯತೆ ಪಡೆದಿದ್ದಾರೆ.
ಇದೀಗ ಈ ಹಾಸ್ಯ ನಟ ಸದ್ದಿಲ್ಲದೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದೆ. ಇದರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆ ಫೋಟೋ ಕೂಡ ವೈರಲ್ ಆಗಿದೆ.
ಸದ್ದಿಲ್ಲದೇ ಮದುವೆಯಾದ ಹಾಸ್ಯಕಲಾವಿದ ಚಂದ್ರಪ್ರಭಾ
ಹಾಸ್ಯ ಕಲಾವಿದ ಚಂದ್ರಪ್ರಭಾ ಅವರು ಗಿಚ್ಚಿ ಗಿಲಿಗಿಲಿಯ ಶೋ ನಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಈ ಮದ್ಯೆ ಇವರ ಮದುವೆ ಸುದ್ದಿ ಹರಿದಾಡುತ್ತಿದೆ. ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ಸದಾ ನಗು ಮುಖದಲ್ಲಿಯೇ ಎಲ್ಲರನ್ನು ರಂಜಿಸುತ್ತಿದ್ದ ಚಂದ್ರಪ್ರಭಾ ಅವರು ಮದುವೆ ಆಗಬೇಕು ಹೆಣ್ಣು ಕೊಡಿ ಅಂತ ಕೇಳುತ್ತಿದ್ದರು.
View this post on Instagram
ಆದರೆ ಈಗ ಸದ್ದಿಲ್ಲದೇ ಭಾರತೀ ಪ್ರಿಯ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಫೋಟೋಗಳನ್ನು ನೋಡಿದ ಚಂದ್ರಪ್ರಭಾ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಇಬ್ಬರು ಅಭಿಮಾನಿಗಳು ಶುಭಾಶಯವನ್ನ ಹೇಳಿದ್ದು ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.