Gold Rate: ಆಭರಣ ಪ್ರಿಯರಿಗೆ ಬೇಸರದ ಸುದ್ದಿ, ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ.
ಗಣೇಶ ಹಬ್ಬದ ಖುಷಿಯಲ್ಲಿದ್ದ ಜನರಿಗೆ ಬೇಸರದ ಸುದ್ದಿ, ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ.
Gold Price Hike Today: ದೇಶದೆಲ್ಲೆಡೆ ಗಣೇಶ ಚತುರ್ಥಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣೇಶನ ಹಬ್ಬಕ್ಕಾಗಿ ದೇಶದ ಜನತೆಗೆ ಕಾಯುತಿದ್ದು, ನಿನ್ನೆಯಿಂದ ದೇಶದೆಲ್ಲೆಡೆ ಬಹಳ ಅದ್ದೂರಿಯಾಗಿ ಗಣೇಶೋತ್ಸವ ನಡೆಯುತ್ತಿದೆ. ನಿನ್ನೆ ಕೂಡ ಗಣೇಶನ ಹಬ್ಬಕ್ಕೆ ಜನರು ಚಿನ್ನದ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದರು.
ಹಬ್ಬದ ಸಮಯದಲ್ಲಿ ಚಿನ್ನದ ಬೆಲೆ ಇಳಿಕೆ ಆಗುತ್ತದೆ ಎನ್ನುವ ಜನರ ಭರವಸೆ ಇಂದು ಕೂಡ ಸುಳ್ಳಾಗಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ನಿನ್ನೆ 55,000 ದಲ್ಲಿ ಲಭ್ಯವಿದ್ದ ಚಿನ್ನದ ಬೆಲೆ ಇಂದು 55,200 ರ ಗಡಿ ತಲುಪಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 150 ರೂ. ಏರಿಕೆಯಾಗುವ ಮೂಲಕ ಚಿನ್ನ ಜನಸಾಮಾನ್ಯರ ಕೈಗೆ ಸಿಗದಂತಾಗಿದೆ.
ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 15 ರೂ ಏರಿಕೆಯಾಗಿ 5,520 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,505 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 120 ರೂ ಏರಿಕೆಯಾಗಿ 44,160 ರೂ. ತಲುಪಿದೆ.
ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 44,040 ರೂ. ಗೆ ಲಭ್ಯವಿತ್ತು.ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ ಏರಿಕೆಯಾಗಿ 55,200 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 55,050 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,500 ರೂ ಏರಿಕೆಯಾಗಿ 5,52,000 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,50,500 ರೂ. ಗೆ ಲಭ್ಯವಿತ್ತು.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 17 ರೂ ಏರಿಕೆಯಾಗಿ 6,022 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 6,008 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 136 ರೂ ಏರಿಕೆಯಾಗಿ 48,176 ರೂ. ತಲುಪಿದೆ.
ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 48,064 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 170 ರೂ ಏರಿಕೆಯಾಗಿ 60,220 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 60,080 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,700 ರೂ ಏರಿಕೆಯಾಗಿ 6,02,200 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 6,00,800 ರೂ. ಗೆ ಲಭ್ಯವಿತ್ತು.