Girl’s Students: ಹತ್ತು ವರ್ಷ ಮೇಲ್ಪಟ್ಟ ಹುಡುಗಿಯರು ಶಾಲೆಗೆ ಹೋಗುವುದು ನಿಷೇಧ, ಆತಂಕ ಹೊರಹಾಕಿದ ಪೋಷಕರು.
ಹತ್ತು ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳು ಶಾಲೆಗೆ ಹೋಗುದನ್ನು ನಿಷೇದ ಮಾಡಿದ ಸರ್ಕಾರ.
Girl’s Students Education: ಈ ಹಿಂದೆ ಪ್ರಪಂಚದಾದ್ಯಂತ ಅನಕ್ಷರಸ್ಥರ ಸಂಖ್ಯೆ ಹೆಚ್ಚಿತ್ತು. ವಿದ್ಯಾವಂತರು ಬೆರಳೆಣಿಕೆಗೆ ಮಾತ್ರ ಸಿಗುತ್ತಿದ್ದರು. ಆದರೆ ಈಗ ಎಲ್ಲರು ವಿದ್ಯಾವಂತರಾಗಲು ಬಯಸುತ್ತಾರೆ. ವಿದ್ಯೆ ಪಡೆದು ಉತ್ತಮ ಉದ್ಯೋಗ ಪಡೆಯುವ ಕನಸನ್ನು ಹೊತ್ತಿರುತ್ತಾರೆ.
ಪೋಷಕರು ತಮಗೆ ಮಕ್ಕಳು ಜನಿಸಿದ ಕೂಡಲೇ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸುತ್ತಾರೆ. ತಮ್ಮ ಮಗುವನ್ನು ಯಾವ ಶಾಲೆಗೆ ಸೇರಿಸಬೇಕು ಹಾಗೆಯೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು ಎನ್ನುವ ಬಗ್ಗೆ ಆಲೋಚಿಸುತ್ತಾರೆ.
ಹೆಣ್ಣು ಮಕ್ಕಳ ಶಿಕ್ಷಣ
ಈ ಹಿಂದೆ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವ ಅರ್ಹತೆಯನ್ನು ಹೊಂದಿರಲಿಲ್ಲ. ಕೇವಲ ಗಂಡು ಮಕ್ಕಳು ಮಾತ್ರ ಶಿಕ್ಷಣವನ್ನು ಪಡೆಯಬೇಕು ಎನ್ನುತ್ತಿದ್ದರು. ಆದರೆ ಪ್ರಸ್ತುತ ಜಗತ್ತಿನಲ್ಲಿ ಹೆಣ್ಣು ಮತ್ತು ಗಂಡು ಮಗು ಇಬ್ಬರಿಗೂ ಶಿಕ್ಷಣ ಪಡೆಯುವ ಹಕ್ಕಿದೆ.
ಹೆಣ್ಣು ಗಂಡಿಗೆ ಸಮವಾಗಿ ಎಲ್ಲದರಲ್ಲೂ ತನ್ನ ಹಕ್ಕನ್ನು ಪಡೆದಿರುತ್ತಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಗಾದೆ ಮಾತಿನಂತೆ ಶಾಲೆಗಳಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳೇ ಉತ್ತಮ ಅಂಕವನ್ನು ಗಳಿಸಿರುತ್ತಾರೆ.
ಶಿಕ್ಷಣ ನೀತಿಯಲ್ಲಿ ಬದಲಾವಣೆ
ಇನ್ನು ಇತ್ತೀಚಿಗೆ ಶಿಕ್ಷಣ ಇಲಾಖೆ ಹೊಸ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಈ ಬಾರಿ ಶಿಕ್ಷಣ ನೀತಿ ಸಂಪೂರ್ಣ ಬದಲಾಗಿದೆ. ಶಾಲಾ ಮಕ್ಕಳಿಗೆ ವಿವಿಧ ರೀತಿಯ ಸೌಲಭ್ಯವನ್ನು ನೀಡುವ ಜೊತೆಗೆ ಅನೇಕ ನಿಯಮವನ್ನು ಜಾರಿಗೊಳಿಸಿದೆ. ಶಾಲಾ ಮಕ್ಕಳ ಶಿಸ್ತು ಬದ್ಧತೆಗಾಗಿ ಹೊಸ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಶಿಕ್ಷಣ ಇಲಾಖೆ ನೀಡುವ ಸೌಲಭ್ಯದಿಂದ ಬಡ ಮಕ್ಕಳು ಕೂಡ ಸುಲಭವಾಗಿ ಶಿಕ್ಷಣವನ್ನು ಪಡೆಯಬಹುದಾಗಿದೆ.
ಹತ್ತು ವರ್ಷ ಮೇಲ್ಪಟ್ಟ ಹುಡುಗಿಯರು ಶಾಲೆಗೆ ಹೋಗುವುದು ನಿಷೇಧ
ಹೌದು ಅಫ್ಘಾನ್ ನಲ್ಲಿ ಅಧಿಕಾರದ್ಲಲಿರುವ ತಾಲಿಬಾನ್ ಕೆಲವು ಪ್ರಾಂತ್ಯಗಳಲ್ಲಿ 10 ವರ್ಷ ಮೇಲ್ಪಟ್ಟ ಹುಡುಗಿಯರು ಶಾಲೆಗೇ ಹೋಗುವುದನ್ನು ನಿಷೇಧಿಸಿದೆ. ಹತ್ತು ವರ್ಷ ಮೇಲ್ಪಟ್ಟ ಹುಡುಗಿಯರು ಶಾಲೆಗೆ ಹೋಗುವುದು ನಿಷೇಧಿಸಿರುವ ಬಗ್ಗೆ ಬಿಬಿಸಿ ಪರ್ಷಿಯನ್ ವರದಿ ಮಾಡಿದೆ.
ಶಾಲೆಗಳಿಗೆ ಹಾಗೂ ಕಿರು ಅವಧಿಯ ತರಬೇತಿ ಕಾರ್ಯಕ್ರಮಗಳಲ್ಲಿ 10 ವರ್ಷ ಮೇಲ್ಪಟ್ಟ ಹುಡುಗಿಯರು ಭಾಗವಹಿಸಲು ಅವಕಾಶವಿಲ್ಲ ಎಂದು ಘಜ್ನಿ ಪ್ರಾಂತದಲ್ಲಿನ ಶಾಲೆಗಳ ಮುಖ್ಯಸ್ಥರಿಗೆ ಅಫ್ಘಾನ್ ಶಿಕ್ಷಣಾ ಇಲಾಖೆ ಸುತ್ತೋಲೆ ರವಾನಿಸಿದೆ. ಇತರ ಕೆಲವು ಪ್ರಾಂತ್ಯಗಳಲ್ಲಿ 3 ನೇ ತರಗತಿಗಳಿಗಿಂತ ಮೇಲ್ಪಟ್ಟ ತರಗತಿಗಳಲ್ಲಿ ಅಧ್ಯಯನ ನಡೆಸುತ್ತಿರುವ ಹುಡುಗಿಯರನ್ನು ಶಾಲೆಯಿಂದ ಹೊರಗೆ ಕಳುಹಿಸುವಂತೆ ಇಲಾಖೆ ಸೂಚಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.