Gold Loan: ಬ್ಯಾಂಕಿನಲ್ಲಿ ಚಿನ್ನ ಇಟ್ಟು ಸಾಲ ಪಡೆಯುವವರಿಗೆ RBI ನಿಂದ ಖಡಕ್ ಆದೇಶ, ಹೊಸ EMI ನಿಯಮ.

ಚಿನ್ನದ ಸಾಲಕ್ಕೆ EMI ಪಾವತಿಸದಿದ್ದರೆ ಏನಾಗುತ್ತದೆ..? RBI ರೂಲ್ಸ್ ತಿಳಿಯಿರಿ.

Gold Loan EMI Update: ಜನಸಾಮಾನ್ಯರಿಗೆ ಆರ್ಥಿಕ ಸಮಸ್ಯೆ ಉಂಟಾದಾಗ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯಲು ಮುಂದಾಗುತ್ತಾರೆ. ಇನ್ನು ಬ್ಯಾಂಕು ಅಥವಾ ಯಾವುದೇ ಹಣಕಾಸು ಸಂಸ್ಥೆ ಗ್ರಾಹಕರಿಗೆ ಸಾಲವನ್ನು ನೀಡುವ ಮುನ್ನ ಯಾವುದಾದದರು ಗ್ಯಾರಂಟಿಯನ್ನು ಇಡಲು ಹೇಳುತ್ತವೆ. ಆಸ್ತಿಪತ್ರ ಅಥವಾ ಬೆಲೆ ಬಾಳುವ ಆಭರಣಗಳನ್ನು ಅಡಮಾನವಾಗಿರಿಸಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಚಿನ್ನದ ಮೇಲಿನ ಸಾಲ Gold Loan
ಇನ್ನು ಸಾಲಗಾರರು ನಿಗದಿತ ಸಮಯಕ್ಕೆ ಬಡ್ಡಿ ಪಾವತಿಸಬೇಕು ಎನ್ನುವ ಕಾರಣಕ್ಕೆ ಬ್ಯಾಂಕುಗಳು ಈ ರೀತಿಯಗಾಗಿ ಚಿನ್ನವನ್ನು ಒತ್ತೆ ಇಟ್ಟುಕೊಳ್ಳುತ್ತದೆ. ಈ ರೀತಿ ಸಾಲವನ್ನು ಪಡೆಯುವುದು ಒಂದು ರೀತಿಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ. ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಸಾಲಕ್ಕೆ ಬಡ್ಡಿದರ ಕಡಿಮೆ ಇರುತ್ತದೆ. ಇತರ ಸಾಲಗಳಿಗೆ ಹೋಲಿಸಿದರೆ ಚಿನ್ನದ ಸಾಲದ ಅವಧಿ ಕಡಿಮೆ. ಈ ಅವಧಿಯು ಸಾಮಾನ್ಯವಾಗಿ 6 ​​ತಿಂಗಳಿಂದ 24 ತಿಂಗಳವರೆಗೆ ಇರುತ್ತದೆ.

Gold Loan EMI Rules
Image Credit: economictimes.indiatimes

ಚಿನ್ನದ ಸಾಲಕ್ಕೆ EMI ಪಾವತಿಸದಿದ್ದರೆ ಏನಾಗುತ್ತದೆ..?
ಗ್ರಾಹಕರು ಸಾಲದ ಮೊತ್ತವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಗ್ರಾಹಕರು ನಿಗದಿತ ಅವಧಿಯೊಳಗೆ ಹಣವನ್ನು ಮರುಪಾವತಿ ಮಾಡದಿದ್ದರೆ, ಬ್ಯಾಂಕ್ ಅಥವಾ NBFC ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತದೆ. ಸಾಲ ತೆಗೆದುಕೊಂಡವರಿಗೆ ಬ್ಯಾಂಕುಗಳು ಹಲವಾರು ಬಾರಿ ಜ್ಞಾಸೂಚನೆ ನೀಡುತ್ತದೆ. ಇದಾದ ನಂತರವೂ ಗ್ರಾಹಕರು ಹಣ ಪಾವತಿ ಮಾಡದಿದ್ದಲ್ಲಿ ಒತ್ತೆ ಇಟ್ಟಿರುವ ಚಿನ್ನವನ್ನು ಹರಾಜು ಹಾಕಲು ನಿರ್ಧರಿಸುತ್ತದೆ.

ಚಿನ್ನದ ಸಾಲಕ್ಕಿದೆ ಈ ಒಪ್ಪಂದ
ಗ್ರಾಹಕರು ಚಿನ್ನದ ಸಾಲವನ್ನು ತೆಗೆದುಕೊಂಡಾಗ ಬ್ಯಾಂಕ್ ಅಥವಾ NBFC ಸಾಲಗಾರರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತದೆ. ಒಪ್ಪಂದದ ನಿಯಮಗಳು ಸಾಲವನ್ನು ಮರುಪಾವತಿ ಮಾಡದಿದ್ದಲ್ಲಿ ಒತ್ತೆ ಇಟ್ಟಿರುವ ಚಿನ್ನವನ್ನು ಹರಾಜು ಮಾಡುವ ಆಯ್ಕೆಯನ್ನು ಒಳಗೊಂಡಿರುತ್ತದೆ. ಬ್ಯಾಂಕುಗಳು ಅಥವಾ NBFC ಗಳು ಚಿನ್ನವನ್ನು ಹರಾಜು ಮಾಡುವ ಮೂಲಕ ತಮ್ಮ ಸಾಲದ ಹಣವನ್ನು ಮರುಪಡೆಯಲು ಪ್ರಯತ್ನಿಸುತ್ತವೆ.

EMI Rules On Gold Loan
Image Credit: axisbank

ಚಿನ್ನದ ಹರಾಜನ್ನು ಈ ರೀತಿಯಾಗಿ ತಪ್ಪಿಸಿಕೊಳ್ಳಬಹುದು
ಬ್ಯಾಂಕುಗಳು ಹರಾಜಿನ ನಿಯಮಗಳು ಮತ್ತು ಷರತ್ತುಗಳನ್ನು ನಿಗದಿಪಡಿಸಿರುತ್ತದೆ. ಚಿನ್ನದ ಹರಾಜಿಗೆ ಎರಡು ವಾರಗಳ ಮೊದಲು ಬ್ಯಾಂಕ್ ಅಥವಾ NBFC ಈ ಬಗ್ಗೆ ಗ್ರಾಹಕರಿಗೆ ತಿಳಿಸುತ್ತದೆ. ಗ್ರಾಹಕರು ತನ್ನ ಒತ್ತೆ ಇಟ್ಟಿರುವ ಚಿನ್ನವನ್ನು ಹರಾಜು ಹಾಕಲು ಬಯಸದಿದ್ದರೆ, ಅವರು ಬ್ಯಾಂಕ್ ಅನ್ನು ಸಂಪರ್ಕಿಸಿ ಹಣವನ್ನು ನೀಡಿ ಚಿನ್ನವನ್ನು ಬಿಡಿಸಿಕೊಳ್ಳಬಹುದು. ಚಿನ್ನದ ಸಾಲದ ಮರುಪಾವತಿ ಆಗದಿದ್ದರೆ ಅದು ಹೆಚ್ಚಾಗಿ ಕ್ರೆಡಿಟ್ ಸ್ಕೊರ್ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.

Join Nadunudi News WhatsApp Group

Join Nadunudi News WhatsApp Group