Black Bengal Goat: ಸಣ್ಣ ಜಾಗದಲ್ಲಿ ಈ ಕಪ್ಪು ಮೇಕೆ ಸಾಕಿದರೆ ನೀವೇ ಲಕ್ಷಾಧಿಪತಿಗಳು, ಈ ಮೇಕೆ ಹಾಲಿಗೆ ಸಕತ್ ಡಿಮ್ಯಾಂಡ್.

ಈ ಮೇಕೆಯ ವ್ಯವಹಾರ ಆರಂಭ ಮಾಡಿದರೆ ಕೆಲವೇ ದಿನದಲ್ಲಿ ನೀವೇ ಲಕ್ಷಾಧಿಪತಿಗಳು.

Black Bengal Goat Farming: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ವ್ಯವಹಾರಗಳಿಗೂ ಒಂದು ರೀತಿಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಜನರು ಹೆಚ್ಚಾಗಿ ಸಣ್ಣ ಪರ್ಣಿ ಸಾಕಾಣಿಕೆಯ ವ್ಯವಹಾರವನ್ನು ಮಾಡಲು ಇಷ್ಟಪಡುತ್ತಾರೆ.

ಸಣ್ಣ ಪ್ರಾಣಿಗಳು ಎಂದರೆ ಕುರಿ, ಕೋಳಿ, ಮೇಕೆ ಸಾಕಾಣಿಕೆಯ ಆಯ್ಕೆ ಜನರಿಗೆ ಸಿಗುತ್ತದೆ. ಇನ್ನು ಜನರು ಮೇಕೆ ಸಾಕಾಣಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಗಳಿಸಬಹುದು. ಏಕೆಂದರೆ ಮೇಕೆಗಳ ಮಾಂಸ ಮತ್ತು ಹಾಲಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಹೀಗಾಗಿ ಮೇಕೆ ಸಾಕಾಣಿಕೆ ಜನರಿಗೆ ಲಾಭವನ್ನು ನೀಡುತ್ತದೆ.

Black Bengal Goat Farming
Image Source: Daily Sun

ಮೇಕೆ ಸಾಕಾಣಿಕೆ ಯಾವ ತಳಿ ಮೇಕೆ ಉತ್ತಮ
ಇನ್ನು ಮೇಕೆಗಳಲ್ಲಿ ಸಾಕಷ್ಟು ವಿವಿಧ ತಳಿಯ ಮೇಕೆಗಳಿರುತ್ತದೆ. ಮೇಕೆಗಳ ತಳಿಗಳು ವಿವಿಧ ಬಣ್ಣವನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕಪ್ಪು ಬಣ್ಣದ ಮೇಕೆ ತಳಿಗಳು ಕಂಡು ಬರುತ್ತದೆ. ಈ ಕಪ್ಪು ಬಣ್ಣದ ಮೇಕೆ ತಳಿಗಳನ್ನು “Black Bengal” ಮೇಕೆ ಎಂದು ಕರೆಯುತ್ತಾರೆ. ಈ Black Bengal ಮೇಕೆ ತಳಿಗಳು ವಿಶೇಷ ತಳಿಯ ಮೇಕೆಯಾಗಿದೆ. ಈ ತಳಿಯ ಮೇಕೆಗಳು ಜಾರ್ಖಂಡ್ ಸೇರಿದಂತೆ ಪಶ್ಚಿಮ ಬಂಗಾಳ, ಅಸ್ಸಾಂ, ಉತ್ತರ ಒರಿಸ್ಸಾ ಮತ್ತು ಬಂಗಾಳದಲ್ಲಿ ಕಂಡುಬರುತ್ತವೆ.

Black Bengal ಮೇಕೆ ತಳಿಗಳು ನೋಡಲು ಹೇಗಿರುತ್ತದೆ..?
ಈ ತಳಿಗಳು ಎತ್ತರದಲ್ಲಿ ಚಿಕ್ಕದಾಗಿದ್ದು, ದೇಹದಲ್ಲಿ ಸಣ್ಣ ಕಪ್ಪು, ಕಂದು ಮತ್ತು ಬಿಳಿ ಬಣ್ಣದ ಕೂದಲು ಕಂಡುಬರುತ್ತದೆ. ಗಂಡು ಮತ್ತು ಹೆಣ್ಣುಗಳೆರಡೂ ನೇರವಾಗಿ ಮುಂದಕ್ಕೆ ಕೊಂಬನ್ನು ಹೊಂದಿರುತ್ತವೆ. ಅವುಗಳ ಕೊಂಬುಗಳು 3 ರಿಂದ 4 ಇಂಚು ಉದ್ದವಿರುತ್ತದೆ. ದೇಹವು ಸ್ನಾಯುಗಳಾಗಿರುತ್ತದೆ. ಮುಂಭಾಗದಿಂದ ಹಿಂಭಾಗಕ್ಕೆ ಅಗಲವಾಗಿರುತ್ತದೆ ಮತ್ತು ಮಧ್ಯದಲ್ಲಿ ದಪ್ಪವಾಗಿರುತ್ತದೆ. ಈ ತಳಿಯ ಮೇಕೆಯ ಕಿವಿಗಳು ಚಿಕ್ಕದಾಗಿದ್ದು ನೆಟ್ಟಗೆ ಮತ್ತು ಮುಂದಕ್ಕೆ ಚಾಚಿಕೊಂಡಿರುತ್ತವೆ.

Black Bengal Goat Farming
Image Source: UNB

ಬ್ಲಾಕ್ ಬೆಂಗಾಲ್ ಮೇಕೆಯ ಆಹಾರ ವಿಧಾನ
ಕಡಿಮೆ ವೆಚ್ಛ್ಗ ಹಾಗೂ ಸಣ್ಣ ಜಗದಲ್ಲಿ ಬಹುತೇಕ ಎಲ್ಲಾ ಹವಾಮಾನಗಳಲ್ಲಿ ಈ ಮೇಕೆ ಸಾಕಣೆ ಸಾಧ್ಯವಾಗುತ್ತದೆ. ಈ ಮೇಕೆ ಹೆಚ್ಚಾಗಿ ಹೊಟ್ಟು ಮತ್ತು ಧಾನ್ಯವನ್ನು ತಿನ್ನುತ್ತದೆ. ಮೇಕೆ ಸಾಕಣೆಗೆ ಬೆಳಗ್ಗೆ ಮತ್ತು ಸಂಜೆ 2 ಗಂಟೆ ಮೀಸಲಿಡಬೇಕು. ಮೇಕೆಗೆ ಒಣ ಹುಲ್ಲು ತಿನ್ನಿಸಿದರೆ ಮೇಕೆಗೆ ಅನುಕೂಲವಾಗುವುದಲ್ಲದೆ ಅಗ್ಗವೂ ಆಗುತ್ತದೆ. ನೀವು ದ್ವಿದಳ ಧಾನ್ಯಗಳ ಒಣ ಒಣಹುಲ್ಲಿನ ಆಹಾರವನ್ನು ಈ ಮೇಕೆಯ ತಳಿಗಳಿಗೆ ನೀಡಬಹುದು.

Join Nadunudi News WhatsApp Group

ಬ್ಲಾಕ್ ಬೆಂಗಾಲ್ ಮೇಕೆಯ ಬೆಲೆ ಎಷ್ಟು ಗೊತ್ತಾ..?
ಇನ್ನು ಈ ತಳಿಯ ವಯಸ್ಕ ಗಂಡು ಮೇಕೆ ತೂಕವು ಸುಮಾರು 18 ರಿಂದ 20 ಕೆ.ಜಿ. ಇದರೊಂದಿಗೆ ಹೆಣ್ಣಿನ ತೂಕ 15 ರಿಂದ 18 ಕೆ.ಜಿ. ಇರುತ್ತದೆ. ಒಂದು ಹೆಣ್ಣು ಮೇಕೆ 3 ರಿಂದ 4 ತಿಂಗಳವರೆಗೆ ಪ್ರತಿದಿನ 300 ರಿಂದ 400 ಮಿಲಿ ಹಾಲು ನೀಡಬಹುದು. ಬ್ಲಾಕ್ ಬೆಂಗಾಲ್ ತಳಿಯ ಮೇಕೆಗಳ ಬೆಲೆ 15 ರಿಂದ 20 ಸಾವಿರ ರೂ. ಇರುತ್ತದೆ. ಸಣ್ಣ ಜಾಗದಲ್ಲಿ ಈ ಕಪ್ಪು ಮೇಕೆ ಸಾಕಿದರೆ ನೀವು ತಿಂಗಳಲ್ಲಿಯೇ ಲಕ್ಷ ಲಕ್ಷ ಹಣ ಸಂಪಾದಿಸಬಹುದು.

Join Nadunudi News WhatsApp Group