Go Saving Account: ದೇಶದಲ್ಲಿ ಜಾರಿಗೆ ಬಂತು “ಗೋ” ಉಳಿತಾಯ ಖಾತೆ, ಖಾತೆ ತೆರೆದರೆ ಸಿಗಲಿದೆ 1 ಕೋಟಿ ರೂ ವಿಮೆ.
ದೇಶದ ಈ ಬ್ಯಾಂಕಿನಲ್ಲಿ ತೆರೆಯವಾಗುದು "ಗೋ" ಸೇವಿಂಗ್ ಅಕೌಂಟ್.
RBL Bank Go Saving Account: ಜನರು ತಮ್ಮ ಬಳಿ ಇರುವ ಹಣದ ಉಳಿತಾಯಕ್ಕಾಗಿ ಬ್ಯಾಂಕ್ ಖಾತೆಯನ್ನು ತೆರೆಯುತ್ತಾರೆ. ಇನ್ನು ಸರ್ಕಾರೀ ಹಾಗೂ ಸರ್ಕಾರೇತರ ಕೆಲಸಗಳಿಗೆ ಬ್ಯಾಂಕ್ ಖಾತೆ ಹೊಂದಿರುವುದು ಅಗತ್ಯವಾಗಿದೆ.
ಪ್ರತಿಯೊಬ್ಬರು ಕೂಡ ಒಂದಾದರು ಉಳಿತಾಯ ಖಾತೆಯನ್ನು ಹೊಂದೆ ಹೊಂದಿರುತ್ತಾರೆ. ಇನ್ನು ಬ್ಯಾಂಕ್ ಗಳಲ್ಲಿ ಖಾತೆಯನ್ನು ತೆರೆಯಲು ವಿವಿಧ ಆಯ್ಕೆಗಳಿದ್ದರೂ, ಜನರು ಹೆಚ್ಚಾಗಿ Saving Account ಅನ್ನೇ ಆರಿಸುತ್ತಾರೆ. ಸದ್ಯ ದೇಶದ ಈ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ.
ದೇಶದಲ್ಲಿ ಜಾರಿಗೆ ಬಂತು ಗೋ ಉಳಿತಾಯ ಖಾತೆ (Go Saving Account)
ಖಾಸಗಿ ವಲಯದ RBL ಬ್ಯಾಂಕ್ ತನ್ನ ಇತ್ತೀಚಿನ ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನ ಗೋ ಉಳಿತಾಯ ಖಾತೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಖಾತೆಯನ್ನು ತೆರೆಯುವುದು ಸುಲಭ ಮತ್ತು ಸುಲಭವಾಗಿ ನಿರ್ವಹಿಸಬಹುದಾಗಿದೆ. ಗೋ ಉಳಿತಾಯ ಖಾತೆ ಶೂನ್ಯ ಬ್ಯಾಲೆನ್ಸ್ ಖಾತೆಯಾಗಿದೆ. ಈ ಉತ್ಪನ್ನವು ಎಲ್ಲಾ ವಯೋಮಾನದ ಗ್ರಾಹಕರ ಅಗತ್ಯತೆಗಳನ್ನು ಪೂರೈಸುತ್ತದೆ. ಗೋ ಉಳಿತಾಯ ಖಾತೆಯು ಚಂದಾದಾರಿಕೆ ಆಧಾರಿತ ಮಾದರಿಯಾಗಿದೆ.
ಈ ಬ್ಯಾಂಕಿನಲ್ಲಿ ಇಂದೇ ಖಾತೆ ತೆರೆದು 7.5 % ಬಡ್ಡಿ ಪಡೆಯಬಹುದು
ಇನ್ನು RBL ಬ್ಯಾಂಕ್ ನ Go savings account ವಾರ್ಷಿಕ 7.5 ಪ್ರತಿಶತದವರೆಗೆ ಹೆಚ್ಚಿನ ಬಡ್ಡಿದರಗಳು, ಪ್ರೀಮಿಯಂ ಡೆಬಿಟ್ ಕಾರ್ಡ್ ಮತ್ತು ಪ್ರೀಮಿಯರ್ ಬ್ರ್ಯಾಂಡ್ ಗಳಿಂದ ರೂ 1,500 ಮೌಲ್ಯದ ವೋಚರ್ ಸೇರಿದಂತೆ ಇನ್ನಿತರ ಸೌಲಭ್ಯವನ್ನು ನೀಡುತ್ತದೆ.
ಈ ಖಾತೆಯು 1 ಕೋಟಿ ರೂ. ವರೆಗಿನ ಸಮಗ್ರ ಸೈಬರ್ ವಿಮಾ ರಕ್ಷಣೆ, ಅಪಘಾತ ಮತ್ತು ಪ್ರಯಾಣ ವಿಮೆ ಮತ್ತು ಉಚಿತ CIBIL ವರದಿಯನ್ನು ಸಹ ನೀಡುತ್ತದೆ. ಈ ಖಾತೆಯು ಪ್ರೀಮಿಯಂ ಬ್ಯಾಂಕಿಂಗ್ ಸೇವೆಗಳ ಶ್ರೇಣಿಯನ್ನು ಸಹ ನೀಡುತ್ತದೆ. ಇದರಲ್ಲಿ, ಮೊದಲ ವರ್ಷದ ಚಂದಾದಾರಿಕೆ ಶುಲ್ಕ 1,999 ರೂ. ಹಾಗೆಯೆ ಖಾತೆಯಲ್ಲಿ ವಾರ್ಷಿಕ ನವೀಕರಣ ಶುಲ್ಕ 599 ರೂ. ಆಗಿದೆ.