Eblu Feo: ವರಮಹಾಲಕ್ಷ್ಮಿ ಹಬ್ಬದ ಬಂಪರ್ ಆಫರ್, 110 Km ಮೈಲೇಜ್ ಕೊಡುವ ಗೋದಾವರಿ ಬೈಕ್ ಕಡಿಮೆ ಬೆಲೆಗೆ.
ಇದೀಗ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ ಕೈಗೆಟಕುವ ಬೆಲೆಯಲ್ಲಿ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.
Godawari Eblu Feo Electric Scooter: ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸುತ್ತಿವೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.
ಇದೀಗ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ (Godawari Electric Motor)ಕೈಗೆಟಕುವ ಬೆಲೆಯಲ್ಲಿ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ನಾವೀಗ ಒಂದಿಷ್ಟು ಮಾಹಿತಿ ತಿಳಿಯೋಣ.
ಗೋದಾವರಿ ಎಬ್ಲು ಫಿಯೋ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ
ಗೋದಾವರಿ ಎಬ್ಲು ಫಿಯೋ ಎಲೆಕ್ಟ್ರಿಕ್ ಸ್ಕೂಟರ್ ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯ ಗಳನ್ನೂ ಹೊಂದಿದೆ. ಈ ಸ್ಕೂಟರ್ ಧೂಳು ಮತ್ತು ಜಲ ನಿರೋಧಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈಗಾಗಲೇ ಬುಕಿಂಗ್ ಆರಂಭವಾಗಿದೆ . ಹಾಗೆ ಇಂದಿನಿಂದಲೇ (ಆಗಸ್ಟ್ 23) ವಿತರಣೆ ಆರಂಭವಾಗಿದೆ. ಇದರ ಆರಂಭಿಕ ಬೆಲೆ ಎಕ್ಸ್ ಶೋರೂಮ್ ಪ್ರಕಾರ 99,999 ರೂಪಾಯಿ ಆಗಿದೆ.
ಗೋದಾವರಿ ಎಬ್ಲು ಫಿಯೋ ಬ್ಯಾಟರಿ ಸಾಮರ್ಥ್ಯ
ಗೋದಾವರಿ ಎಬ್ಲು ಫಿಯೋ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 2 .52 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಸ್ಕೂಟರ್ ಸಂಪೂರ್ಣ ಚಾರ್ಜ್ ನಲ್ಲಿ 110 ಕಿಲೋಮೀಟರ್ ರೇಂಜ್ ಅನ್ನು ನೀಡುತ್ತದೆ. ಮನೆಯ ವಿದ್ಯುತ್ ನಲ್ಲಿ ಎಬ್ಲು ಫಿಯೋ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜ್ ಆಗಲು 5 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತದೆ.
ಗೋದಾವರಿ ಎಬ್ಲು ಫಿಯೋ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ
ಹೊಚ್ಚ ಹೊಸ ಗೋದಾವರಿ ಎಬ್ಲು ಫಿಯೋ ಎಲೆಕ್ಟ್ರಿಕ್ ಸ್ಕೂಟರ್ ಮೂರೂ ರೈಡಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ ಎಕಾನಮಿ, ನಾರ್ಮಲ್, ಹಾಗೂ ಪವರ್. ಈ ಸ್ಕೂಟರ್ ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಫ್ರಂಟ್ ಹಾಗೂ ರೇರ್ ಸಿಬಿಎಸ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.
ಇದರೊಂದಿಗೆ ಫ್ರಂಟ್ ಟೆಲಿಸ್ಕೋಪಿಕ್, ರೇರ್ ಡ್ಯುಯೆಲ್ ಟ್ಯೂಬ್ ಟ್ವಿನ್ ಶಾಕರ್ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿದೆ. ಹೈ-ರೆಸಲ್ಯೂಷನ್ LED ಹೆಡ್ ಲ್ಯಾಂಪ್ ಅನ್ನು ಒಳಗೊಂಡಿದೆ. ಇದರ ಜೊತೆಗೆ 12 ಇಂಚಿನ ಟ್ಯೂಬಲ್ಸ್ ಟೈಯಾರ್ಸ್, ಸೆಡ್ ಸ್ಟಾಂಡ್ ಸೆನ್ಸರ್ಸ್ ಇಂಡಿಕೇಟರ್ ಅನ್ನು ಪಡೆದುಕೊಂಡಿದೆ. ಹಾಗೆ ಸ್ಕೂಟರ್ ಸಯಾನ್ ಬ್ಲೂ, ವೈನ್ ರೆಡ್ ಹಾಗೂ ಟೆಲಿ ಗ್ರೇ ಸೇರಿದಂತೆ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.