Gold Hallmark: ಚಿನ್ನ ಖರೀದಿಸುವಾಗ ಹಾಲ್ಮಾರ್ಕ್ ಗೆ ಇಷ್ಟು ಹಣ ಕೊಡುವುದು ಕಡ್ಡಾಯ, ಕೇಂದ್ರ ಸರ್ಕಾರದ ಆದೇಶ.
ಚಿನ್ನ ಖರೀದಿಸುವ ಸಮಯದಲ್ಲಿ ಹಾಲ್ಮಾರ್ಕ್ ಸಂಖ್ಯೆಗೆ ಎಷ್ಟು ಹಣ ಕೊಡಬೇಕು...?
Gold Hallmarking Charges: ಸದ್ಯ ನವರಾತ್ರಿ ಹಗೂ ದೀಪಾವಳಿ ಹಬ್ಬ ಆರಂಭವಾಗಲಿದೆ. ಈ ಹಬ್ಬದ ಸಡಗರಕ್ಕೆ ಜನರು ಹೆಚ್ಚಾಗಿ ಚಿನ್ನವನ್ನು ಖರೀದಿಸಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿನ್ನದ ಮಾರಾಟ ಮತ್ತು ಖರೀದಿಗೆಂದು ಹೊಸ ಹೊಸ ನಿಯಮವನ್ನು ಪರಿಚಯಿಸುತ್ತಿದೆ.
ಇನ್ನು ದೇಶದಲ್ಲಿ ಜುಲೈ ನಿಂದಲೇ ಚಿನ್ನ ಖರೀದಿ ಮತ್ತು ಮಾರಾಟ ಮಾಡುವವರಿಗೆ ಹೊಸ ನಿಯಮ ಜಾರಿಯಾಗಿದೆ. Hallmark ಗೆ ಸಂಬಂಧಿಸಿದಂತೆ ಈಗಾಗಲೇ ನಿಯಮಗಳು ಬದಲಾಗಲಿವೆ.
ಚಿನ್ನ ಖರೀದಿ ಮತ್ತು ಮಾರಾಟದಲ್ಲಿ ಹೊಸ ನಿಯಮ
ಚಿನ್ನ ಖರೀದಿಸುವ ಹಾಗು ಮಾರಾಟ ಮಾಡುವ ಮುನ್ನ ಹಾಲ್ ಮಾರ್ಕ್ ಸಂಖ್ಯೆಯನ್ನು ಹೊಂದಿರುವ ಚಿನ್ನವನ್ನು ಮಾತ್ರ ಖರೀದಿಸಬೇಕು. ನಕಲಿ ಮತ್ತು ಶುದ್ಧ ಚಿನ್ನಗಳ ನಡುವಿನ ವ್ಯತ್ಯಾಸ ಚಿನ್ನ ಖರೀದಿದಾರರಿಗೆ ಹಾಗೂ ಮಾರಾಟಗಾರರಿಗೆ ತಿಳಿಯಲಿ ಎನ್ನುವ ಕಾರಣ ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. July 1 ರಿಂದ ದೇಶದದಾದ್ಯಂತ ಚಿನ್ನ ಖರೀದಿ ಮತ್ತು ಮಾರಾಟದಲ್ಲಿ ಹಾಲ್ ಮಾರ್ಕ್ ಚಿನ್ನ ಕಡ್ಡಾಯವಾಗಿದೆ. ಸದ್ಯ ಚಿನ್ನದ ಆಭರಣವನ್ನು ಹಾಲ್ ಮಾರ್ಕ್ ಮಾಡಲು ವಿಧಿಸುವ ಶುಲ್ಕದ ಬಗ್ಗೆ ವಿವರ ತಿಳಿಯೋಣ.
ಚಿನ್ನ ಖರೀದಿಯಲ್ಲಿ ಹಾಲ್ ಮಾರ್ಕ್ ಕಡ್ಡಾಯ
ಸದ್ಯ ಯಾವುದೇ ರೀತಿಯ ಚಿನ್ನವನ್ನು ಖರೀದಿಸುವಾಗ, ಅದರ ಮೇಲೆ ಹಾಲ್ ಮಾರ್ಕ್ ವಿಶಿಷ್ಟ ಗುರುತಿನ (HUID) ಸಂಖ್ಯೆಯನ್ನು ಹೊಂದಿರುವುದು ಅವಶ್ಯಕ. ಹಾಲ್ ಮಾರ್ಕಿಂಗ್ ಮೂಲಕ ಚಿನ್ನದ ಪರಿಶುದ್ಧತೆ ಏನೆಂದು ತಿಳಿಯಬಹುದಾಗಿದೆ. ಪ್ರತಿ ಹಾಲ್ ಮಾರ್ಕ್ ಮಾಡಿದ ಆಭರಣಗಳು 6 ಅಂಕಿಗಳ HUID ಹೊಂದಿರುತ್ತದೆ. ಈ ಅಂಕಿ ಮೂಲಕ ನೀವು ಬಿಐಎಸ್ ಕೇರ್ ಆಪ್ ಮೂಲಕ ಆನ್ ಲೈನ್ ನಲ್ಲಿ ಚಿನ್ನದ ಶುದ್ಧತೆಯನ್ನು ಪರಿಶೀಲಿಸಬಹುದು.
ಈ ರೀತಿಯಾಗಿ ಚಿನ್ನದ ಶುದ್ಧತೆಯನ್ನು ಪರಿಶೀಲಿಸಿಕೊಳ್ಳಬಹುದು
*ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ BIS Care Application ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಚಿನ್ನದ ಶುದ್ದತೆಯನ್ನು ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು.
*ಅಲ್ಲಿ ಭಾಷೆಯನ್ನು ಆರಿಸಿ, ನಂತರ ನೀವು ಚೆಕ್ ಪರವಾನಗಿ ವಿವರಗಳ ಆಯ್ಕೆಗೆ ಹೋಗಿ ಮತ್ತು ವೆರಿಫೈ HUID ಆಯ್ಕೆಯನ್ನು ಆರಿಸಿ.
*ಇದರ ನಂತರ ಇಲ್ಲಿ HUID ಸಂಖ್ಯೆಯನ್ನು ನಮೂದಿಸಿ ಮತ್ತು ಕೆಲವೇ ನಿಮಿಷಗಳಲ್ಲಿ ಆಭರಣಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಪಡೆಯಬಹುದು.
ಚಿನ್ನ ಖರೀದಿಸುವಾಗ ಹಾಲ್ ಮಾರ್ಕ್ ಸಂಖ್ಯೆಗೆ ಎಷ್ಟು ಹಣ ಕೊಡಬೇಕು…?
ಸದ್ಯ Bureau of Indian Standards (BIS) ಮಾರ್ಚ್ 4, 2022 ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಚಿನ್ನದ ಆಭರಣಗಳಲ್ಲಿನ ಹಾಲ್ ಮಾರ್ಕ್ ಶುಲ್ಕವನ್ನು 35 ರೂ.ನಿಂದ 45 ರೂ.ಗೆ ಹೆಚ್ಚಿಸಿದೆ. ಅದೇ ಸಮಯದಲ್ಲಿ, ಇದರ ಬೆಲೆ ಬೆಳ್ಳಿ ಆಭರಣಗಳ ಹಾಲ್ ಮಾರ್ಕ್ ಅನ್ನು 25 ರೂ. ನಿಂದ 35 ರೂ. ಗೆ ಹೆಚ್ಚಿಸಲಾಗಿದ್ದು ಚಿನ್ನಾಭರಣಕ್ಕೆ 200 ರೂ. ಗಳ ಸೇವಾ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಬೆಳ್ಳಿ ಆಭರಣಗಳಿಗೆ 150 ರೂ. ವಿಧಿಸಲಾಗಿದೆ.