Gold Rate: ಆಗಸ್ಟ್ ಆರಂಭದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ, ಚಿನ್ನದ ಖರೀದಿಗೆ ಇದು ಉತ್ತಮ ಸಮಯ.
ಜುಲೈ ತಿಂಗಳಲ್ಲಿ ಸತತ ಏರಿಕೆಕಂಡ ಬಂಗಾರದ ಬೆಲೆ, ಆಗಸ್ಟ್ ತಿಂಗಳ ಆರಂಭದಲ್ಲಿ ಇಳಿಕೆ ಕಾಣುತ್ತಿದ್ದೆ.
Gold Rate Down In August: ಇನ್ನು ಜುಲೈ ತಿಂಗಳ ಆರಂಭದಿಂದ ಚಿನ್ನದ ಬೆಲೆಯಲ್ಲಿ (Gold Rate) ಹೆಚ್ಚಿನ ಏರಿಕೆ ಕಂಡು ಬಂದಿದೆ. ಜುಲೈನಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆ ಕಂಡು ಬಂದಿರಲಿಲ್ಲ.ಚಿನ್ನ ದಿನೇ ದಿನೇ ದುಬಾರಿಯಾಗುತ್ತಿದೆ. ದಿನಕಳೆಯುತ್ತಿದ್ದಂತೆ ಚಿನ್ನದ ಖರೀದಿ ಜನಸಾಮಾನ್ಯರಿಗೆ ಕಷ್ಟವಾಗಿದೆ.
ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚುತ್ತಿರುವ ಕಾರಣ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚುತ್ತಿದೆ. ಆದರೆ ಇದೀಗ ಜುಲೈ ಮುಗಿದು ಆಗಸ್ಟ್ ಆರಂಭವಾಗಿದ್ದು ಆಗಸ್ಟ್ ತಿಂಗಳು ಆಭರಣ ಪ್ರಿಯರಿಗೆ ಖುಷಿ ನೀಡಿದೆ. ತಿಂಗಳ ಆರಂಭದಲ್ಲಿನ ಚಿನ್ನದ ಬೆಲೆಯ ಇಳಿಕೆಯು ಜನರಿಗೆ ಹೆಚ್ಚಿನ ಲಾಭ ನೀಡಲಿದೆ. ಇನ್ನು ಇಂದಿನ ಬೆಲೆಯಲ್ಲಿ ಚಿನ್ನದ ಖರೀದಿ ಉತ್ತಮವಾಗಿದೆ.
ಆಗಸ್ಟ್ ನ ಆರಂಭದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ
ಚಿನ್ನದ ದರ ನಿನ್ನೆ ಕೂಡ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿತ್ತು. ಸತತ ಏರಿಕೆ ಕಾಣುತ್ತಿರುವ ಚಿನ್ನ ಈ ಹೊಸ ತಿಂಗಳ ಆರಂಭದಲ್ಲಿ ಇಳಿಕೆ ಕಾಣುತ್ತಿದೆ. ಇಂದು ಚಿನ್ನವನ್ನು ಸ್ವಲ್ಪ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು 6000 ಗಡಿ ತಲುಪಲು ಹತ್ತಿರವಾಗುತ್ತಿರುವ ಚಿನ್ನದ ಬೆಲೆ ಇಂದು 150 ರೂ. ಇಳಿಕೆ ಕಂಡಿದೆ.
22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ನಿನ್ನೆ 5 ,510 ರೂ. ಆಗಿದೆ. ನಿನ್ನೆಗಿಂತ ಇಂದು 15 ರೂ ಕಡಿಮೆಯಾಗಿ ಇಂದು 5,495 ರೂ. ತಲುಪಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 44,080 ರೂ. ಇದ್ದು ಇಂದು 43,960 ರೂ. ಆಗಿದೆ. ಎಂಟು ಗ್ರಾಂ ಚಿನ್ನದಲ್ಲಿ ಇಂದು 120 ರೂ. ಇಳಿಕೆಯಾಗಿದೆ.
ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 55,150 ಇದ್ದು ಇಂದು 54,950 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 150 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 5,51,000 ಇದ್ದು ಇಂದು 5,49,500 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 1,500 ರೂ. ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ನಿನ್ನೆ 6,011 ರೂ. ಆಗಿದೆ. ನಿನ್ನೆಗಿಂತ ಇಂದು 16 ರೂ ಕಡಿಮೆಯಾಗಿ ಇಂದು 5,995 ರೂ. ತಲುಪಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 48,088 ಇದ್ದು, ಇಂದು 74,960 ರೂ. ಆಗಿದೆ. ಎಂಟು ಗ್ರಾಂ ಚಿನ್ನದಲ್ಲಿ ಇಂದು 128 ರೂ. ಇಳಿಕೆಯಾಗಿದೆ.
ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 60,110 ಇದ್ದು, ಇಂದು 59,950 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 160 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 6,01,100 ಇದ್ದು, ಇಂದು 5,95,500 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 1,600 ರೂ. ಇಳಿಕೆಯಾಗಿದೆ.