Gmail Inactivation: ಡಿ. 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ Gmail ಅಕೌಂಟ್ ಬ್ಯಾನ್, ಗೂಗಲ್ ನಿಂದ ಹೊಸ ರೂಲ್ಸ್.
ಡಿಸೆಂಬರ್ 31 ರೊಳಗೆ ಈ ಕೆಲಸ ಮಾಡದಿದ್ದರೆ ಅಂತವರ Gmail ಅಕೌಂಟ್ ನಿಷ್ಕ್ರಿಯವಾಗಲಿದೆ.
Gmail Account Inactivation Update: ಎಲ್ಲ ಮೊಬೈಲ್ ಫೋನ್ ಗಳಲ್ಲೂ ಬಳಕೆಯಲ್ಲಿರುವ ಅಪ್ಲಿಕೇಶನ್ ಎಂದರೆ ಅದು Google ಎನ್ನಬಹುದು. Google ಬಗ್ಗೆ ಯಾರಿಗೆ ತಾನೇ ಮಾಹಿತಿ ತಿಳಿದಿಲ್ಲ. ಮೊಬೈಲ್ ಬಳಸುವ ಪ್ರತಿಯೊಬ್ಬರು ಕೂಡ Google ಅನ್ನು ಬಳಸೆ ಬಳಸುತ್ತಾರೆ. ಯಾವುದೇ ರೀತಿಯ ಸಣ್ಣ ವಿಷಯದ ಬಗ್ಗೆ ಮಾಹಿತಿ ತಿಳಿಯಬೇಕಿದ್ದರು ಕೂಡ ಮೊದಲು Google ವೆಬ್ ಸೈಟ್ ಗೆ ಭೇಟಿ ನೀಡುವುದು ಸಹಜ.
Google ವಿಶ್ವದಲ್ಲೇ ಎಲ್ಲ ಮಾಹಿತಿಯ್ನನು ನೀಡುವ ಅತಿ ದೊಡ್ಡ ಅಪ್ಲಿಕೇಶನ್ ಆಗಿದೆ. ವಿಶ್ವದ ಕೋಟ್ಯಾಂತರ ಜನರಿಗೆ ಗೂಗಲ್ ಒಂದಲ್ಲ ಒಂದು ರೀತಿಯಲ್ಲಿ ಸಹಾಯವಾಗಿದೆ. ಇನ್ನು ಗೂಗಲ್ ತನ್ನ ಬಳಕೆದಾರರಿಗೆ ವಿವಿಧ ರೀತಿಯ ಸೇವೆಗಳನ್ನು ನೀಡುತ್ತಾ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಇದೀಗ ಗೂಗಲ್ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಬಳಕೆಯಾಗದ ಖಾತೆಗಳನ್ನು ಡಿಲೀಟ್ ಮಾಡಲು ಗೂಗಲ್ ನಿರ್ಧರಿಸಿದ್ದು, ಈ ದಿನಾಂಕದೊಳಗೆ ನೀವು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.
ಗೂಗಲ್ ಬಳಕೆದಾರಿಗೆ ಬಿಗ್ ಅಪ್ಡೇಟ್
ಸಣ್ಣ ಪದದ ಅರ್ಥದಿಂದ ಹಿಡಿದು ವ್ಯಕ್ತಿಯ ಮಾಹಿತಿಯನ್ನು ಕೂಡ Google ನಲ್ಲಿ ತಿಳಿದುಕೊಳ್ಳಬಹುದು. ಗೂಗಲ್ ತನ್ನ ಬಳಕೆದಾರರಿಗೆ ಸೇವೆಯನ್ನು ವಿಸ್ತರಿಸುತ್ತ ಹೋಗುತ್ತಿದೆ. ಬಳಕೆದಾರರಿಗೆ ಗೂಗಲ್ ಹೆಚ್ಚಿನ ಪ್ರಯೋಜನಕಾರಿಯಾಗಿದೆ. ಗೂಗಲ್ ಅನ್ನು ದೇಶದಲ್ಲಿ ಶತಕೋಟಿ ಜನರು ಬಳಕೆ ಮಾಡುತ್ತಾರೆ. ಸದ್ಯ ಗೂಗಲ್ ಎರಡು ವರ್ಷಗಳಿಂದ ಬಳಸದ Gmail Account ಗಳನ್ನ ಡಿಲೀಟ್ ಮಾಡಲು ತೀರ್ಮಾನವನ್ನ ಮಾಡಿದೆ.
ಗೂಗಲ್ ಖಾತೆಯನ್ನು ನಿಷ್ಕ್ರಿಯ ಗೊಳಿಸುವ ಮೊದಲು ತನ್ನ ಬಳಕೆದಾರರಿಗೆ ಸಂದೇಶವನ್ನು ಕಳುಹಿಸುತ್ತದೆ. ಕಂಪನಿಯು ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಮೊದಲು ಅಥವಾ ಯಾವುದೇ ವಿಷಯವನ್ನು ಅಳಿಸುವ ಮುಂಚೆ ಬಳಕೆದಾದರಿಗೆ ಜ್ಞಾಪನೆಯ ಇಮೇಲ್ ಗಳನ್ನ ಕಳಿಸುತ್ತದೆ. ನಿಮ್ಮ ಖಾತೆಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಗೂಗಲ್ ನಿಮಗೆ ಇಮೇಲ್ ಗಳನ್ನೂ ಕನಿಷ್ಠ 8 ತಿಂಗಳ ಮೊದಲು ಕಳುಹಿಸುತ್ತದೆ.
ಡಿ. 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ Gmail ಅಕೌಂಟ್ ಬ್ಯಾನ್
ಗೂಗಲ್ ಖಾತೆಯನ್ನು ಅಳಿಸಿದ ನಂತರ ಹೊಸ ಖಾತೆಯನ್ನು ರಚಿಸುವಾಗ ಅಳಿಸಲಾದ ಖಾತೆಯ Gmail ಅನ್ನು ಮತ್ತೆ ಬಳಸಲು ಸಾಧ್ಯವಿಲ್ಲ ಎಂದು ಕಂಪನಿ ಹೇಳಿದೆ. ಗೂಗಲ್ ಖಾತೆಯನ್ನು ಸಕ್ರಿಯವಾಗಿರಿಸಲು ಸರಳವಾದ ಮಾರ್ಘ ವೆಂದರೆ ಕನಿಷ್ಠ ಎರಡು ವರ್ಷಗಳಿಗೊಮ್ಮೆಯಾದರು ನಿಮ್ಮ ಖಾತೆಯನ್ನು ಲಾಗ್ ಇನ್ ಮಾಡಬೇಕು.
ನೀವು ಇತ್ತೀಚೆಗೆ ನಿಮ್ಮ ಖಾತೆಯನ್ನು ಸೈನ್ ಇನ್ ಮಾಡಿದ್ದರೆ ನಿಮ್ಮ ಖಾತೆ ಸಕ್ರಿಯವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಅಳಿಸುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ. ಹೀಗಾಗಿ ನೀವು ವರ್ಷಗಳಿಂದ Google ಖಾತೆಗೆ ಸೈನ್ ಇನ್ ಮಾಡದಿದ್ದರೆ ಇಂದೇ ಸೈನ್ ಇನ್ ಮಾಡಿಕೊಳ್ಳಿ. December 31 ರವರೆಗೆ Gmail Account Sigh In ಗೆ ಗೂಗಲ್ ಅವಕಾಶವನ್ನು ನೀಡಿದೆ. ಹೀಗಾಗಿ ಡಿ. 31 ರೊಳಗೆ ನೀವು Gmail ಅಕೌಂಟ್ ಗೆ ಸೈನ್ ಇನ್ ಮಾಡಿ. ಇಲ್ಲವಾದರೆ ನಿಮ್ಮ ಗೂಗಲ್ ಅಕೌಂಟ್ ನಿಷ್ಕ್ರಿಯಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.