Gold Price: ಸತತ ಏರಿಕೆಯ ನಡುವೆ ಇಂದು ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ, ಖರೀದಿಸಲು ಇದೆ ಉತ್ತಮ ಸಮಯ.
22 ಹಾಗೂ 24 ಕ್ಯಾರಟ್ ಚಿನ್ನದ ಇದಿಂದ ಬೆಲೆ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
Gold Price Down Today: ಚಿನ್ನದ ಬೆಲೆಯ (Gold Price) ಸತತ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಚಿನ್ನ ದಿನ ಕಳೆಯುತ್ತಿದ್ದಂತೆ ದುಬಾರಿ ಆಗುತ್ತಿದೆ. ಇದೀಗ ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಲಭಿಸಿದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ದಿನ ಕಳೆಯುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು ಆಗಸ್ಟ್ ನ ಮೊದಲ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು.
ಈ ವಾರದ ಚಿನ್ನದ ಬೆಲೆಯಲ್ಲಿನ ಬದಲಾವಣೆ ಆಭರಣ ಪ್ರಿಯರಿಗೆ ಖುಷಿ ನೀಡಿದೆ. ಆಗಸ್ಟ್ ಎರಡನೇ ವಾರದಿಂದ ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಾಣುತ್ತಿದೆ. 6000 ಗಡಿ ದಾಟಿದ್ದ ಚಿನ್ನದ ಬೆಲೆ ಮತ್ತೆ ಮೊದಲಿನ ಹಂತಕ್ಕೆ ತಲುಪುತ್ತಿದೆ. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಸ್ಥಗಿತವಾಗಿತ್ತು. ಯಾವುದೇ ರೀತಿಯ ಇಳಿಕೆ ಅಥವಾ ಏರಿಕೆ ಕಂಡು ಬರಲಿಲ್ಲ. ಸ್ಥಗಿತಗೊಂಡ ಚಿನ್ನದ ಬೆಲೆ ಇಂದು ಮತ್ತೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ.
22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ (22 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ನಿನ್ನೆ 5455 ರೂ. ಆಗಿದೆ. ನಿನ್ನೆಗಿಂತ ಇಂದು 10 ರೂ ಕಡಿಮೆಯಾಗಿ ಇಂದು 5,445 ರೂ. ತಲುಪಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 43640 ರೂ. ಇದ್ದು ಇಂದು 43,560 ರೂ. ಆಗಿದೆ. ಎಂಟು ಗ್ರಾಂ ಚಿನ್ನದಲ್ಲಿ ಇಂದು 80 ರೂ. ಇಳಿಕೆಯಾಗಿದೆ.
ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 54,550 ಇದ್ದು ಇಂದು 54,450 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 100 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 5,45,500 ಇದ್ದು ಇಂದು 5,44,500 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 1,000 ರೂ. ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ನಿನ್ನೆ 5,951 ರೂ. ಆಗಿದೆ. ನಿನ್ನೆಗಿಂತ ಇಂದು 11 ರೂ ಕಡಿಮೆಯಾಗಿ ಇಂದು 5,940 ರೂ. ತಲುಪಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 47,608 ಇದ್ದು, ಇಂದು 47,520 ರೂ. ಆಗಿದೆ.
ಎಂಟು ಗ್ರಾಂ ಚಿನ್ನದಲ್ಲಿ ಇಂದು 88 ರೂ. ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 59,510 ಇದ್ದು, ಇಂದು 59,400 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 110 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 5,95,100 ಇದ್ದು, ಇಂದು 5,94,000 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 1,100 ರೂ. ಇಳಿಕೆಯಾಗಿದೆ.