ಇನ್ನೊಮ್ಮೆ ಹೊಸ ದಾಖಲೆ ನಿರ್ಮಿಸಿದ ಚಿನ್ನದ ಬೆಲೆ, ದಾಖಲೆಯ ಏರಿಕೆ ಕಂಡ ಚಿನ್ನದ ಬೆಲೆ.

ಯಾಕೋ ಗೊತ್ತಿಲ್ಲ ಏಪ್ರಿಲ್ ತಿಂಗಳು ಜನರ ಪಾಲಿಗೆ ಬಹಳ ಕೆಟ್ಟ ತಿಂಗಳು ಎಂದು ಹೇಳಿದರೆ ತಪ್ಪಾಗಲ್ಲ. ಒಂದು ಕಡೆ ದಿನದಿಂದ ದಿನಕ್ಕೆ ಬಾರಿ ಏರಿಕೆಯನ್ನ ಕಾಣುತ್ತಿರುವ ಕರೋನ ಸೋಂಕಿತರ ಸಂಖ್ಯೆ ಮತ್ತು ಇನ್ನೊಂದು ಕಡೆ ಕಳೆದ ಐದು ದಿನಗಳಿಂದ ಬಾರಿ ಏರಿಕೆಯನ್ನ ಕಾಣುತ್ತಿರುವ ಚಿನ್ನದ ಬೆಲೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಸ್ನೇಹಿತರೆ ಕಳೆದ ಐದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದ ಏರಿಕೆ ಆಗುತ್ತಿದ್ದು ಇದು ಬಡಜಜನರ ನಿದ್ದೆ ಕೆಡಿಸಿದೆ ಎಂದು ಹೇಳಬಹುದು. ಹೌದು ಏಪ್ರಿಲ್ ತಿಂಗಳ ಆರಂಭದಿಂದ ಏರಿಕೆಯಾನಂ ಕಾಣಲು ಆರಂಭಿಸಿದ ಚಿನ್ನದ ಬೆಲೆ ಇಂದಿನ ತನಕ ಕೂಡ ಏರಿಕೆಯ ಹಾದಿಯನ್ನ ಹಿಡಿದಿದ್ದು ಇದು ಜನರ ಶಾಕ್ ಗೆ ಕಾರಣವಾಗಿದೆ ಎಂದು ಹೇಳಬಹುದು.

ಇನ್ನು ಎಂದಿನಂತೆ ಇಂದು ಕೂಡ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದ ಏರಿಕೆ ಆಗಿದ್ದು ಜನರು ಚಿನ್ನದ ಬೆಲೆಯ ಮೇಲೆ ಬೇಸರವನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆ ಆಗಿದೆ ಮತ್ತು ಇಂದು ಮಾರುಕಟ್ಟೆಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಚಿನ್ನದ ಬೆಲೆಯಲ್ಲಿ ಈ ಏರಿಕೆ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಮಾರ್ಚ್ ತಿಂಗಳ ಅಂತ್ಯದಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4115 ರೂಪಾಯಿ ಆಗಿತ್ತು, ಆದರೆ ಏಪ್ರಿಲ್ ತಿಂಗಳ ಆರಂಭದಿಂದ ಬಾರಿ ಪ್ರಮಾಣದಲ್ಲಿ ಚಿನ್ನದ ಬೆಲೆ ಏರಿಕೆಯನ್ನ ಕಾಣುತ್ತಿದ್ದು ಇಂದು ದೇಶಿಯ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4380 ರೂಪಾಯಿ ಆಗಿದೆ.

gold info

ಕಳೆದ ಒಂದು ವಾರದಿಂದ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯ ಹಾದಿಯನ್ನ ಹಿಡಿದಿದ್ದು ಕಳೆದ ಒಂದು ವಾರದಲ್ಲಿ 22 ಕ್ಯಾರೆಟ್ ನ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 270 ರೂಪಾಯಿ ಆಗಿದೆ. ಇನ್ನು ಮಾರ್ಚ್ ತಿಂಗಳ ಅಂತ್ಯದಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 41150 ರೂಪಾಯಿ ಆಗಿತ್ತು, ಆದರೆ ಇಂದು ಮಾರುಕಟ್ಟೆಯಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 43800 ರೂಪಾಯಿ ಆಗಿದೆ ಮತ್ತು ಕಳೆದ ಒಂದು ವಾರದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 2650 ಏರಿಕೆ ಕಂಡಿದ್ದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 26000 ರೂಪಾಯಿ ಏರಿಕೆ ಆಗಿದೆ.

ಇನ್ನು ತಜ್ಞರ ಅಭಿಪ್ರಾಯದ ಪ್ರಕಾರ ದೇಶದಲ್ಲಿ ಕರೋನ ಮಹಾಮಾರಿ ದಿನದಿಂದ ದಿನಕ್ಕೆ ಏರಿಕೆಯ ಹಾದಿಯನ್ನ ಹಿಡಿಯುವುದರ ಜೊತೆಗೆ ದೇಶದ ಷೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆ ಕೂಡ ಚಿನ್ನದ ಬೆಲೆಯಲ್ಲಿನ ಏರಿಕೆಗೆ ಪ್ರಮುಖವಾದ ಕಾರಣ ಆಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇನ್ನು ದೇಶದಲ್ಲಿ ಚಿನ್ನದ ಬೆಲೆ ಇನ್ನಷ್ಟು ದಿನಗಳ ಕಾಲ ಏರಿಕೆಯ ಹಾದಿಯನ್ನ ಹಿಡಿಯಲಿದ್ದು ಚಿನ್ನವನ್ನ ಖರೀದಿ ಮಾಳ ಇದು ಸೂಕ್ತವಾದ ಸಮಯ ಅಲ್ಲ ಎಂದು ತಜ್ಞರು ಹೇಳಿದ್ದಾರೆ. ಏನೇ ಆಗಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಬಾರಿ ಪ್ರಮಾಣದಲ್ಲಿ ಏರಿಕೆಯನ್ನ ಕಾಣುತ್ತಿದ್ದು ಇದು ಬಡಜನರ ನಿದ್ದೆ ಕೆಡಿಸಿದೆ ಎಂದು ಹೇಳಬಹುದು. ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಏರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

gold info

Join Nadunudi News WhatsApp Group