Goat: ಕಡಿಮೆ ಜಾಗದಲ್ಲಿ ಸಾಕಾಣಿಕೆ ಮಾಡಿ ಈ ತಳಿಯ ಮೇಕೆ, ಒಂದು ಮೇಕೆಯ ಬೆಲೆ ಲಕ್ಷಕ್ಕೂ ಅಧಿಕ.
ಮೇಕೆ ಸಾಕಾಣಿಕೆಯಿಂದ ಗಳಿಸಬಹುದು ಉತ್ತಮ ಲಾಭ.
Goat Business: ಹೆಚ್ಚಿನ ಜನರು ಪ್ರಾಣಿ ಸಾಕಾಣಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಕೆಲ ಜನರು ಪ್ರಾಣಿ ಪ್ರಿಯರಾಗಿದ್ದು ಪ್ರಾಣಿಗಳ ಆರೈಕೆ ಮಾಡಲು ಇಷ್ಟಪಡುತ್ತಾರೆ. ಆದರೆ ಇನ್ನು ಕೆಲವರು ಕೋಳಿ, ಮೇಕೆ, ಕುರಿ ಸೇರಿದಂತೆ ಇನ್ನಿತರ ಮಾಂಸಾಹಾರಿ ಪ್ರಾಣಿಗಳನ್ನು ಸಾಕುತ್ತಾರೆ. ಕೋಳಿ ,ಕುರಿ ಸಾಕಾಣಿಕೆ ಹೆಚ್ಚಿನ ಲಾಭ ನೀಡುವ ಕೆಲಸವಾಗಿದೆ.
ಸಣ್ಣ ಪ್ರಾಣಿಗಳ ಸಾಕಾಣಿಕೆ ಹೆಚ್ಚಿನ ಖರ್ಚನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಜನರು ಸಣ್ಣ ಪ್ರಾಣಿಗಳನ್ನು ಸಾಕಲು ಇಷ್ಟಪಡುತ್ತಾರೆ. ಪ್ರಸ್ತುತ ದೇಶದಾದ್ಯಂತ ಮೇಕೆಗಳ ಮೇಲೆ ಹೆಚ್ಚಿನ ಬೇಡಿಕೆ ಇದೆ. ಮೇಕೆಗಳ ಮಾಂಸದ ಬೆಲೆ ದುಬಾರಿಯಾಗಿದೆ.
ಇನ್ನು ಮೇಕೆಗಳನ್ನು ಸಾಕುವ ಮುನ್ನ ಮೇಕೆಗಳು ಯಾವ ತಳಿಗೆ ಸೇರಿರುತ್ತವೆ ಎನ್ನುವುದನ್ನು ತಿಳಿಯುವುದು ಉತ್ತಮ. ಏಕೆಂದರೆ ಕೆಲವು ತಳಿಯ ಮೇಕೆಗಳು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ. ತಳಿಗಳ ಆಧಾರದ ಮೇಲೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಇದೀಗ ಉತ್ತಮ ತಳಿಯ ಮೇಕೆಗಳು ಯಾವುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
*ಜಖರಾನ ತಳಿಯ ಮೇಕೆಗಳು
ಜಖರಾನ ತಳಿಯ ಮೇಕೆಗಳು ರಾಜಸ್ತಾನದಲ್ಲಿ ಲಭ್ಯವಿರುತ್ತದೆ. ಈ ಮೇಕೆಯ ದೇಹದ ತೂಕವು 50 ರಿಂದ 55 ಕೆಜಿ ಇರುತ್ತದೆ. ಭಾರತದಲ್ಲಿ ಈ ತಳಿಯ ಮೇಕೆಯ ಬೆಲೆ ಒಂದು ಲಕ್ಷಕ್ಕಿಂತ ಅಧಿಕವಾಗಿದೆ.
*ಬೀಟಲ್ ತಳಿಯ ಮೇಕೆಗಳು
ಬೀಟಲ್ ತಳಿಯ ಮೇಕೆಗಳು ಸದೃಢ ದೇಹವನ್ನು ಹೊಂದಿರುತ್ತದೆ. ಬಕ್ರೀದ್ ಸಮಯದಲ್ಲಿ ಈ ತಾಯಿಯ ಮೇಕೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಮೇಕೆಯ ದೇಹದ ತೂಕವು 50 ರಿಂದ 60 ಕೆಜಿ ಇರುತ್ತದೆ. ಹೆಣ್ಣು ಮೇಕೆಯು ಸುಮಾರು 45 ಕೆಜಿ ತೂಕವಿರುತ್ತದೆ.
*ಗೋಹಿಲ್ವಾಡಿ ತಳಿಯ ಮೇಕೆಗಳು
ಗೋಹಿಲ್ವಾಡಿ ತಳಿಯ ಮೇಕೆಗಳು ವಿವಿದೋದ್ದೇಶ ತಳಿಯಾಗಿದೆ. ಗುಜರಾತ್ ನ ಭಾವನಗರ, ಅಮ್ರೇಲಿ ಮತ್ತು ಜುನಾಗಢ ಜಿಲ್ಲೆಗಳಲ್ಲಿ ಈ ತಳಿಯ ಮೇಕೆಗಳನ್ನು ಹಾಲು ಮತ್ತು ಮಾಂಸಕ್ಕಾಗಿ ಸಾಕಲಾಗುತ್ತದೆ. ಗೋಹಿಲ್ವಾಡಿ ತಳಿಯ ಮೇಕೆಯ ದೇಹದ ತೂಕವು 45 ರಿಂದ 50 ಕೆಜಿ ಇರುತ್ತದೆ.
*ಕಪ್ಪು ಬೆಂಗಾಲ್ ತಳಿಯ ಮೇಕೆಗಳು
ಕಪ್ಪು ಬೆಂಗಾಲ್ ತಳಿಯ ಮೇಕೆಗಳು ಬೆಂಗಾಲದಲ್ಲಿ ಕಂಡು ಬರುತ್ತದೆ. ದಕ್ಷಿಣ ಮತ್ತು ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಅಸ್ಸಾಂ, ಒರಿಸ್ಸಾ, ಮೇಘಾಲಯ ಮತ್ತು ತ್ರಿಪುರಾದಲ್ಲಿ ಮಾಂಸಕ್ಕಾಗಿ ಸಾಕಲಾಗುತ್ತದೆ. ಈ ಮೇಕೆಯ ದೇಹದ ತೂಕವು 25 ರಿಂದ 30 ಕೆಜಿ ಇರುತ್ತದೆ. ಹೆಣ್ಣು ಮೇಕೆಯು ಸುಮಾರು 20 ರಿಂದ 25 ಕೆಜಿ ತೂಕವಿರುತ್ತದೆ.
*ಬಾರ್ಬರಿ ತಳಿಯ ಮೇಕೆಗಳು
ಇನ್ನು ಅತಿ ಕಡಿಮೆ ಬೆಲೆಗೆ ಬಾರ್ಬರಿ ತಳಿಯ ಮೇಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಉತ್ತರ ಪ್ರದೇಶದ ಇಟಾಹ್, ಅಲಿಘರ್ ಮತ್ತು ಆಗ್ರಾ ಜಿಲ್ಲೆಗಳಲ್ಲಿ ಈ ಮೇಕೆಗಳನ್ನು ಹೆಚ್ಚಾಗಿ ಸಾಕಲಾಗುತ್ತದೆ. ಬಾರ್ಬರಿ ತಳಿಯ ಮೇಕೆಯ ದೇಹದ ತೂಕವು 25 ರಿಂದ 30 ಕೆಜಿ ಇರುತ್ತದೆ. ಈ ತಳಿಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ.