Ads By Google

Gold Price Forecast: ಈ ವರ್ಷದ ಚಿನ್ನ ಖರೀದಿಯ ಪ್ಲ್ಯಾನ್ ಮಾಡಿದವರಿಗೆ ಬೇಸರ ಸುದ್ದಿ, ಐತಿಹಾಸಿಕ ಏರಿಕೆ ಕಾಣಲಿದೆ ಚಿನ್ನದ ಬೆಲೆ.

Gold Price Forecast

Image Source: Mint

Ads By Google

Gold Price Forecast 2024 2023 ರ ವಿದಾಯದೊಂದಿಗೆ 2024 ಆರಂಭವಾಗಿದೆ. ಕಳೆದ ವರ್ಷ 2023 ರಲ್ಲಿ ಜನರು ಹೆಚ್ಚಿನ ಹಣದುಬ್ಬರತೆಯ ಪರಿಸ್ಥಿಯನ್ನು ಎದುರಿಸಿದ್ದರು. ಹಣದುಬ್ಬರತೆಯ ಜೊತೆಗೆ ದೇಶದಲ್ಲಿ ಹೆಚ್ಚಿನ ಬೇಡಿಕೆ ಇರುವಂತಹ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಚಿನ್ನದ ಬೆಲೆಯ ಸಾಲು ಸಾಲು ಏರಿಕೆಯ ಪರಿಣಾಮ ಬಡವರ ಕೈಗೆ ಚಿನ್ನ ಎಟುಕದಂತಾಗಿದೆ. ಜನರು ಹೆಚ್ಚಾಗಿ ತಮ್ಮ ಉಳಿತಾಯದ ಹಣವನ್ನು ಚಿನ್ನ ಖರೀದಿಸಲು ಬಯಸುತ್ತಾರೆ. ಆದರೆ ಎಷ್ಟೇ ಹಣ ಉಳಿತಾಯ ಮಾಡಿಟ್ಟರು ಕೂಡ ಚಿನ್ನದ ಬೆಲೆ ಏರಿಕೆಯ ಕಾರಣ ಚಿನ್ನ ಖರೀದಿಗೆ ಜನರಿಗೆ ಕಷ್ಟವಾಗುತ್ತಿದೆ.

Image Credit: Live Mint

ಈ ವರ್ಷದ ಚಿನ್ನ ಖರೀದಿಯ ಪ್ಲ್ಯಾನ್ ಮಾಡಿದವರಿಗೆ ಬೇಸರ ಸುದ್ದಿ
2023 ವರ್ಷದ ಕೊನೆಯ ತಿಂಗಳು ಕೂಡ ಚಿನ್ನ ದುಬಾರಿಯಾಗುತ್ತ ಹೋಗುತ್ತಿದೆ. ಚಿನ್ನದ ಬೆಲೆ ಸತತ ಏರಿಕೆ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟದ ಮೇಲೆ ಒಂದಿಷ್ಟು ಪರಿಣಾಮ ಬೀರುತ್ತಿದೆ. ವಾರದಲ್ಲಿ ಒಂದೊಂದು ದಿನ ಚಿನ್ನದ ಬೆಲೆ ಇಳಿಕೆಯಾದರೆ ಹೆಚ್ಚಿನ ದಿನ ಏರಿಕೆಯೇ ಆಗುತ್ತದೆ. ದಿನದಲ್ಲಿ ಒಮ್ಮೆಲೇ 100 ಗ್ರಾಂ ನಲ್ಲಿ 7000 ರೂ. ಗಳು ಏರಿಕೆಯಾಗಿರುವ ಉದಾಹರಣೆಗಳು ಇವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿರುವ ಕಾರಣ ದೇಶಿಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಅದರಲ್ಲೂ ಇನ್ನೇನು ಮದುವೆಯ ಸೀಸನ್ ಹಬ್ಬದ ಸೀಸನ್ ಆರಂಭವಾಗಲಿದೆ. ಶುಭಕಾರ್ಯಕ್ಕೆ ಜನರು ಹೆಚ್ಚಾಗಿ ಚಿನ್ನವನ್ನು ಖರೀದಿಸಲು ಬಯಸುತ್ತಾರೆ. ಚಿನ್ನದ ಬೆಲೆ ಎಷ್ಟೇ ಏರಿಕೆಯಾದರು ಕೂಡ ಮದುವೆಯ ಶುಭಾರಂಭಕ್ಕೆ ಚಿನ್ನದ ಖರೀದಿ ಅಗತ್ಯವಾಗಿರುತ್ತದೆ. ಹೀಗಿರುವಾಗಲೇ ಚಿನ್ನದ ಬೆಲೆ ಏರಿಕೆಯಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

Image Credit: Theweek

ಐತಿಹಾಸಿಕ ಏರಿಕೆ ಕಾಣಲಿದೆ ಚಿನ್ನದ ಬೆಲೆ
ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವ ಸಮಯದಲ್ಲಿ ಚಿನ್ನ ದುಬಾರಿಯಾಗುತ್ತದೆ. ಸದ್ಯ ಆಭರಣ ಪ್ರಿಯರಿಗೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಹೊಸ ವರ್ಷದಲ್ಲಿ ಚಿನ್ನ ಖರೀದಿಸುವ ಆಸೆಗೂ ಕೂಡ ಬ್ರೇಕ್ ಬೀಳಲಿದೆ. ಹೊಸ ವರ್ಷದಲ್ಲಿ ಚಿನ್ನದ ಬೆಲೆ ಹತ್ತು ಗ್ರಾಮ್ ಗೆ ಬರೋಬ್ಬರಿ 70,000 ರೂ. ಏರಿಕೆ ಆಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ

2024 ರಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂ ನಲ್ಲಿ 70,000 ರೂ. ತಲುಪಲಿದೆ ಎಂದು ಅಂದಾಜಿಸಲಾಗಿದೆ. 2023 ರಲ್ಲಿ ಶೇ. 15 ರಷ್ಟು ಕಾರ್ಯಕ್ಷಮತೆಯನ್ನು ಆಧರಿಸಿ ಸಂಕೀರ್ಣವಾದ ಬೃಹತ್ ಆರ್ಥಿಕ ಪರಿಸರದೊಳಗೆ ಚಿನ್ನ 2024 ರಲ್ಲಿಯೂ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ವಿಶ್ವದ ಆರ್ಥಿಕ ಸ್ಥಿತಿ ಹದೆಗೆಟ್ಟರೆ ಇನ್ನಷ್ಟು ಚಿನ್ನದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಚಿನ್ನದ ಬೆಲೆ ಏರಿಕೆ ಬಡಜನರ ಸಂಕಷ್ಟವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in